- ಗ್ರಾಮೀಣ ಜೀವನ ಸುಧಾರಣೆಗೆ ಕೇಂದ್ರ ಸರ್ಕಾರ ಕ್ರಮ: ಆರಾಧ್ಯ - - -
ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಹೆಸರು ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಅಂತ ಬದಲಿಸಿದೆ. ಆದರೆ, ರಾಮನ ಹೆಸರು ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರಿಗೆ ಹೊಟ್ಟೆ ಉರಿ ಆರಂಭವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ.ಆರಾಧ್ಯ ಟೀಕಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ವೇದಿಕೆಯಾಗಿದ್ದ ನರೇಗಾವನ್ನು ಬದಲಿಸಿ ವಿಕಸಿತ ಭಾರತದ ಪರಿಕಲ್ಪನೆಯಡಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಎಐ ತಂತ್ರಜ್ಞಾನ ಬಳಸಿ, ಗ್ರಾಮೀಣರ ಜೀವನಮಟ್ಟ ಸುಧಾರಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಆದರೆ, ಕಾಂಗ್ರೆಸ್‌ನವರಿಗೆ ಭ್ರಷ್ಟಾಚಾರ ಮಾಡಲು ಇದ್ದ ಎನ್ಆರ್ಇಜಿ ಹೋಯ್ತಲ್ಲ ಎಂದು ನೋವು ಶುರುವಾಗಿದೆ. ಇದರಿಂದಾಗಿಯೇ ಕೇಂದ್ರ ಸರ್ಕಾರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.ಬಿಜೆಪಿ ಜಿಪಂ ಮಾಜಿ ಸದಸ್ಯ, ಕುರುಬ ಮುಖಂಡ ಸೊಕ್ಕೆ ನಾಗರಾಜ್ ಮಾತನಾಡಿ, ಹಳ್ಳಿಗಳ ಉದ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಹೆಸರನ್ನಷ್ಟೇ ಬದಲಿಸಿದ್ದಾರೆ. ಇದರಿಂದ ೧೦೦ ದಿನಗಳಿಂದ ೧೨೫ ದಿನಗಳವರೆಗೆ ಹೆಚ್ಚಿಸಿದ್ದಾರೆ. ಗ್ರಾಮ ಭಾರತದ ಪರಿಕಲ್ಪನೆ ವಿಸ್ತಾರಮಾಡಿ ಬಡವರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ₹೯೫ ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಗ್ರಾಪಂಗಳಿಗೆ ಹೆಚ್ಚಿನ ಬಲ ತುಂಬಿ ಆಯಾ ಗ್ರಾಮಗಳ ವ್ಯಾಪ್ತಿಯಲ್ಲೇ ವಿಕಸಿತ ಭಾರತ ಪರಿಕಲ್ಪನೆಯನ್ನೇ ವಿಸ್ತಾರ ಮಾಡಿ ಕೂಲಿ ಕಾರ್ಮಿಕರಿಗೆ, ಬಡವರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಲು ಹೊರಟ್ಟಿದ್ದಾರೆ ಎಂದರು.
ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಆರಂಭದಲ್ಲಿ ನರೇಗಾ ಎಂದಷ್ಟೇ ಇತ್ತು. ೨೦೦೯ರಲ್ಲಿ ಮಹಾತ್ಮಾ ಗಾಂಧಿ ಹೆಸರು ಸೇರಿಸಿದವರು ಆಗಿನ ಎನ್‌ಡಿಎ ಸರ್ಕಾರ. ಅಷ್ಟು ದಿನ ಅವರಿಗೆ ಮಹಾತ್ಮಾ ಗಾಂಧಿ ನೆನಪಿಗೆ ಬರಲಿಲ್ಲವೇ? ಮೊದಲು ಕೇಂದ್ರ ಸರ್ಕಾರ ಶೇ.೭೫ ಅನುದಾನ, ರಾಜ್ಯ ೨೫ರಷ್ಟು ನೀಡುತ್ತಿತ್ತು. ಆದರೆ ಈಗ ರಾಜ್ಯ ಶೇ.೪೦ರಷ್ಟು ಹಣ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿಸ್ತುವಳ್ಳಿ ಬಾಬು, ಜೆ.ವಿ.ನಾಗರಾಜ್, ಕಾರ್ಯದರ್ಶಿ ಧರ್ಮ ನಾಯ್ಕ್, ಉಪಾಧ್ಯಕ್ಷರಾದ ಕುಬೇರಪ್ಪ, ಪ್ರಕಾಶ್, ಮಾರುತಿ, ಬಾಲಕೃಷ್ಣ, ಬಾಲು, ಲ್ಯಾಬ್ ಶಿವು, ಅಸಗೋಡು ರವಿ, ನಾಗರಾಜ್ ಮತ್ತಿತರರು ಇದ್ದರು.
- - --೩ಜೆಎಲ್ಆರ್ ಚಿತ್ರ೨ಎ:
ಜಗಳೂರು ಪಟ್ಟಣದಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.