ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಸೋಂಪುರ ಹೋಬಳಿಯ ಕಂಬಾಳು ಮಠ ಹಾಗೂ ಶಿವಗಂಗೆ ಹೊನ್ನಮ್ಮಗವಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ದಕ್ಷಿಣಕಾಶಿ ಶಿವಗಂಗೆ ಹಲವಾರು ಮಠಾಧೀಶರು ತಪಸ್ಸು ಮಾಡಿದ ತಪೋಭೂಮಿ, ಇಲ್ಲಿಗೆ ಭೇಟಿ ನೀಡಿದ್ದು ಸಂತಸವಾಗಿದೆ. ಮೂರು ಮಠದ ಪೂಜ್ಯರು ಗೆಲುವು ಸಾಧಿಸಿ ಎಂದು ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದವೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.ಯುವಕರು ಹೆಚ್ಚಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಸ್ಥಳೀಯ ನೆಲಮಂಗಲ ಶಾಸಕರು ಕ್ರಿಯಾಶೀಲವಾಗಿರುವುದು ಸಹಕಾರಿಯಾಗಿದೆ, ಧರ್ಮ-ಅಧರ್ಮ, ಸತ್ಯ-ಮಿಥ್ಯಗಳ ನಡುವಿನ ಚುನಾವಣೆ ಇದಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಮಾಧ್ಯಮಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿತ್ತು. ಆದರೆ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುವ ಕೆಲವು ಮಾಧ್ಯಮಗಳನ್ನು ಕಡಿವಾಣ ಹಾಕಲು ಹೊರಟಿದ್ದಾರೆ ಎಂದರು.
ಸ್ವಾಮೀಜಿಯವರೊಂದಿಗೆ ಗೌಪ್ಯ ಮಾತುಕತೆ:
ಇದೇ ವೇಳೆ ಕಂಬಾಳು ಮಠ, ಹೊನ್ನಮ್ಮಗವಿ ಮಠ, ಬಂಡೆ ಮಠಗಳಿಗೆ ಭೇಟಿ ಮಠಾಧ್ಯಕ್ಷರ ಆಶೀರ್ವಾದ ಪಡೆದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್. ಗೌಡ, ಬ್ಲಾಕ್ ಅಧ್ಯಕ್ಷ ನಾಗರಾಜು, ಅಗಳಕುಪ್ಪೆ ಗೋವಿಂದರಾಜು, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ನಾರಾಯಣಗೌಡ, ಮಿಲ್ಟ್ರೀ ಮೂರ್ತಿ, ಪುರಸಭಾ ಸದಸ್ಯ ಪ್ರದೀಪ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಅಂಚೆಮನೆ ಪ್ರಕಾಶ್, ತಟ್ಟೆಕೆರೆ ಬಾಬು, ಯೋಗನಂದೀಶ್, ಗ್ರಾಪಂ ಸದಸ್ಯ ಮನು ಪ್ರಸಾದ್, ಯೂತ್ ಕಾಂಗ್ರೆಸ್ ನ ಕಿರಣ್ ಕುಮಾರ್, ಮನುಕುಮಾರ್ ಹಾಗೂ ಹಲವು ಕಾರ್ಯಕರ್ತರಿದ್ದರು.