ಕನ್ನಡಪ್ರಭ ವಾರ್ತೆ ಇಂಡಿ
ದೇಶಕ್ಕೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ರಾಜೀವ್ ಗಾಂಧಿವರೆಗೂ ದೇಶದ ಸಮಗ್ರ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಶ್ರಮಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ ಹೇಳಿದರು.ಅವರು ಗುರುವಾರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುತೇಕ ಕಾಂಗ್ರೆಸ್ಸಿಗರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಆಯಾ ಕಾಲಕ್ಕೆ ತಕ್ಕ ಬೇಡಿಕೆಯಂತೆ ಹೋರಾಟಗಳನ್ನು ಮಾಡಿ ರಾಜಕೀಯ ಮತ್ತು ಆರ್ಥಿಕ , ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಇದು ಕೇವಲ ಜನರ ಪಕ್ಷವಲ್ಲ. ಇದೊಂದು ದೇಶದ ಜನರೇ ನಡೆಸುತ್ತಿರುವ ಪಕ್ಷವಾಗಿದೆ. ದೇಶದ ಇತರೆ ಭಾಗದಲ್ಲಿ ಅಣೆಕಟ್ಟು, ನೀರಾವರಿ, ರೈಲ್ವೆ, ವಿಮಾನಯಾನ, ಯಂತ್ರೋಪಕರಣಗಳ ತಯಾರಿಕೆ, ತಂತ್ರಜ್ಞಾನ ಅನುಷ್ಠಾನದಂತ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ದೇಶದಲ್ಲಿ ಮಾಡಿದೆ. ಆದರೂ ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇವರಿಗೆ ಕಾಂಗ್ರೆಸ್ ಕೊಡುಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಹಿರಿಯ ಮುಖಂಡ ಜಟ್ಟೆಪ್ಪ ರವಳಿ ಮಾತನಾಡಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಭವ್ಯ ಇತಿಹಾಸದ 138 ವರ್ಷಗಳನ್ನು ಡಿ. 28 ರಂದು ಪೂರ್ಣಗೊಳಿಸುತ್ತಿದ್ದು, 139ನೇ ವರ್ಷಕ್ಕೆ ಕಾಲಿಡುತ್ತಿದೆ. ನಮ್ಮ ನಾಯಕರು ಮಾತೃಭೂಮಿ ಏಕತೆ ಮತ್ತು ಸಮಗ್ರತೆ ಬಲಪಡಿಸಲು ಹಾಗೂ ದೇಶವನ್ನು ಪರಕೀಯರ ದಬ್ಬಾಳಿಕೆಯಿಂದ ಭಾರತೀಯರಿಗೆ ಸ್ವಾತಂತ್ರಗಳಿಸಿಕೊಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ರಚಿಸಿದರು. ಬ್ರಿಟೀಷರಿಂದ ದೇಶವನ್ನು ಮುಕ್ತ ಮಾಡಲು ಅನೇಕ ಕಾಂಗ್ರೆಸ್ ನಾಯಕರು ತಮ್ಮ ಜೀವನವನ್ನೇ ಬಲಿದಾನ ಮಾಡಿದ್ದಾರೆ ಎಂದು ಇದೆ ವೇಳೆಯಲ್ಲಿ ಸ್ಮರಿಸಿದರು. ಕಾಂಗ್ರೆಸ್ ಮುಖಂಡ ಅವಿನಾಶ ಬಗಲಿ, ರೈಸ್ ಅಸ್ಟೇಕರ, ಪ್ರಶಾಂತ ಕಾಳೆ, ಭೀಮಣ್ಣ ಕವಲಗಿ ಮಾತನಾಡಿದರು. ಮುನ್ನಾ ಡಾಂಗೆ, ಶ್ರೀಕಾಂತ ಕುಡಿಗನೂರ, ಲಿಂಬಾಜಿ ರಾಠೋಡ, ಸಂತೋಷ ಪರಸೇನವರ, ಬಾಬು ಗುಡಮಿ, ಸುಗಂಧಾ ಬಿರಾದಾರ, ನಾಗೇಶ ತಳಕೇರಿ, ಅಯೂಬ ಬಾಗವಾನ, ಮಲ್ಲು ಮಡ್ಡಿಮನಿ, ಸತೀಶ ಕುಂಬಾರ, ಮುಸ್ತಾಕ ಇಂಡಿಕರ, ಕಲೀಲ ಇಂಡಿಕರ, ರಾಧಾ ಯಂಟಮಾನ ಮೊದಲಾದವರು ಇದ್ದರು.