ಮಡಿಕೇರಿ : ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದಂತೆ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ತಳೂರು ಕಿಶೋರ್ ಆರೋಪಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿತ್ತು. ಆದರೆ, ಈಗ ಕೇಂದ್ರ ಸರ್ಕಾರದ 5 ಕೆ.ಜಿ ಮಾತ್ರ ಜನರಿಗೆ ಸಿಗುತ್ತಿದೆ. ರಾಜ್ಯ ಸರ್ಕಾರ ನೀಡುತ್ತಿದ್ದ 10 ಕೆಜಿ ಅಕ್ಕಿಯನ್ನು ಸ್ಥಗಿತಗೊಳಿಸಿ ಎಣ್ಣೆ, ಬೇಳೆ, ಉಪ್ಪು ಇತ್ಯಾದಿ ನೀಡಲು ಮುಂದಾಗಿದೆ. ಇದೊಂದು ಅಭಿವೃದ್ಧಿ ಹೀನಾ ಸರ್ಕಾರವಾಗಿದೆ ಎಂದು ದೂರಿದರು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆ ಹೆಚ್ಚಾದರಿಂದ ಶಾಲೆಗಳಿಗೆ ಹೆಚ್ಚಿನ ರಜೆಗಳನ್ನು ನೀಡಲಾಗಿತ್ತು. ಪರಿಣಾಮ ಪಾಠಪ್ರವಚನಗಳು ಹಾಗೆ ಉಳಿದುಕೊಂಡಿದೆ. ಇದರ ನಡುವೆ ಇಂದು ಜಾತಿಗಣತಿ ಹೆಸರಿನಲ್ಲಿ ಶಿಕ್ಷಕರನ್ನು ಒತ್ತಡದಲ್ಲಿ ದುಡಿಸಿಕೊಂಡು ಬಲಿಪಶು ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಗ್ರಾಮಪಂಚಾಯಿತಿಯ ಅಭಿವೃದ್ಧಿಗಳಿಂದ ಮಾಡಿಸಲು ಕ್ರಮಕೈಗೊಳ್ಳಬೇಕೆಂದರು.ಅ.17ರಂದು ತಲಕಾವೇರಿಯಲ್ಲಿ ತೀರ್ಥೋದ್ಬವ ಜಾತ್ರೆಯು ನಡೆಯಲಿದೆ. ಆದರೆ, ಮಡಿಕೇರಿಯಿಂದ ತಲಕಾವೇರಿಗೆ ತೆರಳುವ ರಸ್ತೆಗಳು ಗುಂಡಿಬಿದ್ದಿದೆ. ಇತ್ತೀಚೆಗೆ ಪ್ರತಿಭಟನೆ ಮಾಡಿದ ಸಂದರ್ಭ ಗುಂಡಿಬಿದ್ದ ರಸ್ತೆಗೆ ಮಣ್ಣು ಹಾಕದಂತೆ ಮನವಿ ಮಾಡಲಾಗಿತ್ತು. ಆದರೆ, ಇಂದು ಡಾಂಬಾರು ರಸ್ತೆಗೆ ಮಣ್ಣು ಹಾಕಲಾಗುತ್ತಿದೆ. ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮನು ಮಂಜುನಾಥ್, ಮುಖಂಡರಾದ ಕೂಪದಿರ ದೊರೆ ಮಾದಪ್ಪ, ಎಂ.ಪಿ.ಬಾಲಕೃಷ್ಣ, ಎಂ.ಜೆ.ಅನುದೀಪ್ ಇದ್ದರು.-------------------------------------------------------------------ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮದ ಹರ್‌ಮಂದಿರ ಶಾಲೆಯ ವಸತಿ ನಿಲಯದಲ್ಲಿ ಗುರುವಾರ ಸಂಭವಿಸಿದ ಅಗ್ನಿ ಅವಘಡಕ್ಕೆ ಸಾರ್ವಜನಿಕರ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ತಳೂರು ಕಿಶೋರ್ ಆರೋಪಿಸಿದರು.ಯಾವುದೇ ಶಿಕ್ಷಣ ಇಲಾಖೆ ಆರಂಭಿಸಲು ಜಿಲ್ಲಾ ನೋಂದಣಿ ಇಲಾಖೆಯಿಂದ ಶಾಲೆಯ ಸಾಮರ್ಥ್ಯ ಪ್ರಮಾಣ ಪತ್ರ ಪಡೆದಿರಬೇಕು. ಲೆಕ್ಕ ಪರಿಶೋಧನೆಗಳು ನಡೆಯಬೇಕು. ಜತೆಗೆ ಶಾಲೆಯ ಭೂಪರಿವರ್ತನೆ ಕುರಿತು ದಾಖಲೆ ಇರಬೇಕು. ಈ ಬಗ್ಗೆ ಇತ್ತೀಚೆಗೆ ಸಾರ್ವಜನಿಕರ ಶಿಕ್ಷಣ ಇಲಾಖೆಗೆ ಶಾಲೆಗಳ ಭೂಪರಿವರ್ತನೆ ಬಗ್ಗೆ ಮಾಹಿತಿ ಕೇಳಲಾಗಿತ್ತು. ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಹರ್‌ಮಂದಿರ ಶಾಲೆಯಲ್ಲಿ ನಡೆದ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಜೀವ ದಹನವಾದ ವಿದ್ಯಾರ್ಥಿಯ ಕುಟುಂಬ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.