ಕುಟುಂಬದರೊಂದಿಗೆ ಸಮಯ ಕಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ

KannadaprabhaNewsNetwork |  
Published : May 09, 2024, 01:00 AM IST
ಕುಟುಂಬದವರು ಹಾಗೂ ಆಪ್ತರೊಂದಿಗೆ ಮಾತುಕತೆಯಲ್ಲಿ ನಿರತ ಅಂಜಲಿ ನಿಂಬಾಳ್ಕರ್  | Kannada Prabha

ಸಾರಾಂಶ

ಮತದಾನ ಮುಗಿದಿರುವುದರಿಂದ ಸದ್ಯ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಎಲ್ಲರೂ ಮುಳುಗಿದ್ದಾರೆ‌. ಹೀಗಾಗಿ ಖಾನಾಪುರದ ಡಾ. ಅಂಜಲಿ ಅವರ ನಿವಾಸಕ್ಕೆ ಪಕ್ಷದ ಮುಖಂಡರು, ಆಪ್ತರು, ಕುಟುಂಬಸ್ಥರು ಭೇಟಿ ನೀಡಿ ಮಾತಿಗಿಳಿಯುತ್ತಿದ್ದಾರೆ.

ಕಾರವಾರ: ಕಳೆದ ಎರಡು ತಿಂಗಳಿನಿಂದ ದಣಿವರಿಯದೆ ಇಡೀ ಉತ್ತರಕನ್ನಡ ಕ್ಷೇತ್ರ ಸಂಚರಿಸಿ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಸದ್ಯ ಖಾನಾಪುರದ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ನಂತರದಿಂದ ಉತ್ತರಕನ್ನಡ ಕ್ಷೇತ್ರಾದ್ಯಂತ ನಾಯಕರು, ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಕಾರ್ಯನಿರತರಾಗಿದ್ದರು. ಕುಟುಂಬದವರು, ಆಪ್ತರಿಗೂ ಸಮಯ ನೀಡದೆ ಚುನಾವಣೆಯ ಪ್ರಚಾರದಲ್ಲಿ ಮಗ್ನರಾಗಿದ್ದರು.

ಮಂಗಳವಾರವಷ್ಟೇ ಮತದಾನ ಮುಗಿದಿದೆ. ಮತದಾರರು ತಮ್ಮ ಅಭಿಪ್ರಾಯಗಳನ್ನು ಮತಯಂತ್ರದಲ್ಲಿ ಭದ್ರವಾಗಿಸಿದ್ದಾರೆ. ಜೂ. 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನದ ದಿನದವರೆಗೆ ಮತಗಟ್ಟೆ ಓಡಾಟ, ಕಾರ್ಯಕರ್ತರ ಭೇಟಿ, ದೇಗುಲಗಳ ಭೇಟಿ ನಡೆಸುತ್ತಿದ್ದ ಡಾ. ಅಂಜಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ.

ಮತದಾನ ಮುಗಿದಿರುವುದರಿಂದ ಸದ್ಯ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಎಲ್ಲರೂ ಮುಳುಗಿದ್ದಾರೆ‌. ಹೀಗಾಗಿ ಖಾನಾಪುರದ ಡಾ. ಅಂಜಲಿ ಅವರ ನಿವಾಸಕ್ಕೆ ಪಕ್ಷದ ಮುಖಂಡರು, ಆಪ್ತರು, ಕುಟುಂಬಸ್ಥರು ಭೇಟಿ ನೀಡಿ ಮಾತಿಗಿಳಿಯುತ್ತಿದ್ದಾರೆ. ಬಂದವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅಲ್ಲದೇ ಪತ್ರಿಕೆಗಳ ಓದುವತ್ತ ಹೆಚ್ಚು ಗಮನ ಹರಿಸುತ್ತಿರುವುದು ಕಂಡುಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!