ಕಳಸದಲ್ಲಿ ಬಿಜೆಪಿ ನೂತನ ಅಧ್ಯಕ್ಷರ ಜವಾಬ್ದಾರಿ ಸ್ವೀಕಾರ ಸಮಾರಂಭ
ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲು ಮುಂದಾದರೂ, ಅದನ್ನು ಜಾರಿಗೆ ತರಲು ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ. ಮಹಿಳೆಯರಿಗೆ ಸಿಗಬೇಕಾದ ಅಧಿಕಾರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಇದನ್ನು ಮಹಿಳೆಯರು ಹೆಚ್ಚಾಗಿ ಚರ್ಚಿಸಬೇಕು ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಕಳಸದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ನೂತನ ಅಧ್ಯಕ್ಷರ ಜವಾಬ್ದಾರಿ ಸ್ವೀಕಾರ ಸಮಾರಂಭ ಹಾಗೂ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಕಳಸದ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಮಹತ್ತರವಾಗಿದೆ. ಬಿಜೆಪಿ ಅಧಿಕಾರ ದಲ್ಲಿ ಇದ್ದಾಗ ಮಾಡಿದ ಶಾಶ್ವತ ಅಭಿವೃದ್ಧಿ ಕಾರ್ಯ ಮತದಾರರರಿಗೆ ಮುಟ್ಟಿಸುವ ಕೆಲಸಗಳು ಆಗಬೇಕು. ಕಳಸ ತಾಲೂಕು ಕೇಂದ್ರವಾಗಲು ಬಿಜೆಪಿಯೇ ಕಾರಣ.ಆದರೆ, ಅದನ್ನು ಪೂರ್ಣ ತಾಲೂಕು ಕೇಂದ್ರವನ್ನಾಗಿ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲೇ ಕಳಸ ಪೂರ್ಣವಾದ ತಾಲೂಕು ಕೇಂದ್ರ ಆಗಲಿದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ, ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ. ಇದು ಕೇವಲ ರಾಜಕೀಯ ಪಕ್ಷವಾಗಿರದೆ ದೇಶಸೇವೆಯಲ್ಲಿ ತೊಡಗಿರುವ ಸಂಘಟನೆಯಾಗಿದೆ. ಗಡಿಯಲ್ಲಿ ಸೈನಿಕರು ದೇಶ ಕಾಯುತ್ತಿದ್ದರೆ, ದೇಶದ ಒಳಗಡೆ ಬಿಜೆಪಿ ಕಾರ್ಯಕರ್ತರು ದೇಶ ಕಾಯುತ್ತಿದ್ದಾರೆ.ಹಿಂದಿನ ಕಾಂಗ್ರೆಸ್ ಸರ್ಕಾರ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.ಪಕ್ಷದ ಅಧ್ಯಕ್ಷರಾಗಿ ಶ್ರೀಕಾಂತ್ ಕೆಳಭಾಗ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕೃತ ಜವಾಬ್ದಾರಿ ನೀಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ ಮಹೇಶ್ ಬಸರಿಕಲ್ಲು, ಸುಂದರ ಶೆಟ್ಟಿ, ಉಪಾಧ್ಯಕ್ಷರಾಗಿ ಅಚಿಜನ್ ಕುಮಾರ್, ರಮೇಶ್ ಮರಸಣಿಗೆ, ರವಿ ಕಳಕೋಡು, ರಂಗನಾಥ್ ಹಳುವಳ್ಳಿ, ಸುವರ್ಣಮ್ಮ, ಗೋಪಾಲ ಗೌಡ, ಸತೀಶ್, ವಿಜೇಂದ್ರ ನರ್ಗಲ್, ಸುರೇಶ್, ಕಾರ್ಯದರ್ಶಿಗಳಾಗಿ ರಾಘವೇಂದ್ರ, ನಿರಂಜನ ಶೆಟ್ಟಿ, ಸುನೀಲ್ ಹೆಮ್ಮಕ್ಕಿ, ಮೋಹನ್, ಕೇಶವಮೂರ್ತಿ, ರಾಜೇಂದ್ರ, ಪ್ರವೀಣ್ ಹಾಗೂ ಕಳಸ ನಗರ ಘಟಕ ಅಧ್ಯಕ್ಷ ಪ್ರಸಿದ್ಧ ಜೈನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಉಷಾ ನೆಲ್ಲಿಕೆರೆ, ರೈತ ಮೋರ್ಚಾ ಅಧ್ಯಕ್ಷ ವಿಜಯ ಗೌಡ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಧರ್ಮೇಂದ್ರ, ಯುವ ಮೋರ್ಚಾ ಅಧ್ಯಕ್ಷ ರವಿ ಯಳಂದೂರು, ಉಪಾಧ್ಯಕ್ಷ ರವಿ ಹೊಸೂರು, ಪ್ರಧಾನ ಕಾರ್ಯದರ್ಶಿ ಪ್ರಥಮ್, ಒಬಿಸಿ ಮೋರ್ಚಾ ಅಧ್ಯಕ್ಷ ವಸಂತ ರಾಗಿಹಳ್ಳಿ, ಎಸ್.ಸಿ ಮೋರ್ಚಾ ಅಧ್ಯಕ್ಷ ಮುತ್ತಪ್ಪ, ಪ್ರಧಾನ ಕಾಯದರ್ಶಿ, ಉಮೇಶ್ ಹಿರೇಬೈಲು, ಎಸ್.ಟಿ ಮೋಚಾ ಅಧ್ಯಕ್ಷ ಉದಯ್ ಬಿಳಗಲ್ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮೂಡಿಗೆರೆ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಎಂ.ಎ.ಶೇಷಗಿರಿ, ಗಿರೀಶ್ ಹೆಮ್ಮಕ್ಕಿ, ನಾಗೇಶ್ ಭಟ್, ಸುಜಯ ಸದಾನಂದ, ಕೆ.ಎ.ರಂಗನಾಥ್, ವೆಂಕಟಸುಬ್ಬಯ್ಯ, ಮೋಹನ್ ಗುಳ್ಯ ಇದ್ದರು.ಪೊಟೋ೨೩ಕಳಸ೧ಕಳಸದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ನೂತನ ಅಧ್ಯಕ್ಷರ ಜವಾಬ್ದಾರಿಯನ್ನು ಶ್ರೀಕಾಂತ್ ಕೆಳಭಾಗ ಸ್ವೀಕರಿಸಿದರು.