ಕನ್ನಡಪ್ರಭ ವಾರ್ತೆ ಬೆಳ್ತಂಗಡಿಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಅಲೆ ಇದ್ದು ಗೆಲ್ಲುವ ಉತ್ತಮ ಅವಕಾಶ ಇದೆ. ಇದಕ್ಕೆ ಕಾರ್ಯಕರ್ತರ ಪ್ರಾಮಾಣಿಕ ಶ್ರದ್ಧೆ, ನಾಯಕರುಗಳ ಒಗ್ಗಟ್ಟು ಶಕ್ತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿದರು. ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಲೋಕೇಶ್ವರಿ ವಿನಯಚಂದ್ರ, ನಾಗೇಶ್ ಕುಮಾರ್, ಜೈಸನ್ ಪಟ್ಟೇರಿ, ಸುದರ್ಶನ್ ಶೆಟ್ಟಿ, ಕರೀಂ ಗೇರುಕಟ್ಟೆ, ಸುಭಾಶ್ಚಂದ್ರ ರೈ, ನಾಗೇಶ್ ಗೌಡ, ನಮಿತಾ ಪೂಜಾರಿ, ಜಗದೀಶ್, ನೇಮಿರಾಜ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಕಾಶಿಪಟ್ಣ ಕಾರ್ಯಕ್ರಮ ನಿರೂಪಿಸಿದರು. ಕೆ. ಪ್ರಕಾಶ್ ಶೆಣೈ, ಪದ್ಮನಾಭ ಶೆಣೈ, ದಿವ್ಯಲಕ್ಷ್ಮೀ, ರೋಹಿತ್ ಹಾಗೂ ನಾಸಿರ್ ಬಾಷಾ ಪಕ್ಷಕ್ಕೆ ಸೇರ್ಪಡೆಗೊಂಡರು.