ಕಾಂಗ್ರೆಸ್‌ ಸರ್ಕಾರದಿಂದ ಹಿಜಾಬ್‌ ವಿಚಾರದಲ್ಲಿ ಶಾಂತಿ ಹಾಳು: ಜನಾರ್ದನ ರೆಡ್ಡಿ

KannadaprabhaNewsNetwork |  
Published : May 27, 2026, 02:30 AM IST
ಸಸಸಸ | Kannada Prabha

ಸಾರಾಂಶ

ಮೂರು ವರ್ಷ ಜಗಳದಲ್ಲಿಯೇ ಕಾಲ ಕಳಿದಿದ್ದಿರಿ, ಉಳಿದ ಎರಡು ವರ್ಷವಾದ್ರೂ ಸರಿಯಾದ ಅಭಿವೃದ್ಧಿ ಕೆಲಸ ಮಾಡಲಿ

ಕೊಪ್ಪಳ: ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ಶಾಂತಿ ಹಾಳು ಮಾಡುತ್ತಿದೆ, ಮುಸ್ಲಿಂರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.

ತಾಲೂಕಿನ ಇರಕಲ್ಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಜಗಳದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸಿದ್ದರಾಮಯ್ಯಗೆ ಸೀಟ್ ಬಿಟ್ಟು ಕೊಡುವಂತೆ ಒತ್ತಡ ಬರ್ತಿದೆ. ಇಂದು ಇಲ್ಲವೇ ನಾಳೆ ಅಂತಿಮ ತೀರ್ಮಾನವಾಗಲಿದೆ ಎಂದರು.

ಮೂರು ವರ್ಷ ಜಗಳದಲ್ಲಿಯೇ ಕಾಲ ಕಳಿದಿದ್ದಿರಿ, ಉಳಿದ ಎರಡು ವರ್ಷವಾದ್ರೂ ಸರಿಯಾದ ಅಭಿವೃದ್ಧಿ ಕೆಲಸ ಮಾಡಲಿ. ಡಿಸಿಎಂ ಡಿಕೆಶಿ ಸಿಎಂ ಆಗುವ ಕನಸು ಹೊತ್ತವರು ಅಧಿಕಾರ ಹಂಚಿಕೆ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ ಎರಡು ವರ್ಷ ಮುಗಿದು ಆರು ತಿಂಗಳ ಕಳೆದ್ರೂ ಬಿಟ್ಟು ಕೊಡ್ತಿಲ್ಲ ಸದ್ಯ ಸಿಎಂ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತಗೊಂಡಿದೆ ಎಂದರು.

ಪರಮೇಶ್ವರ ಹಾಗೂ ಖರ್ಗೆ ಸಿಎಂ ಆಗಬೇಕು ಎನ್ನುವ ವಿಚಾರವಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ, ಇಲ್ಲವಾದ್ರೆ ಡಿಕೆಶಿ ಸಿಎಂ ಆಗ್ತಾರೆ, ಹೈಕಮಾಂಡ್ ಡಿಕೆಶಿ ಪರವಾಗಿ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವಾಗಿದ್ದು ಸಿದ್ದರಾಮಯ್ಯ ಬೇಡ ಅಂದ್ರೂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದರು.

ಅಧ್ಯಕ್ಷರ ನೇಮಕ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು, ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಎಂಬ ಚರ್ಚೆಯ ವಿಚಾರವಾಗಿ ಶ್ರೀರಾಮುಲು ಆಗಲಿ ಎನ್ನುವುದು ನನ್ನ ಬಯಕೆ, ನಾನು ಪಕ್ಷದಲ್ಲಿ ಹುದ್ದೆಗಳನ್ನು ಕೇಳಿಲ್ಲ ನಮಗೆ ಪಕ್ಷ ಅಧಿಕಾರಕ್ಕೆ ಬರಲಿ ಅಂತ ಮಾತ್ರ ಕೆಲಸ ಮಾಡೋದು, ವಿಜಯೇಂದ್ರ, ಶ್ರೀರಾಮುಲು ಅವರಲ್ಲಿ ಯಾರೇ ಅಧ್ಯಕ್ಷ ಆದರೂ ಅದರ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದರು.

ಬಸನಗೌಡ ಪಾಟೀಲ್ ಯತ್ನಾಳ ಹೇಳುವುದರಲ್ಲಿ ತಪ್ಪೇನಿದೆ, ಎಸ್ ಸರ್ ಅನ್ನೋ ಪದ ಅಮೇರಿಕದಲ್ಲಿ ಉಪಯೋಗಿಸಲಿ ನಮ್ಮ ದೇಶದಲ್ಲಿ ನಾವು ಜೈ ಶ್ರೀರಾಮ್ ಅನ್ನೋದರಲ್ಲಿ ತಪ್ಪೇನಿಲ್ಲ, ನಾನು ಸನಾತನ ಧರ್ಮದವನಾಗಿ ಕುಂಕುಮ ಹಚ್ಕೋತಿನಿ, ಕೆಲವರು ಹಚ್ಕೊಳಲ್ಲ ಅದು ಅವರ ಧರ್ಮದ ಪದ್ಧತಿ, ಕೆಲವರು ಈಗ ದೇವರ ಟ್ಯಾಟು ಹಾಕಿಕೊಳ್ಳುತ್ತಿದ್ದಾರೆ ಎಂದ ಅವರು, ಮಧು ಬಂಗಾರಪ್ಪ ಬಂದು ಹಚ್ಚೆ ತೆಗಿಸಲಾಗುವುದು ಎಂದು ಹುಚ್ಚಾಟ ಮಾಡುತ್ತಿದ್ದಾರೆ, ಇದರಿಂದ ಅವರಿಗೆ ಯಾವುದೇ ಲಾಭ ಇಲ್ಲ, 2028ಕ್ಕೆ 150ಕ್ಕೂ ಹೆಚ್ಚು ಸೀಟ್ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಹಿಟ್ನಾಳ ಬ್ರದರ್ಸ್ ಪೈಟ್ ವಿಚಾರವಾಗಿ ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ನನಗೆ ಹಿಟ್ನಾಳ ಬ್ರದರ್ಸ ಪರಿಚಯ ಆಗಿದ್ದು, ಹಿಟ್ನಾಳ ಬ್ರದರ್ಸ್ ಫೇಸ್ ಹೇಗಿರತ್ತೆ ಅಂತ ನೋಡಿದ್ದೆ ಅವತ್ತು, ಇಕ್ಬಾಲ್ ಅನ್ಸಾರಿ ಬಾಯಿಗೆ ಬಂದಂತೆ ಹೇಳುವುದು ಸರಿಯಲ್ಲ, ನನ್ನನ್ನ ಯಾರು ಗಂಗಾವತಿಗೆ ಕರೆದುಕೊಂಡು ಬಂದಿಲ್ಲ ಗಂಗಾವತಿಯಲ್ಲಿ ಎರಡು ಬಾರಿ ಪರಣ್ಣ ಮುನವಳ್ಳಿ ಪರ ಪ್ರಚಾರ ಮಾಡಿದ್ದಿನಿ ಗಂಗಾವತಿ ಬಳ್ಳಾರಿಗೆ ಎನು ವ್ಯತ್ಯಾಸ ಇಲ್ಲ, ಜನರ ಪ್ರೀತಿ ವಿಶ್ವಾಸದಿಂದ ನಾನು ಗಂಗಾವತಿಗೆ ಬಂದಿದ್ದೇನೆ ಬಳ್ಳಾರಿಗೆ ಹೋಗಲು ಕೋರ್ಟ ನಿಷೇಧ ಇರುವ ಕಾರಣಕ್ಕೆ ನಾನು ಗಂಗಾವತಿಗೆ ಬಂದಿದ್ದು, ಮುಂದೆಯೂ ನಾನು ಗಂಗಾವತಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.

ಇಕ್ಬಾಲ್‌ ಅನ್ಸಾರಿ ಜೆಡಿಎಸ್‌ ಹೋಗುತ್ತಾರೋ ಅಥವಾ ಕಾಂಗ್ರೆಸ್‌ಲ್ಲಿ ಉಳಿತ್ತಾರೆ ಗೊತ್ತಿಲ್ಲ, ಆದರೆ ಅವರು ಹೇಳಿರುವ ಒಂದು ಮಾತು ಸತ್ಯ, ಕೊಪ್ಪಳ ರಿಪಬ್ಲಿಕ್‌ ಆಗಿರುವುದಂತು ಸತ್ಯ. ನಮಗೆ ಈ ಹಿಂದೆ ರಿಪಬ್ಲಿಕ್ ಆಫ್‌ ಬಳ್ಳಾರಿ ಅಂತ ಕಪ್ಪು ಬಟ್ಟೆ ಹಾಕಿದ್ದರು ಈಗ ಹಿಟ್ನಾಳ ಫ್ಯಾಮಿಲಿ ಕೊಪ್ಪಳ ರಿಪಬ್ಲಿಕ್ ಅಂತ ಹೇಳ್ತಿರೋದು ಸತ್ಯ.

ಕಳೆದ ವರ್ಷ ನನಗೆ ಕಾನೂನಿನ ತೊಂದರೆ ಆದ ವೇಳೆ ಅಣ್ಣ,ತಮ್ಮ ಅವರ ತಂದೆಯನ್ನು ಕರೆದುಕೊಂಡ ಬಂದು ಗಂಗಾವತಿಯಲ್ಲಿ ಕೂತಿದ್ರೂ ಹೀಗಾಗಿ ಕೊಪ್ಪಳದಲ್ಲಿ ಅವರ ನೀರಿಳಿಸಲು ಇಕ್ಬಾಲ್ ಅನ್ಸಾರಿ ತೀರ್ಮಾನ ಮಾಡಿರಬೇಕು. ಇದರಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗುತ್ತೆ ಅಂತ ನನ್ನ ಭಾವನೆ ಎಂದರು.

ಮನುಷ್ಯ ಸೋತಾಗ ನೂರೆಂಟು ಲೆಕ್ಕಾಚಾರ ಮಾಡ್ತಾರೆ, ಅದಕ್ಕೆ ಹಿಟ್ನಾಳ ಅವರೇ ನನ್ನ ಕರೆದುಕೊಂಡು ಬಂದ್ರೂ ಅಂತ ಲೆಕ್ಕಾಚಾರ ಹಾಕಿರಬೇಕು ಅನ್ಸಾರಿ, ನೂರಕ್ಕೆ ನೂರು 2028 ಕ್ಕೂ ನಾನು ಗಂಗಾವತಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಯಾವುದೇ ಸಂಶಯ ಬೇಡ ಎಂದರು.

ನನಗೆ ಗಂಗಾವತಿ ಕ್ಷೇತ್ರ ರಾಜಕಿಯ ಪುನರ್ಜನ್ಮ ನೀಡಿದೆ, ಜನರಿಗೂ ನಾನು ಹೇಳಿದ್ದು ನಾನು ಇಲ್ಲೆ ಸ್ಪರ್ಧೆ ಮಾಡುತ್ತೇನೆ, ಬಿಜೆಪಿ ಸರ್ಕಾರ ರೈತರಿಗೆ ಬೀಜಕ್ಕೆ ಸಹಾಯಧನ ನೀಡುತ್ತಿತ್ತು, ಆದರೆ ಇದರ ಬಗ್ಗೆ ಕಾಂಗ್ರೆಸ್ ಸರ್ಕಾರ ಯೋಚನೆ ಮಾಡುತ್ತಿಲ್ಲ. ನಾವು ರೈತರ ಬೀಜ ಗೊಬ್ಬರದ ಬಗ್ಗೆ ಯೋಚನೆ ಮಾಡುತ್ತಿದ್ದರೆ ಅವರು ದೆಹಲಿಯಲ್ಲಿ ಸಿಎಂ ಕುರ್ಚಿಗೆ ಗುದ್ದಾಟ ನಡೆಸಿದ್ದಾರೆ. ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಹಾಳಾಗಿದೆ, ಮುಂದೆ ಏನಾಗತ್ತೊ ಗೊತ್ತಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳು ಒಂದಾಗುವ ಕಾಲ ಸನ್ನಿಹಿತ: ರಾಜು ಖಾನಪ್ಪನವರ
ಗ್ಯಾರಂಟಿ ಯೋಜನೆ ಬಡವರಿಗೆ ತಲುಪಿಸಿ: ನಾಗರಾಜ ಮಡಿವಾಳರ