ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಕಡೆ ಹಿಂದುಗಳಿಗೆ ನೇರವಾಗಿ ತೊಂದರೆಯಾಗುತ್ತಿದೆ. ಬಾಗಲಕೋಟೆಯ ಘಟನೆ ನೋಡಿದೆ. ಪಂಕಾ ಮಸೀದಿ ಮೇಲಿಂದ ಚಪ್ಪಲಿ, ಕಲ್ಲು ಎಸೆಯುತ್ತಾರೆ. ಇದಕ್ಕೆ ಸಿಎಂ ಹೇಳತಾರೆ ಕಠಿಣ ಕ್ರಮ ತಗೋಳ್ತೇವೆ ಎಂದು. ಮಸೀದಿಯಲ್ಲಿ ಕಲ್ಲು, ಚಪ್ಪಲಿ ಯಾಕೆ ಬಂತು? ಮಸೀದಿ ಸೀಜ್ ಮಾಡಬೇಕಿತ್ತು. ಮುಲ್ಲಾನ ಬಂಧನ ಆಗಬೇಕಿತ್ತು. ಮಸೀದಿಯೊಳಗಿದ್ದ ಎಲ್ಲರನ್ನು ಬಂಧಿಸಿದ್ದರೆ ಕಠಿಣ ಕ್ರಮ ಎನ್ನಬಹುದಿತ್ತು ಎಂದರು.
ಶಿವಮೊಗ್ಗದಲ್ಲಿ ಅಮಾಯಕ ಹುಡುಗನೊಬ್ಬನಿಗೆ ಮುಸ್ಲಿಂ ಹುಡುಗರು ಹೊಡೆದು ಕೊಲೆ ಮಾಡಿದ್ದಾರೆ. ನೆಲಮಂಗಲದಲ್ಲಿ ಗಲಾಟೆ, ಓಂಶಕ್ತಿ ಮಹಿಳೆಯರ ಮೇಲೆ ಕಲ್ಲೆಸೆಯುತ್ತಾರೆ. ಇಷ್ಟರ ಮೇಲೆ ಮತ್ತೆ ಮತ್ತೆ ಸಿಎಂ ಕೋಟ್ ಮಾಡಿ ಹೇಳುತ್ತಾರೆ, ಕರ್ನಾಟಕ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂದು. ಕರ್ನಾಟಕ ಹಿಂದುಗಳಿಗೆ ಸ್ಮಶಾನವಾಗಿದೆ. ಇದನ್ನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರಕ್ಕೆ ಇದು ಕೊನೆಗಾಲ. ಸಿದ್ದರಾಮಯ್ಯ ಸಿಎಂ ಆಗುತ್ತಾರೋ ಡಿಕೆಶಿ ಆಗುತ್ತಾರೋ, ದಲಿತರು ಆಗುತ್ತಾರೋ ಅದು ಬೇರೆ ವಿಷಯ. ಆದರೆ ಜನರು ಯಾಕಾದರೂ ಈ ಸರ್ಕಾರ ಆಯ್ಕೆ ಮಾಡಿದೆವು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇದು ಕಾಂಗ್ರೆಸ್ ಕೊನೆಯ ಸರ್ಕಾರ. ಹಿಂದು ಸಮಾಜ ಏನು ತಪ್ಪು ಮಾಡಿದೆ ಎಂದು ಪ್ರಶ್ನೆ ಮಾಡಿದರು.ಗಂಪು ಗುಂಪಾಗಿ ಮುಸ್ಲಿಂ ವೋಟ್ ಹಾಕ್ತಾರೆಂದು ಈ ರೀತಿ ಮಾಡುತ್ತಿದ್ದೀರಿ. ನಾನು ಎಲ್ಲ ಮುಸ್ಲಿಮರ ಬಗ್ಗೆ ಹೇಳ್ತಿಲ್ಲ. ಕೊಲೆಗಡುಕ ಮುಸ್ಲಿಮರ ಬಗ್ಗೆ ಹೇಳ್ತಿದಿನಿ. ನಿಮ್ಮ ಮನೆಗಳಲ್ಲಿ ಕೊಲೆಯಾದರೆ ಏನು ಮಾಡುತ್ತಿರಿ. ಆಗಲೂ ವೋಟ್ ಕೇಳ್ತಿರಾ. ಗಣಪತಿ ವಿಸರ್ಜನೆ ಮಾಡಬಾರದು, ಛತ್ರಪತಿ ಶಿವಾಜಿ ಮೆರವಣಿಗೆ ಮಾಡಬಾರದು ಹೇಳಿ ಬಿಡಿ. ಕರ್ನಾಟಕಕ್ಕೂ ಬಾಂಗ್ಲಾದೇಶಕ್ಕೂ ಏನು ವ್ಯತ್ಯಾಸವಿದೆ. ಹಿಂದೆ ಔರಂಗಜೇಬ್, ಬಾಬರ್ ನಂತವರು ಹಿಂದುಗಳಿಗೆ ತೊಂದರೆ ಕೊಡುತ್ತಿದ್ದರು. ಈಗ ಅದೇ ಆಗ್ತಿದೆ. ಕಾಂಗ್ರೆಸ್ ನಿರ್ನಾಮ ಆಗ್ತಿದೆ. ಮುಂದೆ ಯಾವ ಸಿಎಂ, ಡಿಸಿಎಂ, ಗೃಹಮಂತ್ರಿಯೂ ಚುನಾವಣೆಯಲ್ಲಿ ಗೆಲ್ಲೋದಿಲ್ಲ ಎಂದು ಭವಿಷ್ಯ ನುಡಿದರು.
ಖಾಸಗಿ ಕಾರಲ್ಲಿ ಬಾಗಲಕೋಟೆ ಕಿಲ್ಲಾ ಓಣಿಗೆ ಹೋಗಿ ಅರೆಸ್ಟ್ ಮಾಡೋಕೆ ಹೋದ್ರಿ. ಜನ ಹೇಗೆ ನಿಮ್ಮ ಮೇಲೆ ಬಿದ್ರು ನೋಡಿದ್ರಲ್ಲಾ. ಜನ ರೋಷಿ ಹೋಗಿದ್ದಾರೆ. ಯಥಾ ರಾಜ ತಥಾ ಪೊಲೀಸ್ ಇಲಾಖೆ. ಎಸ್ಪಿಗೆ ಕಲ್ಲು ಬಿದ್ದಿರುವುದು ಇಡೀ ರಾಜ್ಯ ನೋಡಿದೆ. ಆದರೆ ಎಸ್ಪಿ ಏನೂ ಆಗಿಲ್ಲ ಎಂದು ಹೇಳುತ್ತಿದ್ದು, ನಾಚಿಕೆಯಾಗಬೇಕು. ಇಲ್ಲಿ ಎಸ್ಪಿಯ ಈ ಧೋರಣೆ ಯಾರು ಮೆಚ್ಚೋದಿಲ್ಲ. ರಾಜ್ಯ ಸರ್ಕಾರ ಹಿಂದೂಗಳ ಕ್ಷಮೆ ಕೇಳಬೇಕು. ಪೊಲೀಸ್ ಇಲಾಖೆಗೆ ಸರ್ಕಾರ ಒತ್ತಡ ಮಾಡುತ್ತಲೇ ಇರುತ್ತದೆ. ಅವರಿಗೂ ಕಾನೂನು ಗೊತ್ತಿರುತ್ತದೆ. ಯಾರದ್ದೋ ಒತ್ತಡ ಇದೆ ಎಂದು ಅಮಾಯಕರ ಮೇಲೆ ದೌರ್ಜನ್ಯ ನಡೆಸೋದಾ? ಎಸ್ಪಿ ಬಾಯಲ್ಲಿ ಪೀಡಿಂಗ್ ಬಾಟಲ್ ಇಟ್ಟಿದಾರಾ. ಅವರೇನು ಮಗು ನಾ. ತಾಕತ್ ಇದ್ದಿದ್ದರೆ ಕಲ್ಲು ಬಿದ್ದಾಗಲೇ ಅರೆಸ್ಟ್ ಮಾಡಬೇಕಿತ್ತು, ಆಗ ಗಂಡು ಅನ್ನಬಹುದಿತ್ತು. ಈ ದೇಶದ ಅನ್ನ ತಿನ್ನುತ್ತಿದ್ದೇನೆಂಬುದನ್ನು ರಾಜಕಾರಣಿಗಳು, ಅಧಿಕಾರಿಗಳು ಎಲ್ಲರಿಗೂ ಅನಿಸಬೇಕು. ಇವರ ಮನಸ್ಥಿತಿ ಬದಲಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರ ದಾಹಕ್ಕೆ ಅಭಿವೃದ್ಧಿ ಕುಂಠಿತ:
ಕಾಂಗ್ರೆಸ್‌ನಲ್ಲಿ ಮತ್ತೆ ಡಿನ್ನರ್ ಪಾರ್ಟಿ ವಿಚಾರ ಪ್ರಸ್ತಾಪಿಸಿದ ಈಶ್ವರಪ್ಪ ಅವರು, ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಕುರಿತು ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಅಧಿಕಾರ ದಾಹ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯನವರದ್ದು ಒಂದು, ಡಿಸಿಎಂ ಡಿಕೆಶಿ ಅವರದ್ದು ಒಂದು. ಕಾಂಗ್ರೆಸ್ಸಿಗರೆಲ್ಲ ಅಧಿಕಾರ ದಾಹದಲ್ಲಿದ್ದಾರೆ. ಈ ನಡುವೆ ದಲಿತ ಸಿಎಂ ಎಂದು ಹೇಳುತ್ತಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಮೇಲಿಂದ ಇಲ್ಲಿಯತನಕ ಏನ್ ಮಾಡಿದ್ರಿ? ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಅನುದಾನ ಬರುತ್ತಿಲ್ಲ, ಕ್ಷೇತ್ರಕ್ಕೆ ಬರಬೇಕಿದ್ದ ಅನುದಾನ ಕನ್ನಡಿಯ ಗಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಮ್ಮ ಘರ್ ವಾಪ್ಸಿ ವಿಚಾರದ ಕುರಿತು ಮಾತನಾಡಿ, ನನ್ನನ್ನು ಯಾವುದೇ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ.ಯಾವುದೇ ಬೆಳವಣಿಗೆ ನಡೆದಿಲ್ಲ ಸ್ಪಷ್ಟಪಡಿಸಿದರು.ಗಾಂಧಿ ಪ್ರತಿಮೆ ಪಕ್ಕ ಪ್ರತಿಭಟನೆ ನಡೆಸಲಿ: ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆ ವಿಚಾರ ಮುಂದೂಡುತ್ತಿದೆ. ಹಾಗಾಗಿ ಸಿಎಂ, ಡಿಸಿಎಂ ಇಬ್ಬರೂ ವಿಧಾನಸೌಧ ಗಾಂಧಿ ಪ್ರತಿಮೆ ಪಕ್ಕ ಪ್ರತಿಭಟನೆಗೆ ಕುಳಿತುಕೊಳ್ಳಿ, ಹೈಕಮಾಂಡ್ ನಿಮಗೆ ಒಪ್ಪಂದ ಆಗಿತ್ತಾ, ಇಲ್ವಾ ಅನ್ನೋದನ್ನ ಹೇಳಲಿ. ರಾಜ್ಯದ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಹೈಕಮಾಂಡ್ ಹೇಳಲಿ, ಹೈಕಮಾಂಡ್ ಸತ್ತಿದೆ, ಹೈ ಕಮಾಂಡ್‌ಗೆ ಹೃದಯ, ಕಣ್ಣು, ಕಿವಿ, ಮೂಗು ಇಲ್ಲದ ಮೂಗನಾ? ಹೈಕಮಾಂಡ್ ಹೇಳಿಕೆ ಕೊಡುವವರೆಗೆ ಗಾಂಧಿ ಪ್ರತಿಮೆ ಪಕ್ಕ ಸಿಎಂ ಹಾಗೂ ಡಿಸಿಎಂ ಧರಣಿ ಮಾಡಲಿ. ಕರ್ನಾಟಕದ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ಸಿಎಂ ಹೇಳ್ತಾರೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆಂದು. ಆದರೆ ಹೈಕಮಾಂಡ್ ಸತ್ತು ಹೋಗಿದೆ. ರಾಜ್ಯದಲ್ಲಿ ಸರಕಾರ ಇದೆ ಎಂದು ಯಾರಿಗೂ ಅನಿಸ್ತಿಲ್ಲ. ಎಲ್ಲರಿಗೂ ಅಧಿಕಾರದ ದಾಹ. ಸಿಎಂ ತನ್ನ ಸ್ಥಾನ ಉಳಿಸಿಕೊಳ್ಳಬೇಕೆಂಬ ದಾಹ. ಈ ಮಧ್ಯೆ ದಲಿತ ಮುಖ್ಯಮಂತ್ರಿ ಅಂತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು. ಯಾವಾಗ ತಮ್ಮ ಬುಡಕ್ಕೆ ಬೆಂಕಿ ಬಿತ್ತೋ ಈಗ ದಲಿತ ಸಿಎಂ ಅಂತಿದ್ದಾರೆ. ಅದು ಆಗೋದಲ್ಲ ಬಿಡೋದಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.