ಅಂಬೇಡ್ಕರ್‌ ಪಾರ್ಥಿವ ಶರೀರಕ್ಕೆ ಜಾಗ ನೀಡದ ಕಾಂಗ್ರೆಸ್‌: ಕೋಟ

KannadaprabhaNewsNetwork | Published : Jun 17, 2024 1:35 AM

ಸಾರಾಂಶ

2004ರಿಂದ ಕಾರ್ಕಳ ಕ್ಷೇತ್ರದ ಮತದಾರ ಬಿಜೆಪಿಯನ್ನು ಬಿಟ್ಟುಕೊಟ್ಟಿಲ್ಲ. ಈ ಬಾರಿಯೂ ಕಾರ್ಕಳದಲ್ಲಿ 42000 ಅಂತರದ ಫಲಿತಾಂಶ ಲಭಿಸಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು.

ಕನ್ನಡಪ್ರಭವಾರ್ತೆ ಕಾರ್ಕಳ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಿ ಅವರ ಬದುಕನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಆದರೆ ಅಂಬೇಡ್ಕ‌ರ್ ಅವರ ಪಾರ್ಥಿವ ಶರೀರಕ್ಕೆ 10 ಅಡಿ ಜಾಗ ಕೂಡ ಕಾಂಗ್ರೆಸ್ ಕೊಡಲಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಾರ್ಕಳ ಮಂಜುನಾಥ ಪೈ ಸಭಾಂಗಣದ ದಿ. ನರಸಿಂಹ ಪುರಾಣಿಕ್ ವೇದಿಕೆಯಲ್ಲಿ, ಕಾರ್ಕಳ ಬಿಜೆಪಿ ಪಕ್ಷದ ವತಿಯಿಂದ ನೂತನ ವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ರಾಜಧರ್ಮದಲ್ಲಿ ಚುನಾವಣೆಯನ್ನು ಎದುರಿಸುವ ಬದಲು ಬಿಜೆಪಿ ಪಕ್ಷದ ಬಗ್ಗೆ ಅಪಪ್ರಚಾರದಲ್ಲೇ ತೊಡಗಿಕೊಂಡರು. ಮೋದಿ ಮೇಲಿನ ವಿಶ್ವಾಸದಿಂದ ಕರಾವಳಿಯ ಜಿಲ್ಲೆಗಳಲ್ಲಿ ಜನ ಅಪಪ್ರಚಾರಕ್ಕೆ ಕಿವಿಗೊಡಲಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದರು ಎಂದರು.

ಶಾಸಕ ಹಾಗೂ ಮಾಜಿ ಸಚಿವ ವಿ ಸುನಿಲ್ ಕುಮಾರ್ ಮಾತನಾಡಿ, ದೇಶದಲ್ಲಿ 2004 ರಿಂದ ಕಾರ್ಕಳ ಕ್ಷೇತ್ರದ ಮತದಾರ ಬಿಜೆಪಿಯನ್ನು ಬಿಟ್ಟು ಕೊಟ್ಟಿಲ್ಲ . ಈ ಬಾರಿಯು ಕಾರ್ಕಳ ಕ್ಷೇತ್ರದಲ್ಲಿ 42000 ಅಂತರದ ಫಲಿತಾಂಶ ವು ಕಾರ್ಕಳದಲ್ಲಿ ಸಿಕ್ಕಿದೆ. ಅದರ ಹಿಂದಿನ ಕಾರ್ಯಕರ್ತರ ತಯಾರಿ ಉತ್ತಮ ಸಹಕಾರವಾಗಿದೆ. ಲೋಕಸಭಾ ಚುನಾವಣೆ ಮುಗಿದಿದ್ದು ಈಗ ರಾಜ್ಯ ಕಾಂಗ್ರೆಸ್ ಪಕ್ಷದ ಲ್ಲಿ ತಲ್ಲಣಗಳು ಉಂಟಾಗುತ್ತಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರಭಾಕರ್ ಸರ್ಜಿ ಮಾತನಾಡಿ ಕಾಂಗ್ರೆಸ್ ಪಕ್ಷ ದ ಬಿಟ್ಟಿ ಭಾಗ್ಯ ಪೊಳ್ಳು ಭರವಸೆಗಳ ನಡುವೆಯು ಬಿಜೆಪಿ ಪಕ್ಷ ಗೆದ್ದಿದೆ. ಕಾರ್ಯಕರ್ತರ ಗೆಲುವಾಗಿದೆ.‌ ಕಾರ್ಯಕರ್ತರ ಶ್ರಮವೇ ಚುನಾವಣೆ ಗೆಲುವಿಗೆ ಯಶಸ್ಸಿಗೆ ಕಾರಣ. ಈ ಪದವೀಧರರ ಕ್ಷೇತ್ರ ಅನಾಥ ಕ್ಷೇತ್ರವಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ . ಸಂಘಟನೆ ಆಧಾರಿತ ಪಕ್ಷವಾಗಿದೆ ಎಂದರು.

ಹಿರಿಯ ಮುಖಂಡರಾದ ಪ್ರಭಾಕರ್ ಕಾಮತ್, ಎಂ‌ ಕೆ ವಿಜಯ ಕುಮಾರ್, ಕೆ.ಪಿ ಶೆಣೈ, ಮಣಿರಾಜ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಜಯರಾಂ ಸಾಲ್ಯಾನ್, ಉದಯ್ ಎಸ್ ಕೋಟ್ಯಾನ್, ಸುರೇಶ್ ಶೆಟ್ಟಿ ಶಿವಪುರ, ಬೋಳ ಸತೀಶ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಮಹವೀರ ಹೆಗ್ಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ, ರಾಜ್ಯ ಯುವಮೋರ್ಚ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಮೊದಲಾದವರು ಇದ್ದರು.

ಅಗ್ನಿ ವೀರ್ ಗೆ ಆಯ್ಕೆಯಾದ ದುರ್ಗಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ ನಾಯಕ್

ಸ್ವಾಗತಿಸಿದರು. ಜ್ಯೋತಿ ರಮೇಶ್ ಪ್ರಾರ್ಥಿಸಿದರು. ಕುಕ್ಕುಂದೂರು ರವೀಂದ್ರ ಶೆಟ್ಟಿ ನಿರೂಪಿಸಿದರು.

Share this article