ಅನುದಾನ ಇಲ್ಲದೇ ಕಾಂಗ್ರೆಸ್ ಶಾಸಕರಿಗೆ ನಡುಕ: ಹರೀಶ್‌

KannadaprabhaNewsNetwork |  
Published : Jun 30, 2024, 12:46 AM IST
ಶಾಸಕ ಹರೀಶ್, ತಹಸೀಲ್ದಾರ್ ಗುರುಬಸವರಾಜ್ ಶಾಲಾ ಮಕ್ಕಳಿಗೆ ಶೂಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಗ್ಯಾರಂಟಿ ಭರವಸೆಗಳಿಂದ ಸರ್ಕಾರಕ್ಕೆ ಆದಾಯವಿಲ್ಲದೇ, ಕಾಂಗ್ರೆಸ್ ಶಾಸಕರಿಗೂ ಅನುದಾನ ಲಭ್ಯವಾಗದೇ ನರ್‍ವಸ್ ಆಗಿದ್ದಾರೆ ಎಂದು ಶಾಸಕ ಬಿ.ಪಿ ಹರೀಶ್ ಮಲೇಬೆನ್ನೂರಿನಲ್ಲಿ ಹೇಳಿದ್ದಾರೆ.

- ಯಲವಟ್ಟಿಯಲ್ಲಿ ತಾಲೂಕು ಆಡಳಿತದಿಂದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್‌ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಗ್ಯಾರಂಟಿ ಭರವಸೆಗಳಿಂದ ಸರ್ಕಾರಕ್ಕೆ ಆದಾಯವಿಲ್ಲದೇ, ಕಾಂಗ್ರೆಸ್ ಶಾಸಕರಿಗೂ ಅನುದಾನ ಲಭ್ಯವಾಗದೇ ನರ್‍ವಸ್ ಆಗಿದ್ದಾರೆ ಎಂದು ಶಾಸಕ ಬಿ.ಪಿ ಹರೀಶ್ ಹೇಳಿದರು.

ಇಲ್ಲಿಗೆ ಸಮೀಪದ ಯಲವಟ್ಟಿ ಗ್ರಾಮದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಅಸ್ತಿತ್ವಕ್ಕೆ ಬಂದು ೧೩ ತಿಂಗಳಾಗಿವೆ. ಸಿಎಂ ಕುರ್ಚಿಯ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರಕ್ಕೆ ತೊಂದರೆಯಾಗಿದೆ. ಇತ್ತ ಬರಗಾಲವೂ ಜನರನ್ನು ಪರೀಕ್ಷೆಗೊಳಪಡಿಸಿದೆ. ಈ ಹಂತದಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ರೈತರ ಸರ್ವೆ, ಇ-ಸ್ವತ್ತು ಇನ್ನಿತರೆ ಸೇವೆ ಹಾಗೂ ಆರ್ಥಿಕ ತೊಂದರೆ ಇರುವವರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಸೂಚಿಸಿದರು.

ಚಿಕ್ಕಬಿದರಿ ಗಡಿ ಸರಹದ್ದು ಗುರುತಿಸುವ ಕಾರ್ಯ ನಡೆದಿಲ್ಲ. ಯಾರದೋ ಮಾತು ಕೇಳಿ ತಾತ್ಸಾರ ಮಾಡುವುದು ಸೂಕ್ತವಲ್ಲ. ಡಿಸಿ ಆದೇಶದ ಮೇರೆಗೆ ಮಲೇಬೆನ್ನೂರಿನ ಶಾಲಾ ಕಟ್ಟಡವನ್ನು ಮುಖ್ಯಾಧಿಕಾರಿ ಹಾನಿ ಮಾಡಿದ್ದು, ಇಲಾಖೆಯ ಮೇಲಾಧಿಕಾರಿಗಳು ಮತ್ತು ರಾಜಕಾರಣಿಗಳ ಮೌಖಿಕ ಆದೇಶಗಳಿಗೆ ಕರ್ತವ್ಯ ಮಾಡಿದಲ್ಲಿ ನಾಳೆ ಯಾರೂ ನಿಮ್ಮನ್ನು ಕಾಪಾಡಲ್ಲ. ನೊಂದವರಿಗೆ ಸೇವೆ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುವ ಸಂದರ್ಭ ತಂದುಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರನಗೌಡ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ್ ಪಹಣಿಗೆ ಎಫ್‌ಐಡಿ ಮಾಡಿಸಿದರೆ, ಕೃಷಿ ಯಂತ್ರೋಪಕರಣಗಳು ಮತ್ತು ವಿವಿಧ ವಾಹನಗಳು ರಿಯಾಯಿತಿ ದರದಲ್ಲಿ ದೊರಕಲಿವೆ. ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಲು ತಾಡಪಾಲು, ಶಾವಿಗೆ ಮತ್ತು ಖಾರದ ಪುಡಿ ಯಂತ್ರ, ಕೀಟನಾಶಕಗಳು ರಯಾಯಿತಿ ದರದಲ್ಲಿ ದೊರಕುತ್ತವೆ ಮತ್ತು ಪ್ರಧಾನಮಂತ್ರಿ ಕಿರು ಉದ್ಯೋಗ ಯೋಜನೆಯಲ್ಲಿ ₹೧೦ರಿಂದ ₹೧೫ ಲಕ್ಷ ಧನಸಹಾಯ ಸಿಗಲಿದೆ ಎಂದರು.

ಅಧಿಕಾರಿಗಳಾದ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ತಾಲೂಕು ವೈದ್ಯಾಧಿಕಾರಿ ಖಾದರ್, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಜಾಕೀರ್, ಸಮಾಜ ಕಲ್ಯಾಣಾಧಿಕಾರಿ ರಾಮಕೃಷ್ಣಪ್ಪ, ನೀರಾವರಿ ನಿಗಮದ ಧನಂಜಯ್, ಉಪತಹಸೀಲ್ದಾರ್ ರವಿ, ರಾಜಸ್ವ ನಿರೀಕ್ಷಕ ಆನಂದ್, ಸಿಡಿಪಿಓ ಪೂರ್ಣಿಮಾ, ಪಿಡಿಓ ಮಹೇಶ್, ಗ್ರಾಮಾಡಳಿತಾಧಿಕಾರಿ ಶರೀಫ್, ಪಿಎಸ್‌ಐ ಪ್ರಭು ಕೆಳಗಿನಮನಿ ಹಾಗೂ ಗ್ರಾಮಸ್ಥರಾದ ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಕಮಲಾಪುರ ರಮೇಶ್, ಕಿರಣ್, ಕಮಲಾ ನಾಯ್ಕ್, ಕೀರ್ತಿ, ಯೋಮಕೇಶ್ವರಪ್ಪ ಇದ್ದರು.

ಚರಂಡಿ ಸ್ವಚ್ಛತೆ, ರಸ್ತೆ ನಿರ್ಮಾಣ, ಮದ್ಯದ ಅಂಗಡಿ ಸ್ಥಳಾಂತರ, ಸರ್ಕಾರಿ ನಿವೇಶನಗಳಲ್ಲಿ ಅನಧಿಕೃತ ಅಂಗಡಿ, ಮನೆ ಮನೆಗೆ ಗಂಗಾ ಯೋಜನೆಗಳ ಪೈಪ್‌ಗಳ ಹಾನಿ, ಕೆರೆ ಹೂಳೆತ್ತುವುದು, ಇತರೆ ಅರ್ಜಿಗಳು ದಾಖಲಾದವು. ವಿವಿಧ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

- - -

ಕೋಟ್‌ ಮನೆ ಬಾಗಿಲ ಬಳಿ ಅಧಿಕಾರಿಗಳು ಆಗಮಿಸಿ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ವಿನೂತನ ಪ್ರಯತ್ನ ಜನಸ್ಪಂದನೆಯಾಗಿದ್ದು, ಜನರು ಸದುಪಯೋಗ ಮಾಡಿಕೊಳ್ಳಬೇಕು

- ಗುರುಬಸವರಾಜ್, ತಹಸೀಲ್ದಾರ್

- - -

-೨೭ಎಂಬಿಆರ್೧:

ಶಾಸಕ ಹರೀಶ್, ತಹಸೀಲ್ದಾರ್ ಗುರುಬಸವರಾಜ್ ಶಾಲಾ ಮಕ್ಕಳಿಗೆ ಶೂಗಳನ್ನು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!