ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶುಕ್ರವಾರ ರಾತ್ರಿ ಬನಹಟ್ಟಿಯ ಕಾಂಗ್ರೆಸ್ ಕಾರ್ಯಾಲಯ ಆವರಣದಲ್ಲಿ ನಡೆದ ಉಪಚುನಾವಣೆ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಬಾಗಲಕೋಟೆಯಲ್ಲಿ ಮೇಟಿಯವರ ಉತ್ತಮ ಕಾರ್ಯಗಳೇ ಉಮೇಶರಿಗೆ ಆಶೀರ್ವಾದದ ಬಲವಾಗಿ ದಾಖಲೆಯ ೨೨ ಸಾವಿರ ಮತಗಳ ಅಂತರದ ಗೆಲುವು ಕಾಂಗ್ರೆಸ್‌ನದ್ದಾಗಿದೆ ಎಂದರು.
ಕೋಮುವಾದಿ ರಾಜಕಾರಣ ಹಾಗೂ ಮತಕ್ಕಾಗಿ ಬದುಕುವ ಪಕ್ಷ ಬಿಜೆಪಿ ಆದರೆ ಕಾಂಗ್ರೆಸ್ ಪಕ್ಷ ಬದುಕನ್ನು ರೂಪಿಸುವ ಪಕ್ಷ. ಬಿಜೆಪಿಯು ಕುಚೋದ್ಯತನದ ಹೇಳೀಕೆಗಳನ್ನು ನಿಲ್ಲಿಸಬೇಕೆಂದು ನಂಜಯ್ಯನಮಠ ಕಿಡಿಕಾರಿದರು.ತೇರದಾಳ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಜಾತಿಯತೆಯಿಂದಲೇ ಬಿಜೆಪಿ ಅಧೋಗತಿಯತ್ತ ಸಾಗಿದೆ. ಕ್ಷೇತ್ರದಲ್ಲಿ ಬೂತ್‌ಮಟ್ಟದ ಕಾರ್ಯಗಳನ್ನು ರೂಪಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಕಾರ್ಯಕರ್ತರು ಸನ್ನದ್ಧರಾಗಬೇಕೆಂದರು. ತೇರದಾಳ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವಲ್ಲಿ ಮತದಾರರು ಹಾತೊರೆಯುತ್ತಿದ್ದಾರೆ. ಶಾಸಕರ ನೀಚ ಕಾರ್ಯಗಳಿಗೆ ಜನ ಬೇಸತ್ತಿದ್ದಾರೆಂದು ಕೊಣ್ಣೂರ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಪ್ಪ ಸಿಂಗಾಡಿ, ಯಲ್ಲನಗೌಡ ಪಾಟೀಲ, ದೇವಲ ದೇಸಾಯಿ, ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಸಂಗಮೇಶ ಮಡಿವಾಳ, ನೀಲಕಂಠ ಮುತ್ತೂರ, ನೇಮಣ್ಣ ಸಾವಂತನವರ, ಶಂಕರ ಕೆಸರಗೊಪ್ಪ, ಭೀಮಶಿ ಪಾಟೀಲ, ಯಲ್ಲನಗೌಡ ಪಾಟೀಲ, ಸಾಗರ ಹೊಸಮನಿ, ಹನುಮಂತ ಬರಗಲ್, ಹಾರೂನ ಬೇವೂರ, ಜಯಶ್ರೀ ತಿಮ್ಮಾಪುರ, ವಿದ್ಯಾ ಬಿಳ್ಳೂರ, ರೇಣುಕಾ ಮಡ್ಡಿಮನಿ, ಯಾಶಿನ್ ಡಾಲಾಯತ, ಚಂದ್ರು ಹರಿಜನ, ದುಂಡಪ್ಪ ಕರಿಗಾರ, ಶೇಖರ ಹಕ್ಕಲದಡ್ಡಿ, ಇರ್ಷಾದ್ ಮೋಮಿನ್, ಮಾರುತಿ ಸೋರಗಾಂವಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.