ಗಂಗಾವತಿ : ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಜಯ ಸಾಧಿಸುವುದು ಖಚಿತ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಬಸಾಪಟ್ಟಣದಲ್ಲಿ ಜರುಗಿದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳೇ ಸಾಕ್ಷಿಯಾಗಿವೆ. ರಾಜ್ಯದಲ್ಲಿ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತದೆ. ಬಿಜೆಪಿ ಜನರಿಗೆ ಮೋಸ ಮಾಡುವ ಪಕ್ಷವಾಗಿದೆ ಎಂದು ದೂರಿದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರವಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸುತ್ತಿದೆ ಎಂದರು.
ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ಬಿಜೆಪಿ ನಾಯಕರು ತಮಗೆ ಮೋಸ ಮಾಡಿದ್ದಾರೆ. ಈ ಕಾರಣಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವುದಾಗಿ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಅವರಿಗೆ ಬೆಂಬಲಿಸ ಬೇಕೆಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಹಾಗೂ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಸದಸ್ಯರಾದ ಶೇಖ ನಬಿಸಾಬ್, ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಮಾತನಾಡಿದರು.
ಇದೇ ವೇಳೆ ನೂರಾರು ಜನರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಕಾಂಗ್ರೆಸ್ ಸೇರ್ಪಡೆ: ಕಾಂಗ್ರೆಸ್ ಸೇರ್ಪಡೆಗೊಂಡವರಲ್ಲಿ ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದ ದುರ್ಗಾಪ್ರಸಾದ್, ಅಯುಬ್ ಸಗರಿ, ನಗರಸಭೆ ಮಾಜಿ ಸದಸ್ಯೆ ಲೂಬಿನಾ ಯುಸುಫ್, ಮೆಹಬೂಬ ಭಾಷ ಮಸ್ಕಿ, ಶೇಖ್ ಅನ್ವರ್ ,ತಾರೀಕ್ ಪಾಟೀಲ್, ಲಕ್ಷ್ಮಣಸಿಂಗ್, ಕೆ.ಎಂ. ಸತೀಶಸ್ವಾಮಿ, ನಾಸೀರ ಅಹ್ಮದ್, ಹಮೀದ್, ಗೌಸ್, ಭಾಷಾ ಕನಕಗಿರಿ, ಅಟೋನಿ, ಗೌಸ್‌ಪಾಷಾ, ಅಸ್ಲಂ ಪಾಷಾ, ಭೀಮ್‌ಸಿಂಗ್, ಜಿಲಾನ್ ಪಾಷಾ, ಶಿರೀನ್, ಸುಮಾ ಬಸವರಾಜ, ಉಮಾದೇವಿ, ಖಾಜಾಬನಿ ಸೈಯ್ಯದ್ ರಸೂಲ್, ಗೌಸಿಯಾಬೇಗಂ ನಾಸೀರ ಅಹ್ಮದ್, ಷಷಾವಲಿ, ಮಂಜುನಾಥ, ಅಣ್ಣಪ್ಪ, ಎಸ್. ಪರಮೇಶ, ರಮೇಶಪ್ಪ, ಇಬ್ರಾಹಿಂ, ರಂಗಪ್ಪ ಟಿಸ್ಟಾಲ್, ಹನುಮಂತ ಲಮಾಣಿ, ದಸ್ತಗಿರಿ, ಮಾಸುಮ್, ಚಾಂದ್‌ಪಾಷಾ, ರಾಜೇಂದ್ರಸಿಂಗ್, ಮುತ್ತುರಾಜ ಸೇರ್ಪಡೆಯಾದರು.