ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಪಕ್ಷ ಕಾಂಗ್ರೆಸ್-ಶಾಸಕ ಮಾನೆ

KannadaprabhaNewsNetwork | Published : Apr 23, 2024 12:51 AM

ಸಾರಾಂಶ

ವಿಶ್ವಗುರು ಬಸವಣ್ಣನವರ ಪರಿಕಲ್ಪನೆಯಂತೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗಲೆಲ್ಲ ಸಾಮಾಜಿಕ ನ್ಯಾಯ ದೊರಕಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ವಿಶ್ವಗುರು ಬಸವಣ್ಣನವರ ಪರಿಕಲ್ಪನೆಯಂತೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗಲೆಲ್ಲ ಸಾಮಾಜಿಕ ನ್ಯಾಯ ದೊರಕಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಒಬಿಸಿ ಘಟಕದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಧಾನ ಉಳಿದರೆ ಮಾತ್ರ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ಸಿಗಲಿದೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಕಸಿಯಲೆತ್ನಿಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಆಯೋಗ ರಚಿಸಿ ಮೀಸಲಾತಿ ಮುಂದುವರಿಸುವಲ್ಲಿ ಕ್ರಮ ಕೈಗೊಂಡಿದೆ. ಈ ವಿಚಾರಗಳಲ್ಲಿ ನಂಬಿಕೆ ಇಲ್ಲದ ಬಿಜೆಪಿ ಸಂವಿಧಾನ ಬದಲಿಸಿ ಅವಕಾಶ ಕಸಿಯುವ ಲೆಕ್ಕಾಚಾರದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ ಮಾತನಾಡಿ, ಹಾನಗಲ್ ತಾಲೂಕಿನಲ್ಲಿ ಎಲ್ಲ ವರ್ಗಗಳ ಜನರನ್ನೂ ಸಮಾನವಾಗಿ ಕಂಡು ಜತೆಗೆ ಕರೆದೊಯ್ಯುವ ಕೆಲಸವನ್ನು ಶಾಸಕ ಶ್ರೀನಿವಾಸ ಮಾನೆ ಮಾಡುತ್ತಿದ್ದಾರೆ. ಒಬಿಸಿಗೆ ಸೇರಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದಾರೆ ಎಂದರು.ತಾಪಂ ಮಾಜಿ ಅಧ್ಯಕ್ಷ ಎಲ್.ಕೆ. ಶೇಷಗಿರಿ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮುಖಂಡರಾದ ಪರಶುರಾಮ್ ಅಂಬಿಗೇರ, ಬಸವರಾಜ ಬಡೆಮ್ಮಿ, ಚಂದ್ರಣ್ಣ ಪಾಟೀಲ, ಲೋಹಿತ್ ಈಳಿಗೇರ, ಹರೀಶ ಈಳಿಗೇರ, ಕರಿಯಪ್ಪ ಗಂಟೇರ, ಚನ್ನಬಸಪ್ಪ ದೊಡ್ಡಚಿಕ್ಕಣ್ಣನವರ, ಲೋಕೇಶ ಅಗಸಿಬಾಗಿಲ, ತಿಪ್ಪಣ್ಣ ದೊಡ್ಡಕೋವಿ, ಮಂಜು ತರವಂದ, ದ್ಯಾಮಜ್ಜ ಕುಂಟನಹೊಳ್ಳಿ, ಹನುಮಂತಪ್ಪ ಅಂಬಿಗೇರ, ರಾಜೇಂದ್ರ ಬಾರ್ಕಿ, ಮಲ್ಲಿಕಾರ್ಜುನ ದೇವಣ್ಣನವರ, ಸಂತೋಷ ಸುಣಗಾರ, ಮಹೇಶ ಪವಾಡಿ, ಆದರ್ಶ ಶೆಟ್ಟಿ, ಅನಂತಗೌಡ ಪಾಟೀಲ, ಬಸಲಿಂಗಪ್ಪ ದೊಡ್ಡಮನಿ, ಕುಮಾರ ಜಾಡರ, ಶಂಕ್ರಪ್ಪ ತೋಟಗೇರ, ಮಮತಾ ಆರೆಗೊಪ್ಪ ಈ ಸಂದರ್ಭದಲ್ಲಿದ್ದರು.

Share this article