ಬಳಗಾನೂರ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ

KannadaprabhaNewsNetwork |  
Published : Jul 3, 2025 11:52 PM IST
ಬೀಳಗಿ ಪಟ್ಟಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯರನ್ನು ಮುಖಂಡರ ಬಗ್ಗೆ ರೈತ ಮುಖಂಡ ಸಿದ್ದಪ್ಪ ಬಳಗಾನೂರ ಕಿಳಾಗಿ ಮಾತನಾಡಿರುವ ವೀಡಿಯೋ ಹರಿದಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷದ ಹಿರಿಯರ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವ ಸಿದ್ದಪ್ಪ ಬಳಗಾನೂರ ಹೇಳಿಕೆ ಖಂಡಿಸಿದ ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುವ ನಿಮ್ಮ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳುವಂತೆ ಖಡಕ್‌ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಕಾಂಗ್ರೆಸ್ ಪಕ್ಷದ ಹಿರಿಯರ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವ ಸಿದ್ದಪ್ಪ ಬಳಗಾನೂರ ಹೇಳಿಕೆ ಖಂಡಿಸಿದ ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುವ ನಿಮ್ಮ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳುವಂತೆ ಖಡಕ್‌ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷದ ಹಿರಿಯರ, ಮುಖಂಡರ ಬಗ್ಗೆ ರೈತ ಮುಖಂಡ ಸಿದ್ದಪ್ಪ ಬಳಗಾನೂರ ಕೀಳಾಗಿ ಮಾತನಾಡಿರುವ ವಿಡಿಯೋ ಹರಿದಾಡುತ್ತಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕರೆದ ಪತ್ರಿಕಾಗೋಷ್ಠಿಯಲ್ಲಿ ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಜಂಟಿಯಾಗಿ ಮಾತನಾಡಿದ ಅವರು, ಹಿಂದುಳಿದವರಿಗೆ, ದಲಿತರಿಗೆ ಅನ್ಯಾಯ ಆಗಿದೆ. ಹಿಂದುಳಿದ ವರ್ಗದ ಮುಖಂಡರನ್ನು ತುಳಿಯುವ ಪ್ರಯತ್ನ ನಡೆದಿದೆಂದು ಹೇಳುವ ಅವರಿಗೆ ತಿಳಿದಿರಲಿ ಜಿಲ್ಲೆಯಲ್ಲಿ ಬಾದಾಮಿ, ಬಾಗಲಕೋಟೆ ಕ್ಷೇತ್ರಗಳ ಶಾಸಕರು ಹಿಂದುಳಿದ ವರ್ಗದವರು. ಹೀಗೆ ಅನೇಕ ಕ್ಷೇತ್ರದಲ್ಲಿ ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ, ಅವರ್ಗದವರಿಗೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರ ನೀಡುವುದರ ಜೊತೆ ಅವರ ಬೆಳವಣೆಗೆಯಲ್ಲೂ ಜೊತೆ ನಿಂತಿದೆ ಎಂದು ಗುಡುಗಿದರು.

ನಮ್ಮ ಪಕ್ಷದ ಬಗ್ಗೆ ಮತ್ತು ನಮ್ಮ ನಾಯಕರುಗಳ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಒಂದು ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲುವ ತಾಕತ್ತ ಇಲ್ಲ. ಇವರು ನಮ್ಮ ಪಕ್ಷದ ಬಗ್ಗೆ ಮಾತನಾಡಲು ಇವರಿಗೆ ನಮ್ಮ ಪಕ್ಷಕ್ಕೆ ಯಾವ ಸಂಬಂಧವೂ ಇಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡ ಶಿವಪ್ಪ ಗಾಳಿ ಮಾತನಾಡಿ, ಪ್ರವೀಣ ಪಾಟೀಲರು ಹಾಗೂ ಹಣಮಂತ ಕಾಖಂಡಕಿ ಜಗಳ ಪಕ್ಷದ ಜಗಳವಲ್ಲ, ಅದು ಅವರ ವೈಯಕ್ತಿಕ ಜಗಳ. ಅದನ್ನು ಪಕ್ಷಕ್ಕೆ ಅಂಟಿಸುವುದು ಸರಿಯಲ್ಲ. ಹಣಮಂತ ಕಾಖಂಡಕಿ 20 ವರ್ಷಗಳ ಹಿಂದೆ ಏನಿದ್ದರು? ಇವಾಗ ಪಕ್ಷದಿಂದ ಏನಾಗಿದ್ದರೇ ಎನ್ನುವುದು ನೆನಪಿರಲಿ. ಪ್ರವೀಣ ಪಾಟೀಲರು ತಲೆ ತಲಾಂತರದಿಂದಲೂ ಶ್ರೀಮಂತ ಕುಟುಂಬದವರು ಇಬ್ಬರ ವೈಯಕ್ತಿಕ ಜಗಳವನ್ನು ಬಗೆ ಹರಿಸಲು ನಮ್ಮ ಶಾಸಕರಾದ ಜೆ.ಟಿ.ಪಾಟೀಲರು, ಮಾಜಿ ಸಚಿವ ಎಸ್.ಆರ್.ಪಾಟೀಲರು ಇದ್ದಾರೆ. ಇದನ್ನೆಲ್ಲ ಕೇಳಲು ಸಿದ್ದಪ್ಪ ಬಳಗಾನೂರ ಯಾರು ಎಂದು ಪ್ರಶ್ನಿಸಿದರು.

ಸಿದ್ದಪ್ಪ ಬಳಗಾನೂರ ಅವರೇ ನಾಲಿಗೆ ಹಿಡಿತದಲ್ಲಿರಲಿ. ಒಬ್ಬ ರೈತ ಮುಖಂಡನಾಗಿ ಹೇಗೆ ಮಾಡಬೇಕೆನ್ನುವ ಬಗ್ಗೆ ಎಚ್ಚರವಿರಲಿ. ನೀವು ಹಣದ ಆಸೆಗಾಗಿ ನಮ್ಮ ನಾಯಕರುಗಳಿಗೆ ಅವಮಾನ ಮಾಡಿದರೇ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ಬಿ.ಆರ್.ಸೊನ್ನದ, ಮಲ್ಲು ಹೋಳಿ ಹಾಗೂ ಕಾಂಗ್ರೆಸ್‌ ದಲಿತ ಮುಖಂಡ ಮಹಾದೇವ ಹಾದಿಮನಿ ಮಾತನಾಡಿ, ಪ್ರವೀಣ ಪಾಟೀಲ ಹಾಗೂ ಹಣಮಂತ ಕಾಖಂಡಕಿ ಇಬ್ಬರು ನಮ್ಮ ಕಾಂಗ್ರೆಸ್ ಪಕ್ಷದವರು. ಅವರ ನಡುವಿನ ಜಗಳ ನಮ್ಮ ಕುಟುಂಬದ ಜಗಳವಿದ್ದಂತೆ. ಇದನ್ನು ನಮ್ಮ ಜನಾನುರಾಗಿ ನಾಯಕರುಗಳಾದ ಮಾಜಿ ಸಚಿವ ಎಸ್.ಆರ್.ಪಾಟೀಲ ಹಾಗೂ ಶಾಸಕ ಜೆ.ಟಿ.ಪಾಟೀಲರನ್ನು ಒಳಗೊಂಡು ಎಲ್ಲ ನಾಯಕರು ಸೇರಿ ಜಗಳವನ್ನು ಬಗೆಹರಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅನಿಲ ಗಚ್ಚಿನಮನಿ, ಅಶೋಕ ಜೋಶಿ, ಸಿದ್ದು ಮೇಟಿ, ಹಣಮಂತ ಜಲ್ಲಿ, ಶಿವಾನಂದ ಮಾದರ, ನಾಗೇಶ ಶಿಡ್ಲೇನ್ನವರ, ಶಿವು ಚಲವಾದಿ ಇದ್ದರು.

PREV