ಲವ್‌ ಜಿಹಾದ್‌ಗೆ ಪೂರಕವಾಗಿ ಕಾಂಗ್ರೆಸ್‌ ಮುಸ್ಲಿಂ ತುಷ್ಟೀಕರಣ: ಮಿಲಿಂದ್‌ ಪರಾಂಡೆ

KannadaprabhaNewsNetwork |  
Published : May 12, 2026, 02:15 AM IST
ಮಿಲಿಂದ್‌ ಪರಾಂಡೆ | Kannada Prabha

ಸಾರಾಂಶ

ಕರ್ನಾಟಕ ಸೇರಿ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ ಜೊತೆಗೆ ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌, ಕಾರ್ಪೋರೇಟ್‌ ಜಿಹಾದ್‌ಗಳು ನಡೆಯುತ್ತಿವೆ.

ಧಾರವಾಡ:

ರಾಜ್ಯದಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಸಮುದಾಯದ ತುಷ್ಟೀಕರಣ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷದ್‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ಸೇರಿ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ ಜೊತೆಗೆ ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌, ಕಾರ್ಪೋರೇಟ್‌ ಜಿಹಾದ್‌ಗಳು ನಡೆಯುತ್ತಿವೆ ಎಂದು ಹುಬ್ಬಳ್ಳಿಯ ಜಿಮ್‌ ಪ್ರಕರಣವನ್ನು ಅವರು ಪ್ರಸ್ತಾಪಿಸಿದರು.

ಪ್ರಮುಖವಾಗಿ ರಾಜ್ಯದಲ್ಲಿ ಗೋವುಗಳ ರಕ್ಷಣೆಯಾಗುತ್ತಿಲ್ಲ. ಕೇರಳ, ತಮಿಳುನಾಡು ಕಡೆಗೆ ಗೋವು ಸಾಗಣೆಯಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕಾಗಿದೆ. ಇದಕ್ಕಾಗಿ ತಪಾಸಣಾ ಕೇಂದ್ರ ತೆರೆಯಬೇಕು ಎಂದ ಅವರು, ಶಾಲೆ-ಕಾಲೇಜುಗಳಲ್ಲಿ ಮಕ್ಕಳು, ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಇಂತಹ ಅನೈತಿಕ ಚಟುವಟಿಕೆಗಳು ಸಮಾಜದ ಮೌಲ್ಯ ಕುಸಿತ ತೋರುತ್ತಿದೆ. ವಿವಿಧ ಸಮುದಾಯಗಳ ಮಧ್ಯೆ ಅಸಮತೋಲನ ಉಂಟು ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಲುವು ಹಾಗೂ ನಿಯಮಗಳನ್ನು ಜಾರಿಗೆ ತರಬೇಕು ಎಂದರು.

ಲವ್‌ ಜಿಹಾದ್‌, ಅಕ್ರಮ ಗೋ ಮಾಂಸ ಸಾಗಾಣಿಕೆ ಸೇರಿದಂತೆ ಅನೈತಿಕ ಚಟುವಟಿಕೆ ತಡೆಯಲು ವಿಶ್ವ ಹಿಂದೂ ಪರಿಷದ್‌ ಸದಸ್ಯರು ಪಣತೊಟ್ಟಿದೆ. ದುಷ್ಟರ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳುವ ಬದಲು ಹಿಂದೂ ಸಂಘಟನೆಗಳ ಮುಖಂಡರ ಮೇಲೆ ದೂರು ದಾಖಲಿಸಲಾಗುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ ಎಂದರು.

ವಿಎಚ್‌ಪಿ ಸಂಘಟನೆಯು ಉತ್ತರ ಕರ್ನಾಟಕ ಪ್ರಾಂತದ ವಿವಿಧ ಜಿಲ್ಲೆಗಳಲ್ಲಿ 100 ಸಮಿತಿಗಳ ರಚನೆ ಹಾಗೂ ಸದಸ್ಯರ ಕಾರ್ಯಾಗಾರ ಆಯೋಜಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸಮಾಜದ ಜಾಗೃತಿ ಹಾಗೂ ರಾಷ್ಟ್ರೀಯ ಏಕತೆ ನೆಲೆಸಲು ಕಾರ್ಯಯೋಜನೆ ರೂಪಿಸಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ವಿಚಾರವಾಗಿ, ಬಂಗಾಳದಲ್ಲಿ ಈ ಹಿಂದೆ ನೂರಾರು ಹಿಂದೂಗಳ ಮಾರಣ ಹೋಮ, ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ನುಸುಳುಕೋರರನ್ನು ಗುರುತಿಸಿ ಹೊರ ಹಾಕಬೇಕಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅಲ್ಲಿಯ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಡಿಮೆ ಇಂಧನ ಬಳಕೆ ವಿಚಾರ ಸಮರ್ಥಿಸಿಕೊಂಡ ಅವರು, ಈ ಹೇಳಿಕೆಯಲ್ಲಿ ತಪ್ಪೇನಿಲ್ಲ. ಉತ್ತಮ ಆಲೋಚನೆ. ಯುದ್ಧದ ಸಮಯದಲ್ಲಿ ಇಂತಹ ಸಂದರ್ಭ ಬರಲಿದೆ. ಹಿಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಹ ಒಂದು ಹೊತ್ತಿನ ಊಟ ಬಿಡುವಂತೆ ಮನವಿ ಮಾಡಿದ್ದರು ಎಂಬುದನ್ನು ಸ್ಮರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಡಾ. ಎಸ್.ಆರ್. ರಾಮನಗೌಡರ, ಗೋವರ್ಧನರಾವ್‌, ಮಹೇಶ ಪಾಟೀಲ, ಈರೇಶ ಅಂಚಟಗೇರಿ ಇದ್ದರು.11ಡಿಡಬ್ಲೂಡಿ9

-----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕವಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆ