ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭೆಯಲ್ಲಿ ಸೋಮವಾರ ನಡೆದ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಸೌಭಾಗ್ಯ ಉಮೇಶ್ ಚುನಾಯಿತರಾಗಿದ್ದು, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಪರಾಭವಗೊಂಡರು.ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೌಭಾಗ್ಯ ಉಮೇಶ್ 13 ಮತ ಪಡೆದರೆ, ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬಂಡಾಯ ಸದಸ್ಯೆ ಕಲ್ಪನಾ ದೇವರಾಜು 11 ಮತ ಪಡೆದರು.
ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯ ಕೆ.ಸಿ.ಮಂಜುನಾಥ್ ರಾಜ್ಯ ಹೈಕೋರ್ಟ್ ಮೊರೆ ಹೋಗಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ತಡೆಯಾಜ್ಞೆ ತಂದಿದ್ದರು. ಇದರಿಂದ ಸೋಮವಾರ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಿತು.ಪಟ್ಟಣದ ಪುರಸಭೆ ಶಹರಿ ರೋಜ್‌ಗಾರ್ ಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಸೌಭಾಗ್ಯ ಉಮೇಶ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಲ್ಪನಾ ದೇವರಾಜು ನಾಮಪತ್ರ ಸಲ್ಲಿಸಿದರು.
ಪುರಸಭೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ 11, ಬಿಜೆಪಿ 1 ಮತ್ತು 1 ಪಕ್ಷೇತರ ಸದಸ್ಯರು. ಶಾಸಕ ಎಚ್.ಟಿ.ಮಂಜು ಸೇರಿ 24 ಸದಸ್ಯರು ಮತದಾನದ ಹಕ್ಕು ಹೊಂದಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಆದರ್ಶ ಮತ್ತು ಸಹಾಯಕ ಚುನಾವಣಾ ಅಧಿಕಾರಿ ಪುರಸಭೆ ಮುಖ್ಯಾಧಿಕಾರಿ ರಾಜು ವಠಾರ ಚುನಾವಣೆ ನಡೆಸಿದಾಗ ಕಾಂಗ್ರೆಸ್ ಅಭ್ಯರ್ಥಿ ಪರ ಕಾಂಗ್ರೆಸ್‌ನ ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ಎಚ್.ಎನ್.ಪ್ರವೀಣ, ಕೆ.ಆರ್.ರವೀಂದ್ರಬಾಬು, ಕೆ.ಬಿ.ಮಹೇಶ್, ಪಂಕಜ ಪ್ರಕಾಶ್, ಸುಗುಣ ರಮೇಶ್, ಖಮರುಲ್ಹಾ ಬೇಗಂ, ಅಭ್ಯರ್ಥಿ ಸೌಭಾಗ್ಯ ಉಮೇಶ್ ಸೇರಿ 9 ಹಾಗೂ ಜೆಡಿಎಸ್‌ನ ಪದ್ಮರಾಜು, ಇಂದ್ರಾಣಿವಿಶ್ವನಾಥ್, ಅಶೋಕ್ ಮತ್ತು ಪಕ್ಷೇತರ ಸದಸ್ಯ ತಿಮ್ಮೇಗೌಡ ಸೇರಿ 13 ಜನ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.
ಮೈತ್ರಿ ಅಭ್ಯರ್ಥಿ ಕಲ್ಪನ ದೇವರಾಜು ಪರ ಶಾಸಕ ಎಚ್.ಟಿ.ಮಂಜು, ಜೆಡಿಎಸ್‌ನ ಗಿರೀಶ್, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಬಣದಲ್ಲಿ ಗುರುತಿಸಿಕೊಂಡಿದ್ದ ಸದಸ್ಯರಾದ ಮಹದೇವಿ ನಂಜುಂಡ, ಗಾಯಿತ್ರಿ ಸುಬ್ಬಣ್ಣ, ಶುಭಗಿರೀಶ್, ಶೋಭಾ ದಿನೇಶ್, ಕೆ.ಎಸ್.ಪ್ರಮೋದಕುಮಾರ್, ಬಸ್ ಕೆ.ಎಸ್.ಸಂತೋಷ್‌ಕುಮಾರ್, ಎಚ್.ಆರ್.ಲೋಕೇಶ್, ಬಿಜೆಪಿಯ ಏಕೈಕ ಸದಸ್ಯ ನಟರಾಜು ಮತ್ತು ಅಭ್ಯರ್ಥಿ ಕಲ್ಪನಾ ದೇವರಾಜು ಸೇರಿ ಒಟ್ಟು 11 ಮಂದಿ ಬೆಂಬಲ ಸೂಚಿಸಿದರು.ಅಂತಿಮವಾಗಿ 13 ಸದಸ್ಯರ ಬೆಂಬಲ ಪಡೆದ ಸೌಭಾಗ್ಯ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ಆದರ್ಶ ಪ್ರಕಟಿಸಿದರು. ನಂತರ ಸೌಭಾಗ್ಯ ಅವರನ್ನು ಪುರಸಭೆ ಕಾಂಗ್ರೆಸ್ ಸದಸ್ಯರು ಸೇರಿದಂತೆ ತಾಲೂಕು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.