ಕಿಡಿಗೇಡಿಗಳಿಂದ ಕಳೆನಾಶಕ ಸಿಂಪಡಿಸಿ ರೈತ ಬೆಳೆದಿದ್ದ ಟೊಮೆಟೊ ನಾಶ

KannadaprabhaNewsNetwork |  
Published : Feb 05, 2025, 12:32 AM IST
4ಕೆಎಂಎನ್ ಡಿ22 | Kannada Prabha

ಸಾರಾಂಶ

ಮಾರುಕಟ್ಟೆಯಲ್ಲಿಯೂ ಟೊಮೊಟೊಗೆ ಉತ್ತಮ ಬೆಲೆ ಇರುವುದರಿಂದ ಸುಮಾರು 4 ಲಕ್ಷರ ರು. ಆದಾಯ ಪಡೆಯುವ ನಿರೀಕ್ಷೆಯಲ್ಲಿ ರೈತ ಸಂತೋಷ್ ಇದ್ದರು. ಆದರೆ, ಫಸಲು ಕೊಯ್ಲು ಮಾಡುವ ಮುನ್ನವೇ ಸೋಮವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿ ಬೆಳೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರೈತ ಕಷ್ಟಪಟ್ಟು ಬೆಳೆದಿದ್ದ ಟೊಮೆಟೊ ಬೆಳೆಗೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿ ನಾಶ ಮಾಡಿರುವ ಘಟನೆ ತಾಲೂಕಿನ ಮೊಸಳೆ ಕೊಪ್ಪಲು ಗ್ರಾಮದಲ್ಲಿ ಘಟಿಸಿದೆ.

ಗ್ರಾಮದ ಡೈರಿ ಮಾಜಿ ಕಾರ್ಯದರ್ಶಿ ಅಣ್ಣೇಗೌಡರ ಅಳಿಯ ಸಂತೋಷ್ ಬಳ್ಳೇಕೆರೆ ಗ್ರಾಮದ ಎಳೆಮೊಗ್ಗಣ್ಣರ ಸರ್ವೇ ನಂ.90/6 ರ ಒಂದು ಎಕೆರೆ ಜಮೀನನ್ನು ಗುತ್ತಿಗೆ ಪಡೆದು ಅದರಲ್ಲಿ ಟೊಮೊಟೊ ಬೆಳೆದಿದ್ದರು. ಫಸಲು ಚೆನ್ನಾಗಿ ಬಂದಿದ್ದು ಮುಂದಿನ ವಾರ ಕೊಯ್ಲು ಮಾಡುವ ಉತ್ಸಾಹದಲ್ಲಿ ರೈತ ಸಂತೋಷ್ ಇದ್ದರು.

ಮಾರುಕಟ್ಟೆಯಲ್ಲಿಯೂ ಟೊಮೊಟೊಗೆ ಉತ್ತಮ ಬೆಲೆ ಇರುವುದರಿಂದ ಸುಮಾರು 4 ಲಕ್ಷರ ರು. ಆದಾಯ ಪಡೆಯುವ ನಿರೀಕ್ಷೆಯಲ್ಲಿ ರೈತ ಸಂತೋಷ್ ಇದ್ದರು. ಆದರೆ, ಫಸಲು ಕೊಯ್ಲು ಮಾಡುವ ಮುನ್ನವೇ ಸೋಮವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿ ಬೆಳೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ.

ಕೀಟನಾಶಕ ಸಿಂಪರಣೆಯಿಂದ ಸಂವೃದ್ದವಾಗಿ ಬೆಳೆದಿದ್ದ ಟೊಮೊಟೊ ಬೆಳೆ ಒಣಗಲು ಆರಂಭಿಸಿದ್ದು. ಬೆಳೆ ಹಾನಿಯಿಂದ ರೈತ ಸಂತೋಷ್ ದಿಗ್ಭ್ರಮೆಗೆ ಒಳಗಾಗಿದ್ದು ಕಣ್ಣೀರು ಸುರಿಸುತ್ತಿದ್ದಾರೆ.

ಕಿಡಿಗೇಡಿಗಳ ದುಷ್ಕೃತ್ಯದಿಂದ ಬೆಳೆಹಾನಿಗೆ ಒಳಗಾದ ರೈತ ಸಂತೊಷ್ ಮೂಲತಃ ನೆರೆಯ ಪಾಂಡವಪುರ ತಾಲೂಕಿನ ಸೀತಾಪಯರ ಗ್ರಾಮದ ಶಿವಣ್ಣರ ಪುತ್ರಯ ಮೊಸಳೆ ಕೊಪ್ಪಲು ಗ್ರಾಮದ ಹಾಲು ಉತ್ಪಾದರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಅಣ್ಣೇಗೌಡರ ಮನೆಯ ಅಳಿಯನಾಗಿ ಮಾವನ ಮನೆಗೆ ದತ್ತು ಬಂದಿದ್ದರೆನ್ನಲಾಗಿದೆ.

ಅಪರಿಚಿತ ಶವ ಪತ್ತೆ

ಹಲಗೂರು:

ಸಮೀಪದ ಹಾಗದೂರು ಗ್ರಾಮದ ರಸ್ತೆ ಬದಿಯಲ್ಲಿ ಸುಮಾರು 60 ವಯಸ್ಸಿನ ಮೃತದೇಹ ಪತ್ತೆಯಾಗಿದೆ.

ವಾಯು ವಿಹಾರಕ್ಕೆ ತೆರಳಿದ್ದಾಗ ಸಾರ್ವಜನಿಕರು ಮೃತದೇಹ ಇರುವುದನ್ನು ಗಮನಿಸಿ ಹಲಗೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಮೃತದೇಹದ ಮೇಲೆ ನೀಲಿ ಬಣ್ಣದ ಅಂಗಿ, ಬಿಳಿ ಬಣ್ಣದ ಲುಂಗಿ ಇರುತ್ತದೆ. ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಮತ್ತು ಗಡ್ಡ ಮೀಸೆ ಬಿಟ್ಟಿರುತ್ತಾರೆ. ವ್ಯಕ್ತಿ ವಿಳಾಸ ಪತ್ತೆಯಾಗಿಲ್ಲ. ಮೃತದೇಹವನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ವಾರಸುದಾರರು ಇದ್ದಲ್ಲಿ ಪಿಎಸ್ಐ ಬಿ.ಮಹೇಂದ್ರ ಅಥವಾ ದೂ-08231-295322 ಸಂಪರ್ಕಿಸಬಹುದು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ