ಮಹಿಳೆಯರಲ್ಲಿ ದೈವಿಕ ಶಕ್ತಿ ಕಾಣಿ

KannadaprabhaNewsNetwork |  
Published : Oct 15, 2026, 03:00 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ಮಹಿಳೆಯರಿಗೆ ಗೌರವ ನೀಡುವುದನ್ನು ಮಕ್ಕಳಿಗೆ ಪಾಲಕರು ಕಲಿಸಬೇಕು. ಮನೆಯ ಹೆಣ್ಮಕ್ಕಳನ್ನು ಗೌರವಿಸುವುದರೊಂದಿಗೆ ಮನೆಗೆ ಸೊಸೆಯಾಗಿ ಬರುವ ಹೆಣ್ಣಿಗೂ ಗೌರವ ನೀಡುವ ಸಂಸ್ಕಾರ ಬೆಳೆಸಬೇಕು. ನವರಾತ್ರಿ ದಸರಾ ಹಬ್ಬದಲ್ಲಿ ದೇವಿ ಪೂಜಿಸುವ ನಾವು ಮಹಿಳೆಯರಲ್ಲಿಯೂ ದೈವಿಕ ಶಕ್ತಿ ಕಾಣಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರ.ಕಾರ್ಯದರ್ಶಿ ಹಾಗೂ ದೇವಿಕಾ ಸುಬ್ಬರಾವ್ ಫೌಂಡೇಶನ್‌ ಅಧ್ಯಕ್ಷೆ ಪಲ್ಲವಿ ನಾಡಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಹಿಳೆಯರಿಗೆ ಗೌರವ ನೀಡುವುದನ್ನು ಮಕ್ಕಳಿಗೆ ಪಾಲಕರು ಕಲಿಸಬೇಕು. ಮನೆಯ ಹೆಣ್ಮಕ್ಕಳನ್ನು ಗೌರವಿಸುವುದರೊಂದಿಗೆ ಮನೆಗೆ ಸೊಸೆಯಾಗಿ ಬರುವ ಹೆಣ್ಣಿಗೂ ಗೌರವ ನೀಡುವ ಸಂಸ್ಕಾರ ಬೆಳೆಸಬೇಕು. ನವರಾತ್ರಿ ದಸರಾ ಹಬ್ಬದಲ್ಲಿ ದೇವಿ ಪೂಜಿಸುವ ನಾವು ಮಹಿಳೆಯರಲ್ಲಿಯೂ ದೈವಿಕ ಶಕ್ತಿ ಕಾಣಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರ.ಕಾರ್ಯದರ್ಶಿ ಹಾಗೂ ದೇವಿಕಾ ಸುಬ್ಬರಾವ್ ಫೌಂಡೇಶನ್‌ ಅಧ್ಯಕ್ಷೆ ಪಲ್ಲವಿ ನಾಡಗೌಡ ಹೇಳಿದರು.

ಸ್ಥಳೀಯ ಬ್ರಹ್ಮಕುಮಾರಿ ಆಶ್ರಮದಲ್ಲಿ ನವರಾತ್ರಿ ಉತ್ಸವ, ಶಕ್ತಿಜಾಗೃತಿ ಕಾರ್ಯಕ್ರಮ ಹಾಗೂ ಚೈತನ್ಯ ದುರ್ಗಾಮಾತೆ ದರ್ಶನದ ಆಧ್ಯಾತ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಭೂ ತಾಯಿ ತಾಯಿಯೆಂದು ಆರಾಧಿಸುವ ನಮ್ಮ ಸಂಸ್ಕೃತಿ ನಿಜವಾದ ಆಶಯವನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕು. ಕೇವಲ ಹಬ್ಬದ ದಿನಗಳಲ್ಲಿ ದೇವಿಗೆ ಪೂಜೆ ಸಲ್ಲಿಸುವುದಷ್ಟೇ ಅಲ್ಲದೇ ಪ್ರತಿಯೊಬ್ಬ ಮಹಿಳೆಯರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಹೆಣ್ಣು ಮತ್ತು ಗಂಡು ಎಂಬ ಬೇಧ-ಭಾವ ಮಾಡದೇ ಇಬ್ಬರಿಗೂ ಸಮಾನವಾದ ಅವಕಾಶ, ಗೌರವ ಹಾಗೂ ಪ್ರೋತ್ಸಾಹ ನೀಡುವ ಮನೋಭಾವವನ್ನು ಪ್ರತಿಯೊಂದು ಕುಟುಂಬ ಬೆಳೆಸಿಕೊಳ್ಳಬೇಕು. ಮಹಿಳೆಯರು ಉನ್ನತವಾದ ಸ್ಥಾನ, ಮಾನಗಳನ್ನು ಅಲಂಕರಿಸಲು ಕುಟುಂಬದ ಬೆಂಬಲ ಅಗತ್ಯವಾಗಿದ್ದು ಸಮಾಜದಲ್ಲಿ ನಿಜವಾದ ಸಮಾನತೆ ಸಾಧಿಸಲು ಬದಲಾವಣೆ ಪ್ರತಿಯೊಂದು ಮನೆಯಿಂದಲೇ ಆರಂಭವಾಗಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಇಂದಿನ ವೇದಿಕೆ ಅಲಂಕರಿಸಿರುವುದು ಸಂತೋಷದಾಯಕ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ವೇದಿಕೆಗಳು ವಿಸ್ತಾರಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉನ್ನತ ಹುದ್ದೆಗಳನ್ನು ಅಲಕಂರಿಸುವಂತಾಗಬೇಕು. ಮನೆಯಲ್ಲಿರುವ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸುವದರ ಜೊತೆಗೆ ಸಮಾನರೀತಿಯಲ್ಲಿ ಜವಾಬ್ದಾರಿಗಳನ್ನು ನೀಡುವ ಮೂಲಕ ಅವರನ್ನು ಪಾಲಕರು ಪ್ರೋತ್ಸಾಹಿಸಬೇಕು. ಹೆಣ್ಣುಮಕ್ಕಳಿಗೆ ಶಿಕ್ಷಣ, ಉದ್ಯೋಗ, ನಾಯಕತ್ವದ ಕ್ಷೇತ್ರಗಳಲ್ಲಿ ಮುನ್ನಡೆಯಲು ಪೋಷಕರು ಅವಕಾಶ ಕಲಿಸಬೇಕೆಂದು ತಮ್ಮ ಬಾಲ್ಯದ ಅನುಭವವನ್ನು ಸ್ಮರಿಸಿದರು.ಬ್ರಹ್ಮಕುಮಾರಿಯ ರಾಜಯೋಗಿನಿ ಶೋಭಾ ಅಕ್ಕನವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮಜ್ಞಾನ ಮತ್ತು ರಾಜಯೋಗದಿಂದ ಸುಖ-ಶಾಂತಿ ಸಾಧ್ಯ. ಪರಮಾತ್ಮನ ಸ್ಮರಣೆಯಿಂದ ಜೀವನದಲ್ಲಿ ನೆಮ್ಮದಿ ಇರುತ್ತದೆ. ಪರಮಪಿತ ಪರಮಾತ್ಮನು ಭೂಮಿಯಲ್ಲಿ ಅವತರಿಸಿ ಆತ್ಮಗಳಿಗೆ ಸತ್ಯಜ್ಞಾನದ ಮಾರ್ಗವನ್ನು ತೋರಿಸುತ್ತಾನೆ. ನಮ್ಮನ್ನು ನಾವು ದೇಹವೆಂದು ಭಾವಿಸದೆ ಆತ್ಮವೆಂದು ಅರಿತು ಪರಮಾತ್ಮನನ್ನು ಸ್ಮರಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಅನುಭವಿಸಲು ಸಾಧ್ಯ ಎಂದರು.ಕಲಿಯುಗದ ಜೀವನದಲ್ಲಿ ಅನೇಕ ರೀತಿಯ ದುಃಖ, ಕಷ್ಟ ಹಾಗೂ ಮಾನಸಿಕ ಒತ್ತಡಗಳನ್ನು ಎದುರಿಸುತ್ತಿರುವ ಮನುಷ್ಯನಿಗೆ ಆತ್ಮಜ್ಞಾನ ಮತ್ತು ರಾಜಯೋಗದ ಅಭ್ಯಾಸವು ಶಾಂತಿಯ ಮಾರ್ಗವನ್ನು ತೋರಿಸುತ್ತದೆ. ಪರಮಾತ್ಮನ ಸ್ಮರಣೆಯನ್ನು ಕೇವಲ ಧ್ಯಾನದ ಸಮಯಕ್ಕೆ ಸೀಮಿತಗೊಳಿಸದೇ ಬೆಳಗ್ಗೆ ಎದ್ದಾಗ, ಕೆಲಸ ಮಾಡುವಾಗ ಹಾಗೂ ರಾತ್ರಿ ಮಲಗುವ ಮುನ್ನವೂ ಅಭ್ಯಾಸ ಮಾಡಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು. ಪ್ರ.ಬ್ರ.ಕು ನಿಡಗುಂದಿ ಸಂಚಾಲಕರಾದ ರಾಜಯೋಗಿನಿ ಮಂಜುಳಾ ಅಕ್ಕನವರು ಮಾತನಾಡಿದರು. ವೇದಿಕೆಯ ಮೇಲೆ ಉತ್ಕರ್ಷ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಪಲ್ಲವಿ ನಾಗೂರ, ಬಸವ ಇಂಟರ್‌ನ್ಯಾಶನಲ್ ಶಾಲೆಯ ಪ್ರಾಚಾರ್ಯರಾದ ಡಾ.ಪ್ರಭಾ ಚಿನಿವಾರ, ಶಶಿಕಲಾ ಕಡಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸಜ್ಜಲಶ್ರೀ ಮಲಗಿಹಾಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ಮಹಿಳೆಯರಿಂದ ದಾಂಡಿಯಾ ನೃತ್ಯಗಳು ಜರುಗಿದವು.ಹಲವು ವರ್ಷಗಳ ಕಾಲ ಮನೆಯ ವಾತಾವರಣದಲ್ಲಿಯೇ ಇದ್ದ ನಾನು ಕಳೆದ ನಾಲ್ಕೈದು ವರ್ಷಗಳಿಂದ ಸಾರ್ವಜನಿಕ ಜೀವನ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದೇನೆ. ಹೊರಗಿನ ಪ್ರಪಂಚಕ್ಕೆ ಬಂದಾಗ ಸಮಾಜದ ವಿವಿಧ ಮುಖಗಳನ್ನು ಅರಿಯಲು ಸಾಧ್ಯವಾಗುತ್ತದೆ. ಮಹಿಳೆಯರ ಪ್ರತಿಭೆಯನ್ನು ಗುರುತಿಸುವುದು ಮಹಿಳೆಯರ ಬಗ್ಗೆ ಗೌರವ ಬೆಳೆಸುವುದು ಇಂದಿನಿಂದಲೇ ಪ್ರತಿಯೊಂದು ಮನೆಯಲ್ಲಿ ಆರಂಭವಾಗಲಿ.

-ಪಲ್ಲವಿ ನಾಡಗೌಡ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರ.ಕಾರ್ಯದರ್ಶಿ ಹಾಗೂ ದೇವಿಕಾ ಸುಬ್ಬರಾವ್ ಫೌಂಡೇಶನ್‌ ಅಧ್ಯಕ್ಷೆ.ಪ್ರತಿ ಮನೆಯ ಮಹಿಳೆಯರು ಲಕ್ಷ್ಮೀಯ ಸ್ವರೂಪವಾಗಿದ್ದಾರೆ. ಮಹಿಳೆಯರಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾದಾಗ ಕುಟುಂಬದ ವಾತಾವರಣವೂ ಸುಂದರವಾಗಿ, ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ. ಮನೆಯ ಮಹಿಳೆಯರು ಆಧ್ಯಾತ್ಮಿಕ ಜ್ಞಾನ ಪಡೆದು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕುಟುಂಬದ ಸುಖ-ಶಾಂತಿಗೆ ಸಹಕಾರಿಯಾಗುತ್ತದೆ. ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಪರಮಾತ್ಮನ ಸತ್ಯಜ್ಞಾನ ಹಾಗೂ ರಾಜಯೋಗದ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರು ಕೇಂದ್ರಕ್ಕೆ ಭೇಟಿ ನೀಡಿ ಜ್ಞಾನ ಪಡೆದುಕೊಳ್ಳಬೇಕು.

-ಶೋಭಾ ಅಕ್ಕನವರು,

ಬ್ರಹ್ಮಕುಮಾರಿಯ ರಾಜಯೋಗಿನಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಕುಸ್ತಿ: ಬೆಳಗಾವಿ ತಂಡ ಮೇಲುಗೈ
ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ