ರಾಜ್ಯವನ್ನು ಕತ್ತಲೆಗೆ ದೂಡಿದ ಕಾಂಗ್ರೆಸ್: ಹಾಲಪ್ಪ ಆಚಾರ

KannadaprabhaNewsNetwork |  
Published : Apr 28, 2024, 01:27 AM ISTUpdated : Apr 28, 2024, 12:02 PM IST
ಕುಕನೂರು ಮಸಬಹಂಚಿನಾಳ ಗ್ರಾಮದಲ್ಲಿ ಜರುಗಿದ ಬಿಜೆಪಿ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಗಾಗಿ ಒಂದು ರು. ವ್ಯಯ ಮಾಡಿಲ್ಲ, ಎಲ್ಲ ಹಣವನ್ನು ಗ್ಯಾರಂಟಿ ಯೋಜನೆಗೆ ನೀಡಿದರು. ಸೋಲ್ತೀವಿ ಎಂದು ಗ್ಯಾರಂಟಿ ಯೋಜನೆ ತಂದು ರಾಜ್ಯದ ಬೊಕ್ಕಸ ಖಾಲಿ ಮಾಡುತ್ತಿದ್ದಾರೆ ಎಂದು ಹಾಲಪ್ಪ ಆಚಾರ ಆರೋಪಿಸಿದ್ದಾರೆ.

ಕುಕನೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಅಭಿವೃದ್ಧಿಗೆ ಒಂದು ಕಲ್ಲು, ಬುಟ್ಟಿ ಮಣ್ಣು ಹಾಕಿಲ್ಲ. ಕಾಂಗ್ರೆಸ್‌ನಿಂದ ರಾಜ್ಯ ಕತ್ತಲಲ್ಲಿ ಇದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಟೀಕಿಸಿದರು.

ತಾಲೂಕಿನ ಬೆಣಕಲ್ಲ ಹಾಗೂ ಮಸಬಹಂಚಿನಾಳ ಗ್ರಾಮದಲ್ಲಿ ಬಿಜೆಪಿ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಗಾಗಿ ಒಂದು ರು. ವ್ಯಯ ಮಾಡಿಲ್ಲ, ಎಲ್ಲ ಹಣವನ್ನು ಗ್ಯಾರಂಟಿ ಯೋಜನೆಗೆ ನೀಡಿದರು. ಸೋಲ್ತೀವಿ ಎಂದು ಗ್ಯಾರಂಟಿ ಯೋಜನೆ ತಂದು ರಾಜ್ಯದ ಬೊಕ್ಕಸ ಖಾಲಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜನರನ್ನು ಸ್ವಾವಲಂಬಿ ಮಾಡುವ ಯೋಜನೆ ಜಾರಿಗೆ ತರಬೇಕು. ಅಧಿಕಾರಕ್ಕೆ ಬರಬೇಕು ಎಂದು ಈ ಚುನಾವಣೆಯಲ್ಲೂ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ. ಯಾಕೆಂದರೆ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಕೇವಲ 230 ಸ್ಥಾನ. ಅಧಿಕಾರಕ್ಕಾಗಿ ಬರಲು 250ಕ್ಕೂ ಹೆಚ್ಚು ಸ್ಥಾನ ಬೇಕು ಎಂದರು.

ಮುಖಂಡ ಈಶಪ್ಪ ಆರೇರ್ ಮಾತನಾಡಿ, ದೇಶ ಕಟ್ಟುವ ಈ ಚುನಾವಣೆ ಬಗ್ಗೆ ಜನರು ಜಾಗೃತರಾಗಬೇಕಿದೆ. ಜಾತಿ, ಮತ ನೋಡಬಾರದು. ರಾಷ್ಟ್ರೀಯ ಅಭಿವೃದ್ಧಿ ಆಗಬೇಕು. ಆ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಬೇಕು ಎಂದು ಹೇಳಿದರು.

ವೀರಣ್ಣ ಅಂಗಡಿ ಮಾತನಾಡಿ, 30 ವರ್ಷದ ಇತಿಹಾಸದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಅವರು ನೀಡಿದಷ್ಟು ಅನುದಾನವನ್ನು ಯಾರೂ ನೀಡಿಲ್ಲ ಎಂದರು.

ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಕ್ಷೇತ್ರ ನೀರಾವರಿ ಬಗ್ಗೆ ರಾಯರಡ್ಡಿ ಎಂದಿಗೂ ಯೋಚನೆ ಮಾಡಿಲ್ಲ ಎಂದರು.

ಮಂಡಳದ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಸಿ.ಎಚ್. ಪೊಪಾ, ಶರಣಪ್ಪ ಈಳಗೇರ, ಶರಣಪ್ಪ ಗುಂಗಾಡಿ, ಶ್ರೀನಿವಾಸ ತಿಮ್ಮಾಪುರ, ಗ್ರಾಪಂ ಸದಸ್ಯ ಶಿವಕುಮಾರ ನಾಗಲಾಪುರಮಠ, ವಕೀಲ ಶಂಕ್ರಪ್ಪ ಸೂರಪುರು, ಬಸವರಾಜ ಗೌರಾ, ನೀಲಪ್ಪ ಬೆಣಕಲ್ಲ, ಮಹಾಂತೇಶ ಹೂಗಾರ, ಪ್ರಭುರಾಜ ಕಲಬುರ್ಗಿ, ಕಲ್ಲಪ್ಪ ತೊಂಡಿಹಾಳ, ಚಂದ್ರು ಬಗನಾಳ, ಶರಣಪ್ಪ ಬಳಗೇರಿ, ಪಾಲಾಕ್ಷಪ್ಪ ಕುಕನೂರು, ಆದೇಶ ಪಾಟೀಲ್, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ