ಜ್ಞಾನೇಶಕುಮಾರ್‌ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

KannadaprabhaNewsNetwork |  
Published : Oct 15, 2026, 03:00 AM IST
೧೪ಎಂಎಲ್ ಪಿ೦೧ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರದೇಶಾದ್ಯಂತ ಲಕ್ಷಾಂತರ ಜೀವಂತ ಮತದಾರರ ಹೆಸರುಗಳು ಮತದಾನ ಪಟ್ಟಿಯಿಂದ ಕಾಣೆಯಾದ ಲೋಪದ ಹಿನ್ನೆಲೆ ಭಾರತ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ತೇರದಾಳ ಯೂತ್‌ ಕಾಂಗ್ರೆಸ್ ಘಟಕ ಮತ್ತು ಮಹಾಲಿಂಗಪುರ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ದೇಶಾದ್ಯಂತ ಲಕ್ಷಾಂತರ ಜೀವಂತ ಮತದಾರರ ಹೆಸರುಗಳು ಮತದಾನ ಪಟ್ಟಿಯಿಂದ ಕಾಣೆಯಾದ ಲೋಪದ ಹಿನ್ನೆಲೆ ಭಾರತ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ತೇರದಾಳ ಯೂತ್‌ ಕಾಂಗ್ರೆಸ್ ಘಟಕ ಮತ್ತು ಮಹಾಲಿಂಗಪುರ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿ, ಮಾತನಾಡಿದ ಅವರು, ಇತ್ತೀಚಿನ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ (ಎಸ್ಐಆರ್ ) ನಮ್ಮ ದೇಶದ ಅನೇಕ ಜೀವಂತ ಮತದಾರರ ಹೆಸರುಪಟ್ಟಿಯಿಂದ ಕಾಣೆಯಾಗಿವೆ. ಮತದಾರರ ಪಟ್ಟಿ ಸರಿ ಇಲ್ಲದಿದ್ದರೆ, ಸ್ಥಳೀಯ ಸಂಸ್ಥೆ ಚುನಾವಣೆ ನ್ಯಾಯ ಸಮ್ಮತವಾಗಿ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಈ ಲೋಪದಲ್ಲಿ ಚುನಾವಣೆ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಭಾಗಿಯಾಗಿದ್ದಾರೆಂದು ಆಗ್ರಹಿಸಿ ಚನ್ನಮ್ಮ ವೃತ್ತದಿಂದ ಘೋಷಣೆ ಕೂಗುತ್ತಾ ಪುರಸಭೆಯವರೆಗೆ ಪಾದಯಾತ್ರೆ ಮಾಡಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹಾಲಿಂಗ ಮಾಳಿ, ತೇರದಾಳ ಬ್ಲಾಕ್ ಯೂತ್‌ ಕಾಂಗ್ರೆಸ್ ಅಧ್ಯಕ್ಷ ಲಿಯಾಸ ಯಾದವಾಡ, ರಬಕವಿ ಬನಹಟ್ಟಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಶೇಖ, ಮಹಾಲಿಂಗಪುರ ಯೂಥ್ ಕಾಂಗ್ರೆಸ್ ಅಧ್ಯಕ್ಷ ಜೀತು ಕೇಸರಗೊಪ್ಪ, ಕಾಂಗ್ರೆಸ್ ಮುಖಂಡರಾದ ಯಲ್ಲನಗೌಡ ಪಾಟೀಲ, ಮುಸ್ತಾಕ್ ಚಿಕ್ಕೋಡಿ, ಅಶೋಕ ಅಂಗಡಿ, ಮಲ್ಲಪ್ಪ ಸಿಂಗಾಡಿ, ಬಸವರಾಜ ರಾಯರ, ಬಲವಂತಗೌಡ ಪಾಟೀಲ, ಮಲ್ಲಪ್ಪ ಬಾವಿಕಟ್ಟಿ,ವಿಠ್ಠಲ ಸಂಶಿ, ಅರ್ಜುನ್ ಬಂಡಿವಡ್ಡರ, ಸತ್ಯಪ್ಪ ಹುದ್ದಾರ, ದಾದಾ ಕರೋಶಿ, ಶಂಕರ ಹುಕ್ಕೇರಿ, ರಸುಲ್ ಸಾಂಗ್ಲಿಕರ್, ಆನಂದ ಬಂಡಿ, ಎಂ.ಡಿ. ಆನಂದ, ಮಂಜುನಾಥ ಭಾವಿಕಟ್ಟಿ, ಸಮರ್ಥ್ ಕೊಣ್ಣೂರ, ಮಹಾಲಿಂಗ ಪಾಟೀಲ, ಪರಶುರಾಮ ಮೇತ್ರಿ, ಶ್ರೀಶೈಲ ದೊಡಮನಿ, ಸೊಹಿಲ್ ಪೆಂಡಾರಿ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಕುಸ್ತಿ: ಬೆಳಗಾವಿ ತಂಡ ಮೇಲುಗೈ
ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ