ಸಂದರ್ಶನ: ಬಿ. ರಾಮಪ್ರಸಾದ್ ಗಾಂಧಿ
ನೂರಾರು ವರ್ಷ ಇತಿಹಾಸವಿರುವ ಕಾಂಗ್ರೆಸ್ಸಿಗೆ ತಾಲೂಕಿನ ಎರಡು ಬ್ಲಾಕ್‌ಗಳಿಗೆ ಹೊಸದಾಗಿ ಅಧ್ಯಕ್ಷರನ್ನು ಪಕ್ಷದ ಹೈಕಮಾಂಡ್ ನೇಮಕ ಮಾಡಿದೆ. ಹರಪನಹಳ್ಳಿ ಬ್ಲಾಕ್‌ಗೆ ಎಂ.ವಿ. ಅಂಜಿನಪ್ಪ ಹಾಗೂ ಚಿಗಟೇರಿ ಬ್ಲಾಕ್‌ಗೆ ಮೈದೂರು ಕುಬೇರಪ್ಪ ಅವರು ಸಾರಥ್ಯ ವಹಿಸಿಕೊಂಡಿದ್ದಾರೆ. ಇಂದು(ಶನಿವಾರ) ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಪದಗ್ರಹಣ ಮಾಡುತ್ತಿದ್ದಾರೆ.
ಎಂ.ವಿ. ಅಂಜಿನಪ್ಪ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದು, ಹರಪನಹಳ್ಳಿ ಪುರಸಭೆಗೆ 5 ಬಾರಿ ಸದಸ್ಯರಾಗಿದ್ದು, ಒಂದು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಎನ್‌ಎಸ್‌ಯುಐ ಹಾಗೂ ಯುತ್ ಕಾಂಗ್ರೆಸ್ ಸಂಘಟನೆ ಮಾಡಿದ್ದಾರೆ.ಮೈದೂರು ಕುಬೇರಪ್ಪ ಅವರು ಮಂಡಲ ಪಂಚಾಯಿತಿ ಸದಸ್ಯರಾಗಿ, ಗ್ರಾಪಂ ಅಧ್ಯಕ್ಷರಾಗಿ, ತಾಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಪಿ. ಪ್ರಕಾಶ ಅವರ ಜತೆಗೆ ಕಾಂಗ್ರೆಸ್ ಸೇರಿ ಇದೀಗ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಇಂದು (ಶನಿವಾರ) ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ಎಂ.ವಿ. ಅಂಜಿನಪ್ಪ ಅವರನ್ನು ಕನ್ನಡಪ್ರಭ ಮಾತನಾಡಿಸಿದಾಗ...1. ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಕ್ಕೆ ಏನನ್ನಿಸುತ್ತದೆ?
2. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂ.ಪಿ. ಲತಾ ಹಾಗೂ ಎನ್. ಕೊಟ್ರೇಶ ಮಧ್ಯೆ ಹಂಚಿಹೋಗಿದ್ದರು. ಒಂದುಗೂಡಿಸುವ ಪ್ರಯತ್ನ ನಡೆಸುತ್ತೀರಾ?
3. ಈ ಕುರಿತು ಶಾಸಕರು ಏನೆನ್ನುತ್ತಾರೆ?
4. ಲೋಕಸಭಾ ಚುನಾವಣೆ ಇದೆ. ಮುಂದೆ ತಾಪಂ, ಜಿಪಂ ಚುನಾವಣೆಗಳು ಬರಲಿವೆ. ಆದ್ದರಿಂದ ಕಾಂಗ್ರೆಸ್ ಸಂಘಟನೆಗೆ ಏನೇನು ಯೋಜನೆಗಳನ್ನು ಹಾಕಿಕೊಂಡಿದ್ದೀರಿ?
5. ಕಾಂಗ್ರೆಸ್ ಸಮಾವೇಶ ಮಾಡುವ ಯೋಜನೆ ಇದೆಯಾ, ಇದ್ದರೆ ಯಾವಾಗ?
6. ಹರಪನಹಳ್ಳಿ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಏನು ಹೇಳುತ್ತೀರಿ?
7. ಪುರಸಭಾ ಸದಸ್ಯರೂ ಆಗಿರುವ ನೀವು ಹರಪನಹಳ್ಳಿ ಪಟ್ಟಣದ ಅಭಿವೃದ್ಧಿ ಬಗ್ಗೆ ಹೇಳುವಿರಾ?
- ಹರಪನಹಳ್ಳಿ ಪಟ್ಟಣಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಡಿಪಿಆರ್ ಆಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಬಂದಿದೆ. ಈಗಾಗಲೇ ಟೆಂಡರ್ ಹಂತದಲ್ಲಿದೆ. ಕೆರೆಗಳ ಅಭಿವೃದ್ಧಿಗೆ ₹40 ಕೋಟಿ ಅನುದಾನ ಬಂದಿದೆ. ಹೀಗೆ ಶಾಸಕರು ಪಟ್ಟಣ ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.8. ಅಂತಿಮವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಏನು ಹೇಳುತ್ತೀರಿ?
- ಇನ್ನು ಮುಂದೆ ಬ್ಯಾಗ್‌ನವರು, ಅವರು ಇವರು ಎನ್ನುವಂತಿಲ್ಲ. ಇನ್ನು ಕೆಲವರು ಮುನಿಸಿಕೊಂಡವರನ್ನು ಮನವೊಲಿಸಿ ಜತೆಗೆ ಕರೆದುಕೊಂಡು ಕಾಂಗ್ರೆಸ್ ಸಂಘಟಿಸಿಸುವ ವಿಶ್ವಾಸ ನನಗಿದೆ.