ಅಂಬೇಡ್ಕರ್ ಬಗ್ಗೆ ಮಾತಾಡಲು ಕಾಂಗ್ರೆಸ್ ಗೆ ಮುಖವಿಲ್ಲ: ಪ್ರತಾಪ್ ಸಿಂಹ ಟೀಕೆ

KannadaprabhaNewsNetwork |  
Published : Dec 22, 2024, 01:31 AM IST
1 | Kannada Prabha

ಸಾರಾಂಶ

ವಿಧಾನಸೌಧದಲ್ಲಿ ಕಾಂಗ್ರೆಸ್ ನವರು ಪಾಕಿಸ್ತಾನ್ ಜಿಂದಾಬಾದ್ ಎಂದಾಗ ಇದೇ ಲಕ್ಷ್ಮಿ ಹೆಬ್ಳಾಕರ್ ಅದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ. ನಜೀರ್ ಸಾಬ್ ಜಿಂದಾಬಾದ್ ಎಂದು ಘೋಷಿಸಿದ್ದರು. ಅದರ ತಜ್ಞ ವರದಿ ಬಂದ ಮೇಲೆ ಲಕ್ಷ್ಮೀ ಹೆಬ್ಳಾಕರ್ ಸುಮ್ಮನೆ ಆಗಲಿಲ್ವಾ? ಪೊಲೀಸರನ್ನೂ ಛೂ ಬಿಟ್ಟು ಈ ಕೆಲಸ ಮಾಡಿಸಲಾಗಿದೆ. ಈ ವಿಚಾರದಲ್ಲೂ ಫೋರೆನ್ಸಿಕ್ ರೀಪೋರ್ಟ್ ಬರಲಿ. ಯಾರದು ತಪ್ಪು ಎಂಬುದು ಗೊತ್ತಾಗಲಿ. ನಂತರ ಸೂಕ್ತ ಕ್ರಮ ಆಗಲಿ.

ಕನ್ನಡಪ್ರಭ ವಾರ್ತೆ ಮೈಸೂರು

ಅಂಬೇಡ್ಕರ್ ಬಗ್ಗೆ ಮಾತಾಡಲು ಕಾಂಗ್ರೆಸ್ ಗೆ ನೈತಿಕ ಹಕ್ಕು ಇಲ್ಲ, ಮುಖವೂ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರಕ್ಕೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಯಾವ ಮುಖ ಇಟ್ಟುಕೊಂಡು ಅಂಬೇಡ್ಕರ್ ಬಗ್ಗೆ ಮಾತಾಡುತ್ತಾರೆ. ಅಂಬೇಡ್ಕರ್ ಗೆ ಅವಮಾನ ಮಾಡಿ ಮನಸ್ಸಿಗೆ ನೋವು ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಗೆ ಭಾರತರತ್ನವನ್ನು ಕಾಂಗ್ರೆಸ್ ನವರು ಕೊಟ್ಟರಾ? ಕೊಟ್ಟಿದ್ದು ಬಿಜೆಪಿ ಬೆಂಬಲಿತ ಸರ್ಕಾರ ಎಂದರು.

ಪಾರ್ಲಿಮೆಂಟ್ ನಲ್ಲಿ ಅಂಬೇಡ್ಕರ್ ಫೋಟೋ ಹಾಕಿದ್ದು ಬಿಜೆಪಿ. ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಅಮಾನತ್ತಿನಲ್ಲಿಟ್ಟಿದ್ದು ಕಾಂಗ್ರೆಸ್. ಅಭಿವೃದ್ಧಿ ವಿಚಾರದಲ್ಲಿ ಮೋದಿಯನ್ನು ಸೋಲಿಸಲು ಆಗಲ್ಲ ಎಂದು ಗೊತ್ತಾಗಿ ಕಾಂಗ್ರೆಸ್ ದಲಿತರ ಕಾರ್ಡ್ ಫ್ಲೇ ಮಾಡ್ತಿದೆ. ಬಿಜೆಪಿಯಿಂದ ದಲಿತರನ್ನು ದೂರ ಮಾಡಲು ಕಾಂಗ್ರೆಸ್ ಯತ್ನಿಸಿದೆ. ಭಗವದ್ಗೀತೆ, ಕುರಾನ್, ಬೈಬಲ್ ಮನೆಯಲ್ಲಿ, ಸಮಾಜದಲ್ಲಿ ಸಂವಿಧಾನವೇ ನಮಗೆ ರಕ್ಷಣೆ ಎಂದು ಅವರು ಹೇಳಿದರು.

ಗಾಂಧಿಗಿಂತ ದೊಡ್ಡ ಚಿಂತನೆ ಕೊಟ್ಟವರು ಅಂಬೇಡ್ಕರ್. ದೂರದೃಷ್ಟಿ ನಾಯಕ ಅಂಬೇಡ್ಕರ್ ಗೆ ಕಾಂಗ್ರೆಸ್ ಕೊಟ್ಟ ಗೌರವ ಏನೂ ಎಂಬುದು ಜನರಿಗೆ ಗೊತ್ತಿದೆ. ಅಂಬೇಡ್ಕರ್ ಬಗ್ಗೆ ಮಾತಾಡಲು ಕಾಂಗ್ರೆಸ್ ಗೆ ಮುಖ ಇಲ್ಲ. ಅಂಬೇಡ್ಕರ್ ಬಗ್ಗೆ ಮಾತಾಡುವಾಗ ಕಾಂಗ್ರೆಸ್ ನವರು ಬುರ್ಖಾ ಹಾಕಿಕೊಂಡು ಇರಲಿ. ದಯವಿಟ್ಟು ಮಾತಾಡಲು ಹೋಗಬೇಡಿ ಎಂದು ಅವರು ವಾಗ್ದಾಳಿ ನಡೆಸಿದರು.

ಸದನದಲ್ಲಿ ಪೊಲೀಸರು ಹೇಗೆ ಬಂದರು?:

ಸಿ.ಟಿ. ರವಿ ಬಂಧನ, ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹುಣಸೂರು ಹನುಮ ಜಯಂತಿ ವೇಳೆಯೂ ನನಗೂ ಇದೇ ರೀತಿ ಅನುಭವ ಆಗಿತ್ತು. ಮಾತಿನ ಭರಾಟೆಯಲ್ಲಿ ಜನಪ್ರತಿನಿಧಿಗಳು ಬಹಳಷ್ಟು ಬಾರಿ ಸಭ್ಯತೆ ಎಲ್ಲೆ ಮೀರಿದ್ದಾರೆ. ಸದನ ಸಭಾಧ್ಯಕ್ಷರ ಸುರ್ಪದಿಯಲ್ಲಿ ಇರುತ್ತೆ. ಅಲ್ಲಿಗೆ ಪೊಲೀಸರು ಹೇಗೆ ಬಂದರು ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಕಾಂಗ್ರೆಸ್ ನವರು ಪಾಕಿಸ್ತಾನ್ ಜಿಂದಾಬಾದ್ ಎಂದಾಗ ಇದೇ ಲಕ್ಷ್ಮಿ ಹೆಬ್ಳಾಕರ್ ಅದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ. ನಜೀರ್ ಸಾಬ್ ಜಿಂದಾಬಾದ್ ಎಂದು ಘೋಷಿಸಿದ್ದರು. ಅದರ ತಜ್ಞ ವರದಿ ಬಂದ ಮೇಲೆ ಲಕ್ಷ್ಮೀ ಹೆಬ್ಳಾಕರ್ ಸುಮ್ಮನೆ ಆಗಲಿಲ್ವಾ? ಪೊಲೀಸರನ್ನೂ ಛೂ ಬಿಟ್ಟು ಈ ಕೆಲಸ ಮಾಡಿಸಲಾಗಿದೆ. ಈ ವಿಚಾರದಲ್ಲೂ ಫೋರೆನ್ಸಿಕ್ ರೀಪೋರ್ಟ್ ಬರಲಿ. ಯಾರದು ತಪ್ಪು ಎಂಬುದು ಗೊತ್ತಾಗಲಿ. ನಂತರ ಸೂಕ್ತ ಕ್ರಮ ಆಗಲಿ ಎಂದರು.

‘ರಾಜ್ಯದಲ್ಲಿ ಗೂಂಡಾ ರಾಜ್ಯ ಬಂದಿದೆ ಅಥವಾ ಬರುವ ಸೂಚನೆ ಇದೆ. ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ಬಂದಿದೆ. ಇದು ಅದರ ಲಕ್ಷಣ. ಉತ್ತರಪ್ರದೇಶ, ಬಿಹಾರ ಬದಲಾಗಿವೆ. ನಾವು ಈಗ ಅವರ ರೀತಿ ಆಗಿದ್ದೇವೆ. ತಮಿಳುನಾಡಿನಲ್ಲಿ ಜಯಲಲಿತಾ, ಕರುಣಾನಿಧಿ ನಡುವೆ ನಡೆದ ರೀತಿ ಇಲ್ಲಿ ನಡೆದರೆ ರಾಜ್ಯಕ್ಕೆ ಗೌರವ ಬರುತ್ತಾ?’

- ಪ್ರತಾಪ್ ಸಿಂಹ, ಮಾಜಿ ಸಂಸದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಲ್ಕೈದು ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ : ಡಿಕೆಶಿ
ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ