ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತಯಾಚನೆ

KannadaprabhaNewsNetwork |  
Published : Mar 29, 2024, 12:51 AM IST
27ಕೆಡಿವಿಜಿ6-ದಾವಣಗೆರೆ ತಾ. ಆವರಗೊಳ್ಳ ಗ್ರಾಮದ ತಮ್ಮ ತವರಿನ ಮನೆದೇವರಾದ ಶ್ರೀ ವೀರಭದ್ರೇಶ್ವರಸ್ವಾಮಿ ದರ್ಶನದ ನಂತರ ಗ್ರಾಮದ ಮುಖಂಡರು, ಹಿರಿಯರ, ಗ್ರಾಮಸ್ಥರ ಬಳಿ ಮತಯಾಚಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ. ...........27ಕೆಡಿವಿಜಿ7-ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಡಿವಾಳ ಮಾಚಿದೇವ ಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಸನ್ಮಾನಿಸಿ, ಗೌರವಿಸಿದರು. | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಬುಧವಾರ ತಮ್ಮ ತವರು ಮನೆ ದೇವರಾದ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಕನ್ನೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದು ಪ್ರಚಾರ ಕೈಗೊಂಡಿದ್ದಾರೆ.

- ಮನೆ ದೇವರ ದರ್ಶನ, ಮಠಗಳಿಗೆ ಭೇಟಿ, ವಿಕಲಚೇತನರಿಗೂ ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸ್ಥಳೀಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಬುಧವಾರ ತಮ್ಮ ತವರು ಮನೆ ದೇವರಾದ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಕನ್ನೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದು ಪ್ರಚಾರ ಕೈಗೊಂಡರು. ಚಿಕ್ಕಪ್ಪ ಕಕ್ಕರಗೊಳ್ಳ ಕೆ.ಜಿ.ಬಸವನಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕುಟುಂಬ ಸದಸ್ಯರೊಂದಿಗೆ ಉಭಯ ದೇವಸ್ಥಾನಗಳಲ್ಲಿ ಡಾ.ಪ್ರಭಾ ಅವರು ದರ್ಶನ ಪಡೆದರು. ಗ್ರಾಮದ ಮುಖಂಡರು, ಹಿರಿಯರು, ಗ್ರಾಮಸ್ಥರ ಬಳಿ ಮತಯಾಚಿಸಿದರು.

ಅನಂತರ ಮಡಿವಾಳ ಮಾಚಿದೇವ ಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ಮಾಡಿ, ಆಶೀರ್ವಾದ ಪಡೆದರು. ವಿವಿಧ ಸಮಾಜದ ಮುಖಂಡರಾದ ಎಚ್.ಜಯಣ್ಣ, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ಟಿ.ಶ್ರೀನಿವಾಸ, ಜಿ.ಸಿ.ಮಂಜಪ್ಪ, ಪ್ರವೀಣ, ಅರ್ಜುನ, ವಿನಾಯಕ, ಪರಶುರಾಮ, ರಾಘವೇಂದ್ರ, ಎಂ.ರಾಜು, ಈಶಣ್ಣ, ವೀರೇಶ, ಪರಮೇಶ, ದೇವರಾಜ, ಎಸ್.ರವಿಕುಮಾರ, ಶಿವಮೂರ್ತಿ, ರಾಮಚಂದ್ರಪ್ಪ, ನಾಗರಾಜಪ್ಪ, ವೀರಭದ್ರಪ್ಪ, ಕುಮಾರ ಭೋವಿ, ಭೀಮಪ್ಪ, ಕರಿಯಪ್ಪ, ರಾಮಜ್ಜ, ಮಂಜುನಾಥ, ಎಂ.ನಾಗೇಂದ್ರಪ್ಪ, ಮಹಲಿಂಗಸ್ವಾಮಿ, ಎಚ್‌.ಜಿ.ಉಮೇಶ, ರುದ್ರಪ್ಪ, ಸಿದ್ದೇಶ, ಡ್ರೈವರ್ ಪಕ್ಕೀರಪ್ಪ, ಅಣ್ಣಪ್ಪ ಕರಾಟೆ, ರಾಜಕುಮಾರ ಇತರರು ಇದ್ದರು.

ನಗರದ ನಿವಾಸಕ್ಕೆ ಭೇಟಿ ನೀಡಿದ್ದ ವಿಕಲಚೇತನರು, ಮಹಿಳೆಯರು, ಯುವಜನರು, ಹಿರಿಯ ನಾಗರಿಕರಿಗೆ ಡಾ. ಪ್ರಭಾ ಅವರು ತಮಗೇ ಬೆಂಬಲ ನೀಡುವಂತೆ ಮನವಿ ಮಾಡಿದರು.

- - - -27ಕೆಡಿವಿಜಿ6:

ದಾವಣಗೆರೆ ತಾಲೂಕು ಆವರಗೊಳ್ಳ ಗ್ರಾಮದಲ್ಲಿ ಡಾ.ಪ್ರಭಾ ಅವರು ತವರುಮನೆ ದೇವರಾದ ಶ್ರೀ ವೀರಭದ್ರೇಶ್ವರಸ್ವಾಮಿ ದರ್ಶನ ಪಡೆದು, ಗ್ರಾಮದ ಮುಖಂಡರು, ಹಿರಿಯರು, ಗ್ರಾಮಸ್ಥರ ಬಳಿ ಮತಯಾಚಿಸಿದರು.

- - - -27ಕೆಡಿವಿಜಿ7:

ದಾವಣಗೆರೆ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಮಡಿವಾಳ ಮಾಚಿದೇವ ಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಸನ್ಮಾನಿಸಿ, ಗೌರವಿಸಿದರು. ವಿವಿಧ ಮುಖಂಡರು, ಭಕ್ತರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌