ದೇಶ ಕಟ್ಟಿದ್ದು ಕಾಂಗ್ರೆಸ್, ಹಾಳು ಮಾಡಿದ್ದು ಬಿಜೆಪಿ: ಪ್ರೊ.ರಾಜು ಆಲಗೂರ

KannadaprabhaNewsNetwork |  
Published : Apr 09, 2024, 12:48 AM IST
ಕಲಕೇರಿಯಲ್ಲಿ ಭಾನುವಾರ ನಡೆದ ಜಿಪಂ ವ್ಯಾಪ್ತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಜು ಆಲಗೂರ | Kannada Prabha

ಸಾರಾಂಶ

ದೇಶವನ್ನು ಬುಡದಿಂದ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ, ದೇಶವನ್ನು ಹಾಳುಗೆಡವಿ ಪಕೋಡ ಮಾರಲು ಹಚ್ಚಿದ್ದು ಮೋದಿಯವರ ಬಿಜೆಪಿ ಸರ್ಕಾರ ಎಂದು ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶವನ್ನು ಬುಡದಿಂದ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ, ದೇಶವನ್ನು ಹಾಳುಗೆಡವಿ ಪಕೋಡ ಮಾರಲು ಹಚ್ಚಿದ್ದು ಮೋದಿಯವರ ಬಿಜೆಪಿ ಸರ್ಕಾರ ಎಂದು ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ ಆರೋಪಿಸಿದರು.

ದೇವರ ಹಿಪ್ಪರಗಿ ಮತಕ್ಷೇತ್ರದ ಕಲಕೇರಿಯಲ್ಲಿ ಭಾನುವಾರ ನಡೆದ ಜಿಪಂ ವ್ಯಾಪ್ತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನೀವೆಲ್ಲ ಸೌಖ್ಯದಿಂದ ಇರಬೇಕಾದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಜನರ ಜೀವನ ಸುಧಾರಿಸಬೇಕಾದರೆ ನಮ್ಮ ಪಕ್ಷಕ್ಕೆ ಮತ ನೀಡಿ ಎಂದರು.

ರಾಜ್ಯ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ನಮಗೆ ಮತ ಕೇಳಲು ನೈತಿಕತೆ ಇದೆ. ಬಿಜೆಪಿಯವರ ಸುಳ್ಳಿನ ಮಾತಗಳನ್ನು ನಂಬಬೇಡಿ. ರಮೇಶ ಜಿಗಜಿಣಗಿಯವರು ಮೂವತ್ತು ವರ್ಷ ಲೋಕಸಭೆ ಸದಸ್ಯರಾಗಿ ಏನು ಮಾಡಿದ್ದಾರೆ ಹೇಳಿ? ಇದು ಬದಲಾವಣೆಯ ಸಮಯ. ಅವರನ್ನು ಬದಲಿಸಿ, ನನಗೆ ಬೆಂಬಲಿಸಿ ಎಂದು ಮನವಿ ಮಾಡಿದರು.ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಮುಖಂಡರಾದ ಸುಭಾಶ ಛಾಯಾಗೋಳ, ಬಿ.ಎಸ್‌. ಪಾಟೀಲ ಯಾಳಗಿ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡ್ಡಮನಿ, ಗೌರಮ್ಮ ಮುತ್ತತ್ತಿ, ಲಲಿತಾ ದೊಡ್ಡಮನಿ, ಸರಿತಾ ನಾಯಕ, ರಮೀಜಾ ನದಾಫ್, ಬಶೀರ್ ಬೇಪಾರಿ, ಬಾಳಾಸಾಹೇಬ ಪಾಟೀಲ, ಬಾಪುಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಪರಶುರಾಮ ದಿಂಡವಾರ, ರಮೇಶ ಗುಬ್ಬೇವಾಡ, ದಾವಲಸಾಬ ನಾಯ್ಕೋಡಿ, ದೇವೇಂದ್ರ ಜಂಬಗಿ, ಕಾಶಿನಾಥ ತಳವಾರ, ರವೀಂದ್ರ ಸುಧಾಕರ, ಶಿವರಾಯ ಮೋಪಗಾರ, ರಾಜ ಅಹ್ಮದ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌
ಖಮೇನಿ ಆತ್ಮಕ್ಕೆ ಶಾಂತಿ ದೊರೆಯಲಿ, ಅಮೆರಿಕ ದಾಳಿ ಖಂಡನಾರ್ಹ: ಸಿಎಂ