ಕಾಂಗ್ರೆಸ್‌ ಹಿಂದುಳಿದ ಜಾತಿಗಳಿಗೆ ಚಿಪ್ಪು ಕೊಡಲು ಹೊರಟಿದೆ: ಜೋಶಿ

KannadaprabhaNewsNetwork |  
Published : Apr 28, 2024, 01:20 AM IST
ಪ್ರಹ್ಲಾದ ಜೋಶಿ. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಹಣ ಸಂದಾಯವಾಗಿದೆ. ಆದರೆ, ಕಾಂಗ್ರೆಸ್ಸಿನವರು ಸುಳ್ಳು ಹೇಳಿ ಜನರನ್ನು ಕನ್ನಡಿಗ- ಕನ್ನಡಿಗ ತಾರತಮ್ಯ ಎಂದು ಮಾಡಲು ಹೊರಟಿದ್ದಾರೆ.

ಹುಬ್ಬಳ್ಳಿ:

ಕಾಂಗ್ರೆಸ್‌ ಸರ್ಕಾರ ಮುಸ್ಲಿಮರನ್ನು ಒಬಿಸಿಗೆ ಸೇರಿಸುವ ಮೂಲಕ ಅತ್ಯಂತ ಹಿಂದುಳಿದ ಜಾತಿಗಳಿಗೆ ಚಿಪ್ಪು ಕೊಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯ ಜಾತಿ ಅಲ್ಲ ಧರ್ಮವೂ ಅಲ್ಲ ಎಂದು ಬರೆದಿದ್ದಾರೆ. ಹಾಗಿದ್ದರೆ ಏನು? ಈ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳಿಗೆ ಪರಮ ಅನ್ಯಾಯ ಮಾಡುತ್ತಿದೆ ಎಂದರು.

ಏನು ಮಾಡಿದೆ ತಿಳಿಸಲಿ:

ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಹಣ ಸಂದಾಯವಾಗಿದೆ. ಆದರೆ, ಕಾಂಗ್ರೆಸ್ಸಿನವರು ಸುಳ್ಳು ಹೇಳಿ ಜನರನ್ನು ಕರ್ನಾಟಕ- ಕನ್ನಡಿಗ ತಾರತಮ್ಯ ಎಂದು ಮಾಡಲು ಹೊರಟಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷವು ದೇಶದಲ್ಲಿರುವ ಹಿಂದೂಗಳಿಗೆ ಏನು ಮಾಡಲು ಹೊರಟಿದೆ ಎಂಬುದನ್ನು ಹೇಳಲಿ ಎಂದು ವಾಗ್ದಾಳಿ ನಡೆಸಿದರು.

ಸಂಪೂರ್ಣ ದಿವಾಳಿ:

ನರೇಂದ್ರ ಮೋದಿ ಎಂದಿಗೂ ಕನ್ನಡಿಗರ ಪರವಾಗಿ‌ದ್ದಾರೆ. ಬರ ಅನುದಾನ ವಿಚಾರದಲ್ಲಿ ರಾಜಕೀಯ ಕಾರಣಕ್ಕೆ ಕಾಂಗ್ರೆಸ್ಸಿನವರು ಕೋರ್ಟಿಗೆ ಹೋಗಿದ್ದಾರೆ. ಇಂಡಿಯಾ ಅಲೈನ್ಸ್‌‌ನವರು ಕೋರ್ಟಿಗೆ ಹೋಗಿ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಸಂಪೂರ್ಣ ದಿವಾಳಿಯಾಗಿದೆ ಎಂದರು.

ಬ್ಲಾಕ್‌ ಮೇಲ್‌ ನಿಲ್ಲಿಸಿ:

ಮಲ್ಲಿಕಾರ್ಜುನ ಖರ್ಗೆ ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳಬೇಕು. ಅದನ್ನು ಬಿಟ್ಟು ನನ್ನ ಮಣ್ಣಿಗೆ ಬನ್ನಿ ಎಂದು ಜನರನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕಳೆದ 50 ವರ್ಷಗಳಲ್ಲಿ ಬಹುತೇಕ ಸಮಯ ಅಧಿಕಾರದಲ್ಲಿದ್ದಾರೆ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಪಕ್ಷ, ಖರ್ಗೆ ಅವರು ಆ ಭಾಗವನ್ನು ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ಈ ರೀತಿಯ ಭಾವನಾತ್ಮಕ ದಾಳ ಬಳಸುತ್ತಿದ್ದಾರೆ. ಜನರು ಇದಕ್ಕೆ ಮರುಳಾಗುವುದಿಲ್ಲ ಎಂದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?