;Resize=(412,232))
ಶಿವಮೊಗ್ಗ : ‘ಮಗನಿಗೆ ಕಾಶ್ಮೀರಕ್ಕೆ ಹೋಗಬೇಡ ಎಂದಿದ್ವಿ, ಆದರೂ ಹೋಗಿದ್ದರು. ಮಗ ವಾಪಸ್ ಬರ್ತಾನೆ ಅಂದುಕೊಂಡರೆ ಶಾಕಿಂಗ್ ನ್ಯೂಸ್ ಬಂತು. ನನ್ನ ಮಗ ಬರದಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದಕರ ವಿರುದ್ಧ ಪ್ರತಿಕಾರ ತೀರಿಸಿದ್ದಾರಲ್ಲ ಎಂಬ ಅಲ್ಪ ಸಮಾಧಾನ ಇದೆ’ ಎಂದು ಪಹಲ್ಗಾಂನಲ್ಲಿ ಮೃತಪಟ್ಟ ಮಂಜುನಾಥ್ ರಾವ್ ತಾಯಿ ಸುಮತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆನಪು ಹೋಗುವುದಿಲ್ಲ. ನಾವು ಸಾಯುವ ತನಕವೂ ಇರುತ್ತದೆ, ದಿನ ಬೆಳಗ್ಗೆ ಎದ್ದಾಗ ನೆನಪು ಆಗುತ್ತದೆ. ರಾತ್ರಿ ಮಲಗಿದ್ದಾಗ ಇಡೀ ಪ್ರಪಂಚ ಮರೆತು ಹೋಗುತ್ತದೆ, ಬೆಳಗ್ಗೆ ಮತ್ತೆ ನೆನಪಾಗುತ್ತದೆ. ಸರಿ ಮಾಡಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇದೆ ಎಂದರು.
ನನ್ನ ಮಗ ಸತ್ತಿದ್ದನ್ನು ಮನಸ್ಸು ಒಪ್ಪಲೇ ಇಲ್ಲ, ಬರ್ತಾನೆ ಅಂದು ಕೊಂಡಿದ್ದೆ. ಆತ ಸಾವನ್ನಪ್ಪಿದ್ದ ಸುದ್ದಿ ತಿಳಿದ ನಂತರ ಸತ್ತಿದ್ದು ನಂಬುವುದಕ್ಕೆ ಒಂದು ತಿಂಗಳು ಬೇಕಾಯಿತು. ಏನ್ ಮಾಡೋದು ಅನಿವಾರ್ಯ ಸಹಿಸಿಕೊಳ್ಳಲೇಬೇಕು ಎಂದು ಬೇಸರಿಸಿದರು.----
ಹೆತ್ತ ತಾಯಿಗೆ ಯಾವ ರೀತಿಯ ನೋವಾಗುತ್ತಿದೆ ಅಷ್ಟೇ ದುಃಖ ನಮಗೂ ಆಗುತ್ತಿದೆ. ಫೋಟೋ ನೋಡಿದಾಗ ಸಾಕಷ್ಟು ನೆನಪಾಗುತ್ತದೆ ಎಂದು ಪಹಲ್ಗಾಮ್‌ನಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಚಿಕ್ಕಮ್ಮ ನಳಿನಿ ಹೇಳಿದರು. ಮಂಜುನಾಥ ನಮ್ಮ ತಾಯಿ ಮನೆಯಲ್ಲಿ ಹುಟ್ಟಿದ ಪ್ರೀತಿಯ ಮೊದಲ ಮೊಮ್ಮಗ ಆಗಿದ್ದ ಎಂದರು.