ಅಂಬೇಡ್ಕರ್ ಚಿಂತನೆಗಳನ್ನು ಕಾಂಗ್ರೆಸ್ ನನಸು ಮಾಡುತ್ತಿದ್ದೆ: ಜಿ. ಎಚ್. ಶ್ರೀನಿವಾಸ್

KannadaprabhaNewsNetwork |  
Published : Apr 16, 2025, 12:33 AM IST
ಅ | Kannada Prabha

ಸಾರಾಂಶ

ಅಜ್ಜಂಪುರ, ಅಂಬೇಡ್ಕರ್ ಅವರ ಚಿಂತನೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ನನಸು ಮಾಡುತ್ತಿದ್ದೆ ಎಂದು ತರೀಕೆರೆ ಶಾಸಕ ಜಿ. ಎಚ್. ಶ್ರೀನಿವಾಸ್ ಹೇಳಿದರು.

ಅಜ್ಜಂಪುರ ಪಟ್ಟಣದಲ್ಲಿ 134 ನೇ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.

ಕನ್ನಡಪ್ರಭ ವಾರ್ತೆ, ಅಜ್ಜಂಪುರಅಂಬೇಡ್ಕರ್ ಅವರ ಚಿಂತನೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ನನಸು ಮಾಡುತ್ತಿದ್ದೆ ಎಂದು ತರೀಕೆರೆ ಶಾಸಕ ಜಿ. ಎಚ್. ಶ್ರೀನಿವಾಸ್ ಹೇಳಿದರು.

ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 134ನೇ ಜನ್ಮ ದಿನ ಹಾಗೂ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ಜಾರಿಗೆ ತಂದವರು ಅಂಬೇಡ್ಕರ್. ಎಲ್ಲಾ ಜನಾಂಗದ ಶಾಂತಿಯುತ ಜನಾಂಗದ ಹಕ್ಕುಗಳಿಗೆ ಧ್ವನಿಎತ್ತಿ ಸಮಾನತೆ ಕಲ್ಪಿಸಿದರು.

ಇಂದು ವಿಶ್ವ ಸಂಸ್ಥೆ ಅವರ ಜನ್ಮದಿನವನ್ನು ಜ್ಞಾನದ ಬೆಳಕಿನ ದಿನವೆಂದು ಸಾರಿದೆ. ಬಿಜೆಪಿಯವರಿಗೆ ಅವರ ಬಗ್ಗೆ ಗೌರವ ವಿದ್ದರೆ ಮೊದಲು ರಾಷ್ಟ್ರಮಟ್ಟದಲ್ಲಿ ಎಸ್ ಸಿ ಪಿ ಸಿ-ಟಿ ಎಸ್.ಪಿ ಕಾಯ್ದೆ ರೂಪಿಸಿ ಜಾರಿಗೆ ತರುವ ಧೈರ್ಯ ತೋರಿಸಲಿ ಎಂದರು. ಭದ್ರಾವತಿ ಉಪನ್ಯಾಸಕ ಕೆ. ಬಿ. ಕಿರಣ್ ಬಾಬು ಜಗಜೀವನ್ ರಾಮ್ ಭಾರತದ ಉಪ ಪ್ರಧಾನಿ ಯಾಗಿ ಕಾರ್ಮಿಕ ಸಮಿತಿ, ನಾಗರಿಕ ವಿಮಾನ ಸೌಕರ್ಯ ದಂತಹ ಹಲವುಗಳಿಗೆ ಉತ್ತೇಜನ ನೀಡಿ ವೈಜ್ಞಾನಿಕ ಹರಿಕಾರರಾಗಿದ್ದಾರೆ ಎಂದರು.

ಸಂಪರ್ಕ ಕ್ರಾಂತಿ, ಹೈನುಗಾರಿಕೆ ಜಾರಿಗೆ ತಂದ ಅವರು ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದರು. ಅದೇ ರೀತಿ ಹಿಂದೂ ಧರ್ಮ ಸುಧಾರಣೆ ಯಾಗದೆ ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ಸು ಕಾಣಲಾರದು ಎಂದು ಅಂಬೇಡ್ಕರ್ ಬಲವಾಗಿ ನಂಬಿದ್ದರು ಹಿಂದೂ ಧರ್ಮಕ್ಕೆ ಅಂಟಿಕೊಂಡಿದ್ದ ರೋಗಗಳಾದ ಜಾತಿಯತೆ, ಮೂಢನಂಬಿಕೆ, ಕಂದಾಚಾರಗಳಿಂದ ಬಿಡುಗಡೆ ಗೊಳಿಸಬೇಕೆಂದು ಅವರು ಪ್ರಾಮಾಣಿಕ ಪ್ರಯತ್ನ ನಡಿಸಿದ್ದರು. ಹಿಂದೂ ಧರ್ಮದ ಮೂಲ ಮನುಸೃತಿಯನ್ನು ನಾಶ ಮಾಡಬೇಕೆಂದು 1927ರಲ್ಲಿ ಅಲಿಖಿತ ಸಂವಿಧಾನ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕುವ ಮೂಲಕ ಸಾಮಾಜಿಕ ಪರಿವರ್ತನೆ ಚಳುವಳಿ ಜಾರಿಗೊಳಿಸಿದ್ದರು ಎಂದರು.

ಕಾರ್ಯಕ್ರಮಕ್ಕೆ ಮುನ್ನ ರಥದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಅಂತರ್ಜಾತಿ ವಿವಾಹವಾದ ದಂಪತಿ ಹಾಗೂ ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನ ಮಾಡಲಾಯಿತು.

ಈ ಸಭೆಯಲ್ಲಿ ತಾಲೂಕು ಪಂಚಾಯಿತಿ ನವೀನ್ ಸಂವಿಧಾನ ಪೀಠಿಕೆ ಓದಿದರು. ಅಜ್ಜಂಪುರ ತಾಲೂಕು ತಹಸೀಲ್ದಾರ್ ವಿನಾಯಕ ಸಾಗರ್‌, ಆಡಳಿತ ವೈದ್ಯಾಧಿಕಾರಿ ಎಂ. ಆರ್. ನಟರಾಜು, ಟಿ.ಜಿ. ರಮೇಶ್ ನೇತ್ರಾವತಿ ಡಿ.ಟಿ, ಜೆ.ಸಿ ನಟರಾಜ್, ನಗರ ಅಧ್ಯಕ್ಷ ತಿಪ್ಪೇಶ್ ಮಡಿವಾಳ, ಡಿಎಸ್ಎಸ್ ಮುಖಂಡರಾದ ಹೆಬ್ಬೂರು ಶಿವಣ್ಣ, ಮಹೇಂದ್ರ, ಮಸೂದ್ ಅಹಮದ್, ಅಂಗನವಾಡಿ ಕಾರ್ಯಕರ್ತೆ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...