ಗಾಂಧೀಜಿ ತ್ಯಾಗ ಸ್ಮರಣೆಗೆ 27ರಂದು ಬೆಳಗಾವಿಯಲ್ಲಿ ಸಮಾವೇಶ: ಶಾಸಕ ದೇಶಪಾಂಡೆ

KannadaprabhaNewsNetwork |  
Published : Dec 16, 2024, 12:48 AM IST
ಪೊಟೋ೧೫ಎಸ್.ಆರ್.ಎಸ್೧ (ಆರ್.ವಿ.ದೇಶಪಾಂಡೆ ಮಾತನಾಡಿದರು.)  | Kannada Prabha

ಸಾರಾಂಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತ್ಯಾಗ, ಬಲಿದಾನ, ನಿಸ್ವಾರ್ಥ ನಡೆ ಯುವ ಜನಾಂಗಕ್ಕೆ ಪರಿಚಯಿಸಬೇಕು. ಇತಿಹಾಸ ಮರುಕಳಿಸಬೇಕು.

ಶಿರಸಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತ್ಯಾಗ, ಬಲಿದಾನವನ್ನು ಯುವಕರಿಗೆ ಪರಿಚಯಿಸಲು ಬೆಳಗಾವಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸ್ವಯಂಪ್ರೇರಣೆಯಿಂದ ಡಿ. ೨೭ರ ಸಮಾವೇಶಕ್ಕೆ ಬರಬೇಕು ಎಂದು ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಭಾನುವಾರ ನಗರದ ಟಿಆರ್‌ಸಿ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧೀಜಿ ಅವರು ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆ ಹಮ್ಮಿಕೊಂಡ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದರು.ಕೆಪಿಸಿಸಿ ಸದಸ್ಯರು, ಪ್ರಮುಖರು ಬೆಳಗಾವಿ ೨೬ರ ಅಧಿವೇಶನಕ್ಕೆ ಹಾಗೂ ಪಕ್ಷದ ಎಲ್ಲರೂ ೨೭ರ ಸಮಾವೇಶಕ್ಕೆ ಬರಬೇಕು. ಇಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಆಗಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತ್ಯಾಗ, ಬಲಿದಾನ, ನಿಸ್ವಾರ್ಥ ನಡೆ ಯುವ ಜನಾಂಗಕ್ಕೆ ಪರಿಚಯಿಸಬೇಕು. ಇತಿಹಾಸ ಮರುಕಳಿಸಬೇಕು. ಇತಿಹಾಸದ ಪುಟಗಳು ಯಾವಾಗಲೂ ಜೀವಂತವಾಗಿರುತ್ತವೆ. ಸಾವಿರಾರು ವರ್ಷ ಇರುತ್ತವೆ. ಇಂತಹ ಪವಿತ್ರವಾದ ಇತಿಹಾಸ ತಿಳಿಸಲು ಈ ಶತಮಾನದ ಉತ್ಸವ ವಿಜೃಂಭಣೆಯಿಂದ ಆಗಬೇಕು. ಅದಕ್ಕಾಗಿ ಸಿದ್ಧತೆ ಆಗಿವೆ ಎಂದರು.ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ೧೮೦ ಸಂಸದರು, ಎಲ್ಲ ಪ್ರಮುಖರು ಬರಲಿದ್ದಾರೆ. ದೇಶದ ನಾಯಕರು ಬೆಳಗಾವಿಗೆ ಬರಲಿದ್ದು, ಅವರ ಸ್ವಾಗತಕ್ಕೆ ಸಿದ್ಧರಿರಬೇಕಾಗುತ್ತದೆ ಎಂದ ಅವರು, ಸ್ವಯಂಪ್ರೇರಣೆಯಿಂದ ಬೆಳಗಾವಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಮಹಾತ್ಮ ಗಾಂಧಿಜಿ ಅವರು ೧೯೨೪ರಲ್ಲಿ ಮೊದಲ ಅಧಿವೇಶನ ಮಾಡಲಾಗಿದೆ. ನಾನೂ ಸಣ್ಣವನಿದ್ದಾಗ ಕಲಿಲಿಕ್ಕೆ ಬೆಳಗಾವಿಯಲ್ಲಿ ಇದ್ದಾಗ ಅದನ್ನು ನೋಡಿದ್ದೆ. ನಾವಿದ್ದ ವಾಡೆ ಪಕ್ಕದಲ್ಲೇ ನಿರ್ಮಾಣ ಮಾಡಲಾದ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂದು ನೆನಪಿಸಿಕೊಂಡರು.ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ತಪ್ಪಿಸದೇ ಬರಬೇಕು. ಮೈಸೂರು ದಸರಾ ಮಾದರಿಯಲ್ಲಿ ಮಾಡಬೇಕು ಎಂಬ ಸಂಕಲ್ಪ ಮಾಡಲಾಗಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿಯಲ್ಲಿ ಡಿ. ೨೬ರಂದು ಬೆಳಗಾವಿಯಲ್ಲಿ ಐತಿಹಾಸಿಕ ಘಟನೆ ನಡೆಯಲಿದೆ. ಒಂಬತ್ತೂವರೆ ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಅಲಂಕಾರ ಆಗಲಿದೆ. ೩೨ ಕಿಮೀ ತನಕ ಈ ಅಲಂಕಾರ ಆಗಲಿದೆ. ಎಲ್ಲ ರಾಜ್ಯದ, ಕೇಂದ್ರದ ಮುಖಂಡರು ಬರಲಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಜನರು ಬರಲಿದ್ದಾರೆ. ಈ ಕಾರಣದಿಂದ ಪ್ರತಿ ಬೂತ್‌ನಿಂದ ಹೆಚ್ಚೆಚ್ಚು ಜನರು ಬರಬೇಕು. ೨೧ಕ್ಕೆ ಬೂತ್ ಮಟ್ಟದ ಸಮಿತಿ ಕರೆದು ಹೆಚ್ಚು ಮಾಡಲಾಗುತ್ತದೆ ಎಂದರು.ಪ್ರಮುಖರಾದ ರಾಮ ಮೊಗೇರ, ಜಿ.ಟಿ. ತಟ್ಟಿಸರ, ನಾಗರಾಜ ನಾರ್ವೇಕರ್, ಅಬ್ಬಾಸ ತೋನ್ಸೆ, ಜಗದೀಶ ಗೌಡ ಇತರರು ಇದ್ದರು. ಬಸವರಾಜ ದೊಡ್ಮನಿ ನಿರೂಪಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''