ಹಾನಗಲ್ಲ: ಅಪರಾಧ ಕೃತ್ಯ, ವ್ಯಕ್ತಿ ಪತ್ತೆಗೆ ಪೊಲೀಸ್ ಧೈರ್ಯ, ಕರ್ತವ್ಯನಿಷ್ಠೆ, ಸಾಹಸದ ಕ್ರಮದ ಸಂದರ್ಭದಲ್ಲಿ ರಾಜಕೀಯ ಹಾಗೂ ಇತರ ರೀತಿಯ ಅನಗತ್ಯ ಹಸ್ತಕ್ಷೇಪಗಳು ಆಗದಿದ್ದರೆ ಎಲ್ಲ ರೀತಿಯಲ್ಲಿ ಕಾನೂನು, ಸುವ್ಯವಸ್ಥೆ ಮೂಲಕ ನೆಮ್ಮದಿಗೆ ಸಾಕ್ಷಿಯಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಜನಸ್ನೇಹಿ ಪೊಲೀಸ್ ನಮಗೆ ಬೇಕಾಗಿದೆ. ಪೊಲೀಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಲಿ ಎಂದರು.
ಮಾಜಿ ಪುರಸಭಾಧ್ಯಕ್ಷ ಎಂ.ಬಿ. ಕಲಾಲ, ವಕೀಲ ರಾಜು ಗೌಳಿ ಮಾತನಾಡಿದರು. ಮಾಜಿ ಪುರಸಭಾಧ್ಯಕ್ಷ ಎಲ್ಲಪ್ಪ ಕಿತ್ತೂರ, ಅನಿತಾ ಡಿಸೋಜಾ ಮಾತನಾಡಿದರು. ಎಸ್. ಅಮರೇಂದ್ರ, ಕೆ.ಟಿ. ಕಲಗೌಡ್ರ, ಆರ್.ಬಿ. ಪಾಟೀಲ, ಜಾಫರ್‌ಸಾಬ ಖೇಣಿ, ಮಹಾಲಿಂಗಪ್ಪ ಅಕ್ಕಿವಳ್ಳಿ, ಮಂಜಣ್ಣ ನಾಗಜ್ಜನವರ, ರಾಜಣ್ಣ ಸಿಂಧೂರ, ರವಿ ದೇಶಪಾಂಡೆ, ಆದರ್ಶ ಶೆಟ್ಟಿ, ಗುರುರಾಜ ನಿಂಗೋಜಿ, ರಾಜು ಶಿರಪಂಥಿ, ಅರುಣ ಕಿತ್ತೂರ, ಮುನ್ನಾ ಬೇಗ್, ಚಂದ್ರು ಮಲಗುಂದ, ಕೃಷ್ಣ ಬಾಗಲೆ ಇದ್ದರು.