ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿರುವ ಕಾಂಗ್ರೆಸ್‌ ಸರ್ಕಾರ

KannadaprabhaNewsNetwork |  
Published : May 19, 2026, 04:00 AM IST
ಶಿಕ್ಷಣದಲ್ಲಿ ರಾಜಕೀಯ ತರಬೇಡಿ: ಅರುಣ ಶಹಾಪುರ | Kannada Prabha

ಸಾರಾಂಶ

ಶಾಲಾ ಮಕ್ಕಳಲ್ಲಿ ಬೇಧಭಾವ ಇರಬಾರದು ಎಂದು ಜಾರಿಗೆ ತರಲಾಗಿರುವ ಏಕರೂಪದ ಸಮವಸ್ತ್ರ ಕಾಯ್ದೆಯನ್ನು ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರ ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಾಲಾ ಮಕ್ಕಳಲ್ಲಿ ಬೇಧಭಾವ ಇರಬಾರದು ಎಂದು ಜಾರಿಗೆ ತರಲಾಗಿರುವ ಏಕರೂಪದ ಸಮವಸ್ತ್ರ ಕಾಯ್ದೆಯನ್ನು ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರ ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಕಿಡಿಕಾರಿದರು.

ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲದಕ್ಕೂ ದೊಡ್ಡ ದುರ್ದೈವ ಎಂದರೆ ಮಕ್ಕಳು ಅಕ್ಷರ ಕಲಿಯುವ ಶಾಲೆಗಳಲ್ಲೂ ಈ ಸಮವಸ್ತ್ರದ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್‌ ಮತ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ವಿವಾದವನ್ನು ಹುಟ್ಟುಹಾಕುವಲ್ಲಿ ಎತ್ತಿದ ಕೈ. ಶಾಲಾ ಸಮವಸ್ತ್ರದ ಕುರಿತು ತೆಗೆದುಕೊಂಡ ನಿರ್ಣಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸೂತ್ರದ ಗೊಂಬೆಯಾಗಿದ್ದಾರೆ. ಬೇಡದ ವಿಚಾರದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಹಾಳು ಮಾಡುತ್ತಿದೆ. 2022ರಲ್ಲಿ ಜಾರಿಗೆ ತರಲಾಗಿದ್ದ ಏಕರೂಪದ ಸಮವಸ್ತ್ರ ಆದೇಶದ ಸುತ್ತೋಲೆಯನ್ನುದಿವರು ಹಿಂಪಡೆದಿದ್ದರ ಹಿಂದಿನ ರಾಜಕೀಯ ಮರ್ಮವೇನು ಎಂದು ಪ್ರಶ್ನಿಸಿದರು. ಇದೀಗ ನೂತನ ಆದೇಶದ್ಲಲಿ ಶಾಲಾ ಸಮವಸ್ತ್ರದೊಂದಿಗೆ ಸೀಮಿತ, ಸಂಪ್ರದಾಯಿಕ ಉಡುಗೆ ತೊಡಬಹುದು ಎಂದು ಆದೇಶಿಸಿದ್ದು, ಇಷ್ಟು ಕೀಳುಮಟ್ಟದ ರಾಜಕೀಯ ಮಾಡುವ ಅವಶ್ಯಕತೆ ಕಾಂಗ್ರೆಸ್‌ನವರಿಗೆ ಇತ್ತಾ?. ಈ ಮೂಲಕ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಹೊರಟಿದ್ದಾರೆ. ಶಿಕ್ಷಣ ಸಚಿವರೇ ಅಪರೂಪಕ್ಕೆ ನಿಮಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಉತ್ತಮ ಶಿಕ್ಷಣ ಕೊಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.ರಾಜ್ಯದ ಸರ್ಕಾರಿ ಶಾಲೆಗಳಿಂದ ಸಾವಿರಾರು ಮಕ್ಕಳು ಶಾಲೆ ಬಿಟ್ಟು ಹೋಗುತ್ತಿದ್ದಾರೆ. ಶಿಕ್ಷಣದ ವ್ಯವಸ್ಥೆ ಹದಗೆಟ್ಟಿದ್ದು, ಈ ಸರ್ಕಾರದಲ್ಲಿ ಒಂದೇ ಒಂದು ಶಾಲಾ ಕೊಠಡಿ ಕಟ್ಟಿಲ್ಲ. ಸಿಎಂ ಹಾಗೂ ಶಿಕ್ಷಣ ಸಚಿವರೇ ಈಗಲಾದರೂ ಶಾಲಾ ಕೊಠಡಿಗಳನ್ನು ನಿರ್ಮಿಸಿ, ಶಿಕ್ಷಕರ ನೇಮಕ ಮಾಡಿಕೊಳ್ಳಿ. ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳನ್ನು ಕೊಡಿ. ಅದುಬಿಟ್ಟು ಜನಿವಾರ, ಶಿವದಾರ, ಉಡದಾರ ಎಂಬ ಅನಗತ್ಯ ವಿಚಾರಗಳನ್ನು ಬಿಟ್ಟು ಶಾಲೆಗಳನ್ನು ಅಭಿವೃದ್ಧಿಪಡಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಆಸಕ್ತಿ ವಹಿಸಿ ಎಂದು ಎಚ್ಚರಿಸಿದರು.ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಭೀಮಾಶಂಕರ ಹದನೂರ, ಈರಣ್ಣ ರಾವೂರ, ಸಂಪತ್ತ ಕೋಳಿ, ವಿಜಯ‌ ಜೋಶಿ, ಸಾಬು ಮಾಶ್ಯಾಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರದಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿ
ಬೈಲಹೊಂಗಲದಲ್ಲಿ ಧಾರಾಕಾರ ಮಳೆ: ತುಂಬಿ ಹರಿದ ಹಳ್ಳ