- ಸ್ಟ್ರಾಂಗ್ ರೂಂ ಪ್ರಕರಣದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ - - -
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಿಜಕ್ಕೂ ನಾವು ಈ ಸಲ ಅತಿ ಹೆಚ್ಚು ಪ್ರಯತ್ನ ಮಾಡಿದ್ದೆವು. ಆದರೆ, ಹಣ, ಹೆಂಡದ ಜೊತೆಗೆ ಸೀರೆ ಹಂಚಿ ಕಾಂಗ್ರೆಸ್ ಗೆದ್ದಿದೆ ಎಂದು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಆರೋಪಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಬರಬೇಕಾಗಿದ್ದ ಮತಗಳೆಲ್ಲವೂ ಬಂದಿವೆ. ಆದರೆ, ಕಾಂಗ್ರೆಸ್ ಮೇಲೆ ಆಕ್ರೋಶಗೊಂಡಿದ್ದ ಮುಸ್ಲಿಂ ಸಮಾಜದಲ್ಲಿ ಕಡೆಗೂ 28 ಸಾವಿರ ಜನ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದರು.ಮುಸ್ಲಿಂ ಸಮುದಾಯ ಶಾಮನೂರು ಕುಟುಂಬದ ಎದುರು ಹೋರಾಟವನ್ನೇ ಮಾಡಲಿಲ್ಲ. ಇದೇ ಕಾರಣಕ್ಕೆ ದಕ್ಷಿಣದಲ್ಲಿ ನಮಗೆ ಸೋಲಾಯಿತು. ಕ್ಷೇತ್ರದ ಮತ ಎಣಿಕೆಗೆ ಮುನ್ನ ಸ್ಟ್ರಾಂಗ್ ರೂಂ ಬೀಗ ತೆಗೆಯುವ ಬದಲಿಗೆ, ಅದರ ಚಿಲಕಗಳನ್ನೇ ಒಡೆದು ಹಾಕಿದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಲಾಗುವುದು. ಆಗಿರುವ ತಪ್ಪು, ಪ್ರಮಾದಕ್ಕೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಅಂತಹ ಅಧಿಕಾರಿಗಳನ್ನು ಸರ್ಕಾರಿ ಸೇವೆಯಿಂದಲೇ ವಜಾ ಮಾಡಬೇಕು. ಈ ಬಗ್ಗೆಯೂ ಚುನಾವಣಾ ಆಯೋಗಕ್ಕೆ ನೀಡುವ ದೂರಿನಲ್ಲಿ ಒತ್ತಾಯಿಸುತ್ತೇವೆ ಎಂದು ಶ್ರೀನಿವಾಸ ದಾಸಕರಿಯಪ್ಪ ಪುನರುಚ್ಛರಿಸಿದರು.
-5ಕೆಡಿವಿಜಿ11: ಶ್ರೀನಿವಾಸ ದಾಸಕರಿಯಪ್ಪ.