ಪಾದಯಾತ್ರೆ ಮುಂದೂಡಲು ಕಾಂಗ್ರೆಸ್‌ ಕಾರಣ

KannadaprabhaNewsNetwork |  
Published : Oct 07, 2025, 01:02 AM IST
೬ಶಿರಾ೧: ಶಿರಾ ತಾಲೂಕು ತಾವರೆಕೆರೆಯಲ್ಲಿ ಗೌಡಗೆರೆ ಹೋಬಳಿಯ ರೈತರು ಹಾಗೂ ಮುಖಂಡರ ಸಭೆ ನಡೆಯಿತು. | Kannada Prabha

ಸಾರಾಂಶ

ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ಅ.೬ರಂದು ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆ ರದ್ದಾಗಲು ಕಾಂಗ್ರೆಸ್ ಪಕ್ಷದ ಮುಖಂಡರು ಕಾರಣರಾಗಿದ್ದಾರೆ ಎಂದು ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ಸ್ಥಳೀಯ ಮುಖಂಡ ಗೋಮಾರದಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ

ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ಅ.೬ರಂದು ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆ ರದ್ದಾಗಲು ಕಾಂಗ್ರೆಸ್ ಪಕ್ಷದ ಮುಖಂಡರು ಕಾರಣರಾಗಿದ್ದಾರೆ ಎಂದು ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ಸ್ಥಳೀಯ ಮುಖಂಡ ಗೋಮಾರದಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.

ಈ ಬಗ್ಗೆ ತಾವರೆಕೆರೆ ರಥ ಬೀದಿಯ ಗಣೇಶ ಗುಡಿಯಲ್ಲಿ ನಡೆದ ಗೌಡಗೆರೆ ಹೋಬಳಿಯ ರೈತರು ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷಾತೀತ ಹೋರಾಟ ಎಂದು ನೀರಾವರಿ ಹಕ್ಕೋತ್ತಾಯ ಸಮಿತಿಯಡಿ ಸಂಘಟನೆ ಶುರುಮಾಡಿದ ಸ್ಥಳೀಯ ಕಾಂಗ್ರೆಸ್ ಮುಖಂಡರು, ತಮ್ಮ ಶಾಸಕರ ಒತ್ತಡಕ್ಕೆ ಮಣಿದು ಪಾದಯಾತ್ರೆ ಮುಂದೂಡುವಂತೆ ಪಟ್ಟುಹಿಡಿದು ಪಾದಯಾತ್ರೆ ಮುಂದೂಡಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ರೈತ ಪರ ಜಾಥಾ ತಡೆಯುವಲ್ಲಿ ಶಾಸಕರು ಸದ್ಯಕ್ಕೆ ಯಶಸ್ವಿಯಾಗಿರಬಹುದು. ಇನ್ನು ಮುಂದೆ ನೀರಾವರಿ ಹೋರಾಟ ಮತ್ತಷ್ಟು ಕಾವು ಪಡೆದು ಹೋರಾಟದ ತೀವ್ರತೆ ಹೆಚ್ಚಾಗಲಿದೆ ಎಂದರು.

ತಾವರೆಕೆರೆ ಗ್ರಾಮ ಪಂಚಾಯಿತಿ ಸದಸ್ಯ ಶಿವು ಸ್ನೇಹ ಪ್ರಿಯ ಮಾತನಾಡಿ, ಗೌಡಗೆರೆ ಹೋಬಳಿಗೆ ನೀರು ಹರಿಸಲು ಸದ್ಯದಲ್ಲೇ ನಮ್ಮ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಸರ್ವ ಪಕ್ಷಗಳ ಮುಖಂಡರ ಸಹಕಾರ ಪಡೆದು ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸುತ್ತಿರುವುದಾಗಿ ಕಾಂಗ್ರೆಸ್ ಮುಖಂಡರ ಮಾತು ನಂಬಿ ನಮ್ಮ ನೀರಾವರಿ ಹೋರಾಟ ದಿಕ್ಕು ತಪ್ಪಿದೆ. ಆದರೆ ಇದರಿಂದ ನಮ್ಮ ಹೋರಾಟದ ತೀವ್ರತೆ ಹೆಚ್ಚಾಗಿದೆ ಹೊರತು ಕುಗ್ಗಿಲ್ಲ. ಮುಂದಿನ ದಿನಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಲು ಸದ್ಯದಲ್ಲೇ ದಿನಾಂಕ ನಿಗದಿ ಪಡಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣಪ್ಪ, ಮುಖಂಡರಾದ ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ಗೌಡಗೆರೆ ವೆಂಕಟೇಶ್, ಹುಣಸೇ ಹಳ್ಳಿ ನಾಗರಾಜ್, ಕುಂಬಾರ ಹಳ್ಳಿ ತುಳಸೀ ರಾಮ್, ಮೊಸರಕುಂಟೆ ಶ್ರೀನಿವಾಸ್, ಕೆ. ರಂಗನಹಳ್ಳಿ ಹೇಮಂತ್, ಕಾಮಗೊಂಡನಹಳ್ಳಿ ಶಿವಾನಂದ್, ಗೋಮಾರದಹಳ್ಳಿ ಹನುಮೇಗೌಡ, ಭೂತಪ್ಪನಗುಡಿ ಈರಣ್ಣ, ತಾವರೆಕೆರೆ ಗೋವಿಂದ ರಾಜು, ಡಿ.ರಾಮಯ್ಯ, ರಂಗನಹಳ್ಳಿ ಅಂಗಡಿಯವರ ಗೋವಿಂದರಾಜು, ದಂಡಿಕೆರೆ ರಾಜು, ಗಜ್ಜೀರಳ್ಳಿ ರಾಘವೇಂದ್ರ, ಹೊಸೂರು ಪ್ರಕಾಶ್, ರಮೇಶ್, ರಾಮಚಂದ್ರಪ್ಪ, ನಾರಾಯಣಪುರ ರಂಗಸ್ವಾಮಿ, ಹೇರೂರು ತಿಮ್ಮರಾಜು, ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ