ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ, ಸರ್ವರ್‌ ಸಿಗೋಲ್ಲ

KannadaprabhaNewsNetwork | Published : Feb 5, 2025 12:32 AM

ಸಾರಾಂಶ

ಮಾಲೂರು ಮಾರಿಕುಪ್ಪ, ಊರಿಗಾಂ ಬೆಮಲ್ ಸ್ಟೇಷನ್‌ಗಳು ಹೈಟೆಕ್ ಮಾಡಲಾಗಿದೆ, ಕೋರಮಂಗಲ, ಟೇಕಲ್ ಸ್ಟೇಷನ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಬಂಗಾರಪೇಟೆ ಮತ್ತು ಚಿಕ್ಕಬಳ್ಳಾಫುರ ಮಾರ್ಗಗಳು ಎಲ್ಕೆಟ್ರೀಕ್ ಟ್ರೈನ್ ಮಾರ್ಗ, ಬ್ರಿಡ್ಜ್ ಕೆಳಗೆ ಮಳೆ ಸಂಗ್ರಹವಾಗುವ ನೀರನ್ನು ತೆರುವುಗೊಳಿಸಲು ವಿಶೇಷವಾದ ವ್ಯವಸ್ಥೆ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ೨ ವರ್ಷಗಳು ಸಮೀಪಿಸುತ್ತಿದ್ದರೂ ಸಹ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿಯೇ ಮುಂದುವರೆಯುತ್ತಿದೆ, ಕಾಂಗ್ರೆಸ್‌ನ ೫ ಗ್ಯಾರಂಟಿಗಳಿಗೆ ಯಾವ ವಾರಂಟಿಯೂ ಇಲ್ಲ, ಸರ್ವರ್‌ಗಳು ಸಿಗುವುದಿಲ್ಲ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರುದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಂಸದರಿಗೆ ರೈಲ್ವೆ ಖಾತೆ ನೀಡಿದರೂ ಸಹ ಅವರು ತರದ ಅನುದಾನ ಬಿಜೆಪಿ ಸರ್ಕಾರ ಕೋಲಾರ ಕ್ಷೇತ್ರಕ್ಕೆ ನೀಡಿತ್ತು ಎಂದರು.

ಕೇಂದ್ರ ನೀಡಿದ ಅನುದಾನ

ಮಾಲೂರು-ಬಂಗಾರಪೇಟೆ ರೈಲ್ವೆ ಸ್ಟೇಷನ್ ಮೇಲ್ದರ್ಜೆಗೆ ಏರಿಕೆ ತಲಾ ೭೫ ಕೋಟಿ, ಸಿ.ಆರ್.ಎಫ್ ೪೦ ಕೋಟಿಯಲ್ಲಿ ಮಾಲೂರು-ಹೊಸೂರು ಮಾರ್ಗ, ಟೇಕಲ್ ಸ್ಟೇಷನ್ ಅಭಿವೃದ್ದಿಗೆ ೨೬ ಕೋಟಿ ರೂ, ಬಂಗಾರಪೇಟೆ ಬೂದಿಕೋಟೆ ಮಾರ್ಗಕ್ಕೆ ೫೦ ಅಡಿರಸ್ತೆ ೪೧ ಕೋಟಿ ರು., ಬ್ರಿಡ್ಜ್, ಮಾಲೂರು ಮತ್ತು ಬಂಗಾರಪೇಟೆಯ ಸ್ಟೇಷನ್‌ಗಳಲ್ಲಿ ಹಿರಿಯರಿಗೆ ಎಕ್ಸಲೇಟರ್ ಸೌಲಭ್ಯಗಳು ನೀಡಲಾಗಿದೆ ಎಂದರು. ಮಾಲೂರು ಮಾರಿಕುಪ್ಪ, ಊರಿಗಾಂ ಬೆಮಲ್ ಸ್ಟೇಷನ್‌ಗಳು ಹೈಟೆಕ್ ಮಾಡಲಾಗಿದೆ, ಕೋರಮಂಗಲ, ಟೇಕಲ್ ಸ್ಟೇಷನ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಬಂಗಾರಪೇಟೆ ಮತ್ತು ಚಿಕ್ಕಬಳ್ಳಾಫುರ ಮಾರ್ಗಗಳು ಎಲ್ಕೆಟ್ರೀಕ್ ಟ್ರೈನ್ ಮಾರ್ಗ, ಬ್ರಿಡ್ಜ್ ಕೆಳಗೆ ಮಳೆ ಸಂಗ್ರಹವಾಗುವ ನೀರನ್ನು ತೆರುವುಗೊಳಿಸಲು ವಿಶೇಷವಾದ ವ್ಯವಸ್ಥೆ ಮಾಡಲಾಗುವುದು ಎಂದರು.ಹೆದ್ದಾರಿ ಅಭಿವೃದ್ಧಿಗೆ ಒತ್ತು

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ನೂತನ ರೈಲ್ವೇ ನಿಲ್ದಾಣ ಕಾಮಗಾರಿಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಇದರ ಜೊತೆಗೆ ಶ್ರೀನಿವಾಸಪುರ ಬಳಿ ನಿರ್ಮಿಸಬೇಕಾಗಿದ್ದ ಕೋಚ್ ಕಾರ್ಖಾನೆಗೆ ಇತರೆ ಕಡೆ ಹೆಚ್ಚಾಗಿದೆ ಎಂದು ವರ್ಕಶಾಪ್ ಮಾಡಲು ಮುಂದಾಗಿ ಸುಮಾರು ೪೫೦ ಎಕರೆ ಜಾಗ ಗುರುತಿಸಲಾಗಿತ್ತು. ೧೬ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಕೋಲಾರ ನಗರದ ರಿಂಗ್ ರೋಡ್‌ಗೆ ಮಂಜೂರಾಗಿದ್ದ ೧೦೦ ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆದಿದೆ ಎಂದು ಆರೋಪಿಸಿರುವ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಯಾವುದಾದರೂ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ಉಸ್ತುವರಿ ಸಚಿವರ ಕೊಡುಗೆ ಏನು?

ಜಿಲ್ಲಾ ಉಸ್ತುವಾರಿ ಸಚಿವರಾಗಿ ೨ ವರ್ಷದಿಂದ ಕೋಲಾರಕ್ಕೆ ನೀಡಿರುವ ಕೊಡುಗೆ ಏನೆಂದು ಪ್ರಶ್ನಿಸಿ ಎಂದ ಅವರು, ವಿದ್ಯಾರ್ಥಿ ನಿಲಯಗಳಿಗೆ ೬೦ ಕೋಟಿ ರೂ, ರಸ್ತೆಗಗಳು, ಪ್ಲೈಓವರ್‌ಗಳು, ೬ ಫಥದ ರಸ್ತೆಯನ್ನು ಬೆಂಗಳೂರಿನ ಕೆ.ಆರ್.ಪುರಂನಿಂದ ಚೆನೈ ವರೆಗೆ ೧೮೫೦ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿ ಶ್ರೀನಿವಾಸಪುರ ಬೈಪಾಸ್ ರಸ್ತೆಗೆ ೨೫೦ ಕೋಟಿ ರೂ., ಎ.ಪಿ.ಎಂ.ಸಿ. ಟೊಮೆಟೋ ಉಪ ಉತ್ಪನ್ನಗಳ ಕೇಂದ್ರವನ್ನು ಕೇಂದ್ರ ಸಚಿವ ಶೋಭಾ ಕರೆಂದಜ್ಞೆ ಅವರೇ ಉದ್ಘಾಟಿಸಿದ್ದರು, ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಬಿಜೆಪಿ ಸರ್ಕಾರದ್ದು, ಕೆ.ಜಿ.ಎಫ್‌ನ ಇ.ಎಸ್.ಐ. ಆಸ್ಪತ್ರೆಗೆ ೧೩೩ ಕೋಟಿ ರೂ ಮಂಜೂರಾತಿ ಮಾಡಿದೆ ಎಂದು ವಿವರಿಸಿದರು. ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಪಕ್ಷದ ವಿಚಾರದಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಬಿಜೆಪಿ ಮನೆಯಲ್ಲಿ ದೋಸೆ ತೂತು ಆಗಿದ್ದರೆ ಕಾಂಗ್ರೆಸ್ ಮನೆಯ ಹೆಂಚೇ ತೂತು ಆಗಿದೆ ಎಂದು ಟೀಕಿಸಿದರು.

Share this article