ಬ್ಯಾಡಗಿ: ಬಿಹಾರದಲ್ಲಿ ಮೋದಿ ಮತ್ತು ನಿತೀಶಕುಮಾರ ಜೋಡಿಯು ಕಾಂಗ್ರೆಸ್ ಸೇರಿದಂತೆ ಮಹಾಘಟಬಂಧನವನ್ನು ಧೂಳಿಪಟ ಮಾಡಿದೆ. ಆದರೆ ಜನತೆಯ ತೀರ್ಪನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಚುನಾವಣಾ ಆಯೋಗದ ಮೇಲೆ ದೂರು ಸಲ್ಲಿಸುವ ತನ್ನ ಹಳೇ ಚಾಳಿಯನ್ನು ಮುಂದುವರೆಸುವ ಮೂಲಕ ಹಿಟ್ ಅಂಡ್ ರನ್ ತಂತ್ರ ಅಳವಡಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.ಬಿಹಾರ ಫಲಿತಾಂಶದ ಹಿನ್ನೆಲೆಯಲ್ಲಿ ಪಟ್ಟಣದ ಹಳೇ ಪುರಸಭೆ ಬಳಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಬಿಹಾರದ ಜನತೆಯು ಎನ್‌ಡಿಎಗೆ ಸ್ಪಷ್ಟ ಬಹುಮತ ನೀಡಿದ್ದು ಭರ್ಜರಿ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಹಾರದಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುದೊಡ್ಡ ಮುಖಭಂಗವಾಗಿದೆ ಎಂದರು.
ಈ ವೇಳೆ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಸಂತೋಷಕುಮಾರ ಪಾಟೀಲ, ಶಂಕ್ರಣ್ಣ ಮಾತನವರ, ಶಂಕರಗೌಡ ಪಾಟೀಲ, ಹಾಲೇಶ ಜಾಧವ, ಯಶೋಧರ ಅರ್ಕಾಚಾರಿ, ಪುರಸಭೆ ಮಾಜಿ ಸದಸ್ಯರಾದ ಸುಭಾಸ ಮಾಳಗಿ, ಸರೋಜಾ ಉಳ್ಳಾಗಡ್ಡಿ, ವಿನಯ ಹಿರೇಮಠ, ದ್ಯಾಮನಗೌಡ ಪಾಟೀಲ, ವಿನಾಯಕ ಕಂಬಳಿ, ಪ್ರದೀಪ ಜಾಧವ, ನಿಂಗನಗೌಡ ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.