ಕಾಂಗ್ರೆಸ್ ಸರ್ಕಾರ ಶೀಘ್ರ ಪತನ: ನಳಿನಕುಮಾರ ಕಟೀಲ್

KannadaprabhaNewsNetwork |  
Published : Jun 30, 2025, 12:34 AM IST
ಸಸಸ | Kannada Prabha

ಸಾರಾಂಶ

ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದರೂ ಅಧಿಕಾರಕ್ಕೆ ಕಿತ್ತಾಟ ಮಾಡುತ್ತಾರೆಯೇ ಹೊರತು ಅದನ್ನು ನಿಯಂತ್ರಿಸುವ ಹಾಗೂ ಹಿಂದೂಗಳ ಹತ್ಯೆ ಮಾಡಿದವರ ಮೇಲೆ ಕ್ರಮವಹಿಸುತ್ತಿಲ್ಲ

ಕೊಪ್ಪಳ: ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಶೀಘ್ರದಲ್ಲಿಯೇ ಸರ್ಕಾರ ಪತನವಾಗುವ ಸಾಧ್ಯತೆ ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಚಿವ ಸಂಪುಟದ ಬದಲಾವಣೆಯ ಬಗ್ಗೆ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಗಳನ್ನೇ ಬದಲಾವಣೆ ಮಾಡಲಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಕ್ರಾಂತಿಯೇ ಆಗುತ್ತದೆ ಎನ್ನುವುದನ್ನು ಅವರದೇ ಪಕ್ಷದವರು ಬಹಿರಂಗವಾಗಿಯೇ ಹೇಳುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಅನಿಸುತ್ತಿದೆ ಎಂದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಏನೋ ವ್ಯತ್ಯಾಸವಂತೂ ಇದ್ದು, ಅದನ್ನು ಅವರ ಬೆಂಬಲಿಗರ ಮೂಲಕ ವ್ಯಕ್ತಪಡಿಸಲಾಗುತ್ತಿದೆ. ಸಂವಿಧಾನ ವಿರೋಧಿಯಾಗಿ ಆಡಳಿತ ನೀಡುತ್ತಿದ್ದಾರೆ. ಒಂದು ಸಮುದಾಯದ ಹಿತ ಕಾಯಲು ಆಡಳಿತ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದರೂ ಅಧಿಕಾರಕ್ಕೆ ಕಿತ್ತಾಟ ಮಾಡುತ್ತಾರೆಯೇ ಹೊರತು ಅದನ್ನು ನಿಯಂತ್ರಿಸುವ ಹಾಗೂ ಹಿಂದೂಗಳ ಹತ್ಯೆ ಮಾಡಿದವರ ಮೇಲೆ ಕ್ರಮವಹಿಸುತ್ತಿಲ್ಲ. 40, 60 ಅಲ್ಲ, ಈ ಕಾಂಗ್ರೆಸ್ ಸರ್ಕಾರದಲ್ಲಿ 80 ಪರ್ಸೆಂಟೇಸ್ ಇದೆ ಎಂದರು.

ಸಿಎಂ ಸಿದ್ದರಾಮಯ್ಯ ಹಿಡಿತವೂ ತಪ್ಪಿದೆ. ನನ್ನ 20 ವರ್ಷಗಳ ಅನುಭವದಲ್ಲಿ ಹೇಳುತ್ತೇನೆ, 2026ರಲ್ಲಿಯೇ ವಿಧಾನಸಭಾ ಚುನಾವಣೆ ಎದುರಾಗಬಹುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ