ಸೌಲಭ್ಯ ವಂಚಿತರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಬದ್ಧ: ಎಚ್.ಎಂ.ರೇವಣ್ಣ

KannadaprabhaNewsNetwork | Published : Oct 3, 2024 1:23 AM

ಸಾರಾಂಶ

ಅವಕಾಶಗಳಿಂದ ವಂಚಿತವಾದ ಸಮದಾಯಗಳ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಸಮಾಜದ ಮುಖ್ಯವಾಹಿನಿಗೆ ಈ ಸಮುದಾಯಗಳನ್ನು ತರುವ ಪ್ರಯತ್ನವನ್ನು ಪಕ್ಷ ನಿರಂತರವಾಗಿ ಮಾಡುತ್ತಿದೆ ಎಂದು ಮಾಜಿ ಸಚಿವ, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಎಚ್.ಎಂ. ರೇವಣ್ಣ ದಾವಣಗೆರೆಯಲ್ಲಿ ಹೇಳಿದ್ದಾರೆ.

- ನೂತನ ಮೇಯರ್‌ ಕೆ.ಚಮನ್ ಸಾಬ್‌ಗೆ ಶುಭ ಹಾರೈಕೆ - - - ದಾವಣಗೆರೆ: ಅವಕಾಶಗಳಿಂದ ವಂಚಿತವಾದ ಸಮದಾಯಗಳ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಸಮಾಜದ ಮುಖ್ಯವಾಹಿನಿಗೆ ಈ ಸಮುದಾಯಗಳನ್ನು ತರುವ ಪ್ರಯತ್ನವನ್ನು ಪಕ್ಷ ನಿರಂತರವಾಗಿ ಮಾಡುತ್ತಿದೆ ಎಂದು ಮಾಜಿ ಸಚಿವ, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.

ಬುಧವಾರ ನೂತನ ಮಹಾಪೌರರಾಗಿ ಆಯ್ಕೆಯಾಗಿರುವ ಕೆ.ಚಮನ್ ಸಾಬ್‌ ಅವರಿಗೆ ಶುಭ ಹಾರೈಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೋಷಿತ ಸಮುದಾಯಗಳ ಮೇಲೆ ನಿರಂತರವಾಗಿ ಅಧಿಕಾರದಿಂದ ವಂಚಿಸುವಂತಹ ಪಟ್ಟಭದ್ರರ ಹುನ್ನಾರ ನಡೆಯುತ್ತಿದೆ. ಆದ್ದರಿಂದ ನಾವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬಲಾಢ್ಯರಾಗಬೇಕಿದೆ. ಜೊತೆಗೆ ರಾಜಕೀಯಪ್ರಜ್ಞೆ ಕೂಡ ಬೆಳಸಿಕೊಳ್ಳಬೇಕಾಗಿದೆ ಎಂದರು.

ಚಮನ್ ಸಾಬ್‌ ಪಕ್ಷನಿಷ್ಠೆಗೆ ಪಕ್ಷ ಮತ್ತು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಇವರನ್ನು ಗುರ್ತಿಸಿರುವುದು ಸ್ವಾಗತಾರ್ಹ. ಚಮನ್‌ ಸಾಬ್‌ ಅಧಿಕಾರ ಅವಧಿಯಲ್ಲಿ ಪಾಲಿಕೆ ಉತ್ತಮ ಆಡಳಿತ ನೀಡಲಿದೆ. ಉತ್ತಮ ಅಭಿವೃದ್ಧಿ ಸಾಧನೆ ಮೆರೆಯಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದ್ದು, ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಪದಥತ್ತ ಸಾಗಲಿದೆ ಎಂದು ಹೇಳಿದರು.

ಈ ಸಂದರ್ಭ ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾ ನಿರ್ದೇಶಕ ಎಸ್.ಎಸ್. ಗಿರೀಶ್, ಕೆ. ರೇವಣಸಿದ್ದಪ್ಪ, ಇಟ್ಟಿಗುಡಿ ಮಂಜು, ಎಸ್.ಎಲ್. ಆನಂದಪ್ಪ, ಮಂಜುನಾಥ, ಹರೀಶ್, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

- - - -2ಕೆಡಿವಿಜಿ40ಃ:

ದಾವಣಗೆರೆ ಮಹಾನಗರ ಪಾಲಿಕೆಗೆ ನೂತನ ಮಹಾಪೌರರಾಗಿ ಆಯ್ಕೆ ಆಗಿರುವ ಕೆ.ಚಮನ್ ಸಾಬ್ ಅವರಿಗೆ ಎಚ್.ಎಂ.ರೇವಣ್ಣ ಶುಭ ಹಾರೈಸಿದರು.

Share this article