ಕಣ್ವಮಠ, ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳ 7ನೇ ಚಾತುರ್ಮಾಸ್ಯ ಮಹೋತ್ಸವ ಮುದ್ದೇಬಿಹಾಳದಲ್ಲಿ ಶನಿವಾರ ಪ್ರಾರಂಭಗೊಂಡಿತು. ಈ ನಿಮಿತ್ತ ಶನಿವಾರ ಸುಕ್ಷೇತ್ರ ಯಲಗೂರ ಕೃಷ್ಣಾನದಿ ತೀರದಲ್ಲಿ ಶ್ರೀಗಳ ದಂಡೋದಕ ಸ್ನಾನ ಜರುಗಿತು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕಣ್ವಮಠದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳ 7ನೇ ಚಾತುರ್ಮಾಸ್ಯ ಮಹೋತ್ಸವ ಮುದ್ದೇಬಿಹಾಳದಲ್ಲಿ ಶನಿವಾರ ಪ್ರಾರಂಭಗೊಂಡಿತು.
ಈ ನಿಮಿತ್ತ ಶನಿವಾರ ಸುಕ್ಷೇತ್ರ ಯಲಗೂರ ಕೃಷ್ಣಾನದಿ ತೀರದಲ್ಲಿ ಶ್ರೀಗಳ ದಂಡೋದಕ ಸ್ನಾನ ಜರುಗಿತು. ನಂತರ ಮುದ್ದೇಬಿಹಾಳದಲ್ಲಿ ಶೋಭಾಯಾತ್ರೆ ಅಸಂಖ್ಯಾತ ಭಕ್ತಾಧಿಗಳೊಂದಿಗೆ ಜರುಗಿತು.
ಸ್ಥಳೀಯ ಗುರು ರಾಘವೇಂದ್ರ ಮಠದಲ್ಲಿ ರಾಘವೇಂದ್ರ ಸ್ವಾಮೀಜಿಗಳ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರಾರಂಭಗೊಂಡ ಶೋಭಾಯಾತ್ರೆ ವಿವಿಧ ವಾಧ್ಯ ವೈಭವಗಳೊಂದಿಗೆ ಕಣ್ವಮಠಾಧೀಶರಾದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳನ್ನು ಅಶ್ವಮೇಧ ರಥದಲ್ಲಿ ಕೂಡ್ರಿಸಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಾದ ಸಂಗೊಳ್ಳಿ ರಾಯಣ್ಣ ಸರ್ಕಲ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆಗುಂಟ ಹಾಯ್ದು ಮಾರುತಿ ನಗರದಲ್ಲಿರುವ ಶಿವಚಿದಂಬರೇಶ್ವರ ದೇವಸ್ಥಾನದವರೆಗೆ ಜರುಗಿತು.
ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಮಹಿಳಾ ಮಂಡಳದವರಿಂದ ಭಕ್ತಿಗೀತೆ, ಭಜನಾ ಪದ, ಕೋಲಾಟ ಜರುಗಿದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.