ಕಾಂಗ್ರೆಸ್‌ನಿಂದ ಮತದಾರರ ಹಕ್ಕು ಕಸಿವ ಹುನ್ನಾರ

KannadaprabhaNewsNetwork |  
Published : Jan 31, 2026, 03:00 AM IST
(ಫೋಟೊ30ಬಿಕೆಟಿ3, ರಾಜು ನಾಯ್ಕರ) | Kannada Prabha

ಸಾರಾಂಶ

ಭಾರತದ ಸಂವಿಧಾನಾತ್ಮಕವಾಗಿ ಮತ್ತು ಚುನಾವಣಾ ಆಯೋಗ ನೀಡಿರುವ ಸಂವಿಧಾನಾತ್ಮಕ ಹಕ್ಕಿನಂತೆ ತಾನು ವಾಸಿಸುವ ಸ್ಥಳದಲ್ಲಿ ಮತದಾನ ಪಟ್ಟಿಯಲ್ಲಿ ಸೇರಿಸುವುದು ಅವರ ಹಕ್ಕು. ಇಂತಹ ಅರ್ಹ ಮತದಾರರ ಬಗ್ಗೆ ಮಾತನಾಡುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ಅರ್ಹ ಮತದಾರರನ್ನು ಅವರ ಹಕ್ಕಿನಿಂದ ವಂಚಿಸುವ ಕುತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಗಂಭೀರವಾಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಪಲ್ಯ ಮುಚ್ಚಿಕೊಳ್ಳಲು ಅಕ್ರಮ ಎಂಬ ಪದ ಬಳಸುವ ಮೂಲಕ ಅರ್ಹ ಮತದಾರರನ್ನು ಅಪಮಾನಿಸುತ್ತಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೂಲಕ ಮನವಿ ಕೊಡಸಿ, ಅರ್ಹ ಮತದಾರರ ಅವಕಾಶ ವಂಚಿತರನ್ನಾಗಿ ಮಾಡಲು ಜಿಲ್ಲಾಡಳಿತಕ್ಕೆ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಭಾರತ ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಶಿಕ್ಷಣ ಸಂಘ ಸಂಸ್ಥೆಗಳಲ್ಲಿ ಓದುವ ಜೊತೆಗೆ ಇಲ್ಲಿಯೇ ವಾಸವಿದ್ದಾರೆ. ತಾವು ವಾಸವಾಗಿರುವ ಪ್ರದೇಶದಲ್ಲಿ ಮತದಾನ ಮಾಡಲು ತಮ್ಮ ಹೆಸರನ್ನು ಸೇರಿಸಿಕೊಳ್ಳುವುದು ಅವರ ಹಕ್ಕು. ಇಂತಹ ವಿದ್ಯಾರ್ಥಿಗಳ ಮತದಾನದ ಹಕ್ಕು ಕಸಿಯುವುದಕ್ಕಾಗಿ ಕಾಂಗ್ರೆಸ್‌ ಹುನ್ನಾರ ನಡೆಸುತ್ತಿದೆ. ಅರ್ಹ ಮತದಾರರಿಗೆ ವಂಚನೆಯಾದಲ್ಲಿ ತಿವ್ರಗತಿಯಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಜಾಲತಾಣ ಬಳಕೆಗೆ ರಾಜ್ಯದಲ್ಲೂ ಮೂಗುದಾರ?
ಕೇಂದ್ರದ ವಿರುದ್ಧ ಮತ್ತೆ ಸಿಎಂ ಸಿದ್ದರಾಮಯ್ಯ ತೆರಿಗೆ ಗುಡುಗು