ಕೋಮುಲ್‌ ಅವ್ಯವಹಾರ ತಡೆಗೆ ಕಾಂಗ್ರೆಸ್‌ ಬೆಂಬಲಿಸಿ

KannadaprabhaNewsNetwork |  
Published : Jun 05, 2025, 01:58 AM ISTUpdated : Jun 05, 2025, 01:59 AM IST
4ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮ ಪಂಃಯಲ್ಲಿ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ಶಾಸಕರಿಗೆ ಸಲ್ಲಿಸಲು ಮುಗಿಬಿದ್ದರು. | Kannada Prabha

ಸಾರಾಂಶ

ಡೇರಿ ಸಂಘಗಳು ನನಗೆ ಶಕ್ತಿ ನೀಡಿ ನಾನು ಹಾಲಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವೆ ನ್ಯಾಯಯುತವಾಗಿ ಸಲ್ಲಬೇಕಾದವರಿಗೆ ಹಣವನ್ನು ಧಕ್ಕುವಂತೆ ಮಾಡುವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಗೂ ಮೊದಲು ಕೊಟ್ಟ ಮಾತಿನಂತೆ ನಡೆದುಕೊಂಡು ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಮುಲ್‌ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ಎಲ್ಲ ಡೇರಿ ಸಂಘಗಳ ಪ್ರತಿನಿಧಿಗಳು ಕಾಂಗ್ರೆಸ್ ಪರ ನಿಂತರೆ ತಾವು ನ್ಯಾಯಕೊಡಿಸುವುದಾಗಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.ತಾಲೂಕಿನ ಕಾಮಸಮುದ್ರ ಗ್ರಾಪಂನಲ್ಲಿ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋಮುಲ್‌ನಲ್ಲಿ ರೈತ ಹೆಸರಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ,ಆದರೂ ಯಾವೊಬ್ಬ ಡೇರಿ ಸಂಘಗಳ ಅಧ್ಯಕ್ಷರು ಧ್ವನಿ ಎತ್ತದೆ ಮೌನಕ್ಕೆ ಜಾರಿದ್ದಾರೆ ಎಂದು ಟೀಕಿಸಿದರು.

ಭ್ರಷ್ಟಾಚಾರಕ್ಕೆ ಕಡಿವಾಣ

ಡೇರಿ ಸಂಘಗಳು ನನಗೆ ಶಕ್ತಿ ನೀಡಿ ನಾನು ಹಾಲಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವೆ ನ್ಯಾಯಯುತವಾಗಿ ಸಲ್ಲಬೇಕಾದವರಿಗೆ ಹಣವನ್ನು ಧಕ್ಕುವಂತೆ ಮಾಡುವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಗೂ ಮೊದಲು ಕೊಟ್ಟ ಮಾತಿನಂತೆ ನಡೆದುಕೊಂಡು ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಗ್ರಾಮೀಣ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದೆ ಎಂದರು.

ಅಧಿಕಾರವಿಲ್ಲದೆ ನರಳುತ್ತಿರುವ ವಿರೋಧ ಪಕ್ಷಗಳು ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಅಪಪ್ರಚಾರ ಮಾಡುತ್ತಿದೆ, ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅಭಿವೃದ್ದಿಗೆ ಅನುದಾನವಿಲ್ಲದೆ ಪರದಾಡುತ್ತಿದೆ ಎಂದು ಟೀಕೆ ಮಾಡುತ್ತಿದ್ದಾರೆ, ಆದರೆ ೫ ಗ್ಯಾರಂಟಿ ಯೋeಜೆಯೂ ಜಾರಿಯಲ್ಲಿದೆ ಅಭಿವೃದ್ದಿಯೂ ಪ್ರಗತಿಯಲ್ಲಿದೆ ಎಂಬುದಕ್ಕೆ ಕ್ಷೇತ್ರವೇ ಸಾಕ್ಷಿಯಾಗಿದೆ ಎಂದರು.

ಕೇಂದ್ರದಿಂದ ಪ್ರಯೋಜನವಾಗಿಲ್ಲ

ಆದರೆ ಕೇಂದ್ರ ಸರ್ಕಾರ ಮೂರು ಬಾರಿ ಅಧಿಕಾರಕ್ಕೆ ಬಂದರೂ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವುದೇ ಕೇಂದ್ರದ ಸಾಧನೆ ಎಂದು ಟೀಕಿಸಿದರು.ಪ್ರಧಾನಿ ಮೋದಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಚೆದಿನ್ ಬರಲಿದೆ ಎಂದು ಹೇಳಿದರು,ಅಚ್ಚೆದಿನ್ ಬಂತೇ,ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು ಕೊಟ್ಟರೆ ಇಲ್ಲ,ಚುನಾವಣೆ ಸಮಯದಲ್ಲಿ ಮಾತ್ರ ಶ್ರೀರಾಮನನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದರೆ,ಆದರೆ ನಾವು ಪ್ರತಿನಿತ್ಯ ಶ್ರೀರಾಮನನ್ನು ಸ್ಮರಣೆ ಮಾಡುವೆವು ಎಂದು ತಿರುಗೇಟು ಕೊಟ್ಟರು.ರಾಜ್ಯದಿಂದ ಒಂದೂರವೆ ಕೋಟಿ ತೆರಿಗೆ ಸಂಗ್ರಹಿಸಿ ಶೇ ೧೭ಪಸೆಂಟ್ ಕೊಟ್ಟರು.ಕಾಮಸಮುದ್ರ ಹೋಬಳಿಯ ಎಲ್ಲಾ ರಸ್ತೆಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದರು.ಟೀಕೆಗಳಿಗೆ ಜಗ್ಗದೆ ಅಭಿವೃದ್ದಿ ಮಾತ್ರ ನ್ನ ಗುರಿಯಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ಆದಿನಾರಾಯಣ(ಕುಟ್ಟಿ), ಉಪಾಧ್ಯಕ್ಷೆ ಗುಲ್ನಾಜ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ರಂಗನಾಥಚಾರಿ, ದೋಣಿಮಡಗು ಗ್ರಾಪಂ ಅಧ್ಯಕ್ಷೆ ಮಂಜುಳಾಜಯಣ್ಣ, ಜಿ.ವೆಂಕಟೇಶಗೌಡ, ಪಾರ್ಥಸಾರಥಿ, ಜೆಸಿಬಿ ನಾರಾಯಣಪ್ಪ,ಇಒ ರವಿಕುಮಾರ್, ಬಿಇಒ ಗುರುಮೂರ್ತಿ, ಸಿಡಿಪಿಒ ಮುನಿರಾಜು, ಗ್ರಾಪಂಃಸದಸ್ಯರಾದಮಹಹಾಲಕ್ಷ್ಮೀ,ನಾಗರಾಜ್ ರಾಜಮ್ಮ,ಬಾಬು, ಮಂಜುನಾಥ್ ಇಜ್ಜು ಇತರರು ಇದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ