ಒಂದು ವರ್ಗದ ಓಲೈಕೆಗೆ ಕಾಂಗ್ರೆಸ್ ರಾಮಮಂದಿರಕ್ಕೆ ವಿರೋಧ: ಶೋಭಾ

KannadaprabhaNewsNetwork |  
Published : Jan 19, 2024, 01:45 AM IST

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನವನ್ನು ಬಿಜೆಪಿ ವತಿಯಿಂದ ಸ್ವಚ್ಛಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಗುರುವಾರ, ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನವನ್ನು ಬಿಜೆಪಿ ವತಿಯಿಂದ ಸ್ವಚ್ಛಗೊಳಿಸಲಾಯಿತು.

ಉಡುಪಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ, ರಾಮಮಂದಿರ ಲೋಕಾರ್ಪಣೆಗೆ ಕಾಂಗ್ರೆಸ್ ನಾಯಕರ ಗೈರು ಹಾಜರಿ ಒಂದು ವರ್ಗವನ್ನು ತೃಪ್ತಿ ಪಡಿಸುವ ಹುನ್ನಾರ ಎಂದರು. ಇಂಡೊನೇಶಿಯಾ ಒಂದು ಮುಸ್ಲೀಂ ದೇಶ, ಅಲ್ಲಿ ಮಹಾಭಾರತ - ರಾಮಾಯಣದ ಮಹಾಪುರುಷರ ಹೆಸರನ್ನು ಅಲ್ಲಿಯ ಮಕ್ಕಳಿಗೆ ಇಡುತ್ತಾರೆ, ಅಲ್ಲಿ ರಾಮಕಥಾ ಆಯೋಜಿಸುತ್ತಾರೆ, ಅಲ್ಲಿನ ರಾಜನಿಗೆ ಹಿಂದೂ ದೇವರ ಹೆಸರು ಇಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಒಂದು ವರ್ಗದ ಓಲೈಕೆಗಾಗಿ ರಾಮನ ತಿರಸ್ಕಾರ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ನಾಯಕರ ಮನೆಗೆ ಹೋದರೆ, ಅವರು ಅಲ್ಲಿ ರಾಮ, ಕೃಷ್ಣ, ಶಿವನ ಪೂಜೆ ಮಾಡುತ್ತಾರೆ, ಮನೆಯಿಂದ ಆಚೆ ಬಂದರೆ ನಾಟಕ ಮಾಡುತ್ತಾರೆ. ಚುನಾವಣೆ ಬಂದಾಗ ರಾಹುಲ್ ಗಾಂಧಿ ಮಂದಿರ ದೇವಸ್ಥಾನ ಸುತ್ತುತ್ತಾರೆ, ಈಗ ರಾಮಮಂದಿರದ ಉದ್ಘಾಟನೆಯನ್ನು ಬಹಿಷ್ಕಾರ ಮಾಡುತ್ತಾರೆ. ಕಾಂಗ್ರೆಸ್‌ನ ಅನೇಕ ನಾಯಕರಿಗೆ ರಾಮಮಂದಿರ ಉದ್ಘಾಟನೆಗೆ ಹೋಗಬೇಕು ಎಂಬ ಆಸೆ ಇದೆ, ಆದರೇ ರಾಜಕೀಯದ ಕಾರಣಕ್ಕೆ ಹೋಗುತ್ತಿಲ್ಲ, ಲೋಕಸಭಾ ಚುನಾವಣೆ ಮುಗಿದ ಕೂಡಲೇ ಎಲ್ಲರೂ ಅಯೋಧ್ಯೆಗೆ ಹೋಗ್ತಾರೆ, ರಾಮನ ದರ್ಶನ ಮಾಡುತ್ತಾರೆ ಎಂದು ಶೋಭಾ ಹೇಳಿದರು.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಬಗ್ಗೆ ಕಾಂಗ್ರೆಸ್ ನಲ್ಲಿ ಆರಂಭದಿಂದಲೂ ಚರ್ಚೆ ಇದೆ. ಅಧಿಕಾರಕ್ಕಾಗಿ ಹೊಡೆದಾಟ ನಡೆಯುತ್ತಿದೆ, ಲೋಕಸಭೆ ಚುನಾವಣೆ ಹೊತ್ತಿಗೆ ಈ ಬಿರುಕು ದೊಡ್ಡದಾಗುತ್ತದೆ, ಅದು ಯಾವ ಹಂತಕ್ಕೆ ತಲುಪುತ್ತದೆ ಎಂದು ಊಹಿಸುವುದು ಕಷ್ಟ. ಕಾಂಗ್ರೆಸ್‌ ನ ಹಲವಾರು ಗೆಳೆಯರು ಸರಕಾರ ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಕಾದು ನೋಡೋಣ ಏನೇನಾಗುತ್ತೆ ಅಂತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!