ಕಾಂಗ್ರೆಸ್‌ನದು ಪೇಮೆಂಟ್ ಸೀಟ್‌ ಸರ್ಕಾರ: ಗೋವಿಂದ ಕಾರಜೋಳ

KannadaprabhaNewsNetwork |  
Published : Aug 09, 2026, 03:00 AM IST
ಕಾರಜೋಳ | Kannada Prabha

ಸಾರಾಂಶ

ಸಚಿವರದು ಎಲ್ಲ ಪೇಮೆಂಟ್ ಸೀಟ್ ಎಂದು ಅವರ ಹಿರಿಯ ಶಾಸಕರು, ಮಾಜಿ ಮಂತ್ರಿಗಳೇ ಮಾತನಾಡುತ್ತಿದ್ದಾರೆ. ಯಾರಿಗೂ ಉಚಿತವಾಗಿ ಮಂತ್ರಿ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರ ಅಂದರೆ ಎಲ್ಲಾ ಪೇಮೆಂಟ್ ಎಂದು ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸಚಿವರದು ಎಲ್ಲ ಪೇಮೆಂಟ್ ಸೀಟ್ ಎಂದು ಅವರ ಹಿರಿಯ ಶಾಸಕರು, ಮಾಜಿ ಮಂತ್ರಿಗಳೇ ಮಾತನಾಡುತ್ತಿದ್ದಾರೆ. ಯಾರಿಗೂ ಉಚಿತವಾಗಿ ಮಂತ್ರಿ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರ ಅಂದರೆ ಎಲ್ಲಾ ಪೇಮೆಂಟ್ ಎಂದು ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

ಸಚಿವ ಸ್ಥಾನಕ್ಕೆ ಪೇಮೆಂಟ್ ಕುರಿತು ನಂಜಯ್ಯನಮಠ ತಿಮ್ಮಾಪುರ ಆಡಿಯೋ ವೈರಲ್ ವಿಚಾರಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಜನ ಗುಳೆ ಹೋಗುತ್ತಿದ್ದಾರೆ. ನಮ್ಮ ಲಮಾಣಿ ತಾಂಡಾಗಳು, ಎಸ್‌ಸಿ ಕೇರಿಗಳು ಖಾಲಿಯಾಗಿವೆ. ದನಕರುಗಳಿಗೆ ಕುಡಿಯಲು ನೀರಿಲ್ಲ, ಮೇವು ಇಲ್ಲ, ಜನರಿಗೆ ಉದ್ಯೋಗವಿಲ್ಲ. ಇಡೀ ರಾಜ್ಯದಲ್ಲಿ 27 ಜಿಲ್ಲೆಗಳಲ್ಲಿ ಬರ ತಾಂಡವವಾಡುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಮಳೆ ಆಗಬಹುದು ಎಂದು ಆಸೆಯಿಂದ ಬಿತ್ತನೆ ಮಾಡಿದ್ದ ರೈತರ ಪರಿಸ್ಥಿತಿಯಂತೂ ಹೇಳತೀರದು, ಬಿತ್ತನೆ ಮಾಡಿದ ಬೀಜ ಭೂಮಿಯಲ್ಲಿ ಕಮರಿಹೋಗಿದೆ. ಸಾಲಸೋಲ ಮಾಡಿಕೊಂಡ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಬರಪರಿಹಾರಕ್ಕೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಒಬ್ಬಗೂ ಕೂಲಿ ಕೆಲಸ ಕೊಟ್ಟಿಲ್ಲ. ದನಕರುಗಳಿಗೆ ಮೇವು ಬ್ಯಾಂಕ್ ತೆರದಿಲ್ಲ, ಗೋಶಾಲೆ ತೆರದಿಲ್ಲ. ಎಲ್ಲಾ ಜಿಲ್ಲೆಗಳಲ್ಲಿ ಬರಕಾಮಗಾರಿಗಾಗಿ ಒಂದು ₹100 ಕೋಟಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ ಗೋವಿಂದ ಕಾರಜೋಳ ಅವರು, ₹100 ಕೋಟಿ ಅಂದರೆ 8-10 ವಿಧಾನಸಭಾ ಕ್ಷೇತ್ರ ಇರುತ್ತವೆ. ಒಂದು ಕ್ಷೇತ್ರಕ್ಕೆ ₹8-10 ಕೋಟಿ ಬರುತ್ತದೆ. ಅದಕ್ಕೆ ಕೂಡಲೇ ಬಿಡುಗಡೆ ಹಣ ಬಿಡುಗಡೆ ಮಾಡಿ ಗೋಶಾಲೆ ಪ್ರಾರಂಭ ಮಾಡಬೇಕು, ಮೇವು ಬ್ಯಾಂಕ್ ತೆರೆಯಬೇಕು, ಕೃಷಿ ಕಾರ್ಮಿಕರಿಗೆ, ರೈತರಿಗೆ ಉದ್ಯೋಗ ಕೊಡುವ ಕೆಲಸ ಮಾಡಬೇಕು, ರೈತರಿಗೆ ಬೆಳೆ ಪರಿಹಾರ ಕೊಡುವ ಕೆಲಸವ ಕೂಡ ಮಾಡಬೇಕು. ರೈತರು ಹಣ ಕಟ್ಟಿ ಬೆಳೆವಿಮೆ ಮಾಡಿಸುವ ಪರಿಸ್ಥಿತಿಯಲ್ಲಿ ಇಲ್ಲ. ರೈತರ ಪಾಲಿನ ಬೆಳೆ ವಿಮೆಯನ್ನು ಸರ್ಕಾರವೇ ಕಟ್ಟಲಿ. ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ವಿಮೆ ಸಿಗುವುದರಿಂದ ಪರಿಹಾರ ಆಗುತ್ತದೆ. ರೈತರಿಗೆ ಸ್ವಲ್ಪ ಉಸಿರಾಡಿಸಲಿಕ್ಕೆ ಅನುಕೂಲ ಆಗುತ್ತದೆ ಎಂದು ಹೇಳಿದರು.

ಎರಡು ತಿಂಗಳು ತಿಣುಕಾಡಿ ಮಂತ್ರಿಮಂಡಲ ವಿಸ್ತರಣೆ ಮಾಡಿದರು. ವಾರ ಕಳೆದರೂ ಸಚಿವರಿಗೆ ಖಾತೆ ಹಂಚಿಕೆಯಾಗಿಲ್ಲ. ಯಾವ ಮಂತ್ರಿ ಯಾವ ಖಾತೆ, ಯಾವ ಮಂತ್ರಿ ಯಾವ ಜಿಲ್ಲೆಗೆ ಹೋಗಬೇಕು? ಆಡಳಿತದ ಮೇಲೆ ಬಿಗಿ ತಪ್ಪಿದೆ. ಜನ ರೋಸಿಹೋಗಿದ್ದಾರೆ ಎಂದು ಟೀಕಿಸಿದರು.

ಮೂರು ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಶತಾಯಗತಾಯ ಸಿದ್ದರಾಮಯ್ಯನವರನ್ನ ಕೆಳಗಿಳಿಸಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಭಂಡತನದಿಂದ ವಿಧಾನಸೌಧದಲ್ಲಿ ಕೂತಿದ್ದಾರೆ.

ಇಂತಹ ಕೆಟ್ಟ ಸರ್ಕಾರವನ್ನು ನನ್ನ 75 ವರ್ಷದ ಜೀವನದಲ್ಲಿ ನಾನು ನೋಡಿಯೇ ಇಲ್ಲ ಎಂದು ಗೋವಿಂದ ಕಾರಜೋಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪೌಷ್ಟಿಕತೆಯಿಂದ ಮಕ್ಕಳಲ್ಲಿ ರಕ್ತಹೀನತೆ, ಕಬ್ಬಿಣಾಂಶ ಕೊರತೆ: ಸದ್ಗುರು ಮಧುಸೂದನ ಸಾಯಿ
ಮುದ್ದೇಬಿಹಾಳದಲ್ಲಿ ಕಣ್ವಮಠಾಧೀಶರ ಭವ್ಯ ಶೋಭಾಯಾತ್ರೆ