ಕನ್ನಡಪ್ರಭ ವಾರ್ತೆ ಚೇಳೂರು
ಪಟ್ಟಣದ ಎಚ್.ವಿ.ಎನ್. ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೈತ ಕುಟುಂಬದಿಂದ ಬಂದ ಸುಬ್ಬಾರೆಡ್ಡಿ ಅವರು ಕಳೆದ 15 ವರ್ಷಗಳಿಂದ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಮೆಚ್ಚಿಯೇ ಕ್ಷೇತ್ರದ ಜನತೆ ಸತತ ಮೂರು ಬಾರಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜಕೀಯ ಲಾಭ-ನಷ್ಟದ ಆಚೆಗೂ ನಾವು ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತೇವೆ ಎಂದು ಸುಧಾಕರ್ ರೆಡ್ಡಿ ತಿಳಿಸಿದರು.ಮುಖಂಡ ಕಡ್ಡಿಲು ವೆಂಕಟರಮಣಪ್ಪ ಮಾತನಾಡಿ, ವಿರೋಧ ಪಕ್ಷದವರು ಏನೇ ಪಿತೂರಿ ನಡೆಸಿದರೂ ಸುಬ್ಬಾರೆಡ್ಡಿ ಅವರ ಮೇಲಿರುವ ಜನರ ಪ್ರೀತಿ- ವಿಶ್ವಾಸವನ್ನು ಕುಂದಿಸಲು ಸಾಧ್ಯವಿಲ್ಲ. ಕ್ಷೇತ್ರದ ಮಹಿಳೆಯರ ಮತ್ತು ಬಡವರ ಆಶೀರ್ವಾದ ಅವರ ಮೇಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಖಂಡಿತ ಜಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಆರ್. ರಾಮಾಂಜನೇಯ ರೆಡ್ಡಿ, ಪಿ.ಆರ್. ಚಲಂ, ಗುತ್ತಿಗೆದಾರ ಮುರಳಿ ಮೋಹನ್, ಸಹದೇವ ರೆಡ್ಡಿ, ಎಸ್. ಶ್ರೀನಿವಾಸ್ ರೆಡ್ಡಿ, ಎಚ್.ವಿ. ನಾರಾಯಣಸ್ವಾಮಿ, ಪಾತೂರು ಶಿವಶಂಕರರೆಡ್ಡಿ, ಕೆ.ಜಿ. ವೆಂಕಟರಮಣ, ರಾಧಾಕೃಷ್ಣ ಸ್ವಾಮಿ, ಡೈರಿ ಅಧ್ಯಕ್ಷ ಜೆ.ಎನ್. ಜಾಲರಿ, ರಾಮೋಜುಪಲ್ಲಿ ಶ್ರೀನಿವಾಸ್, ತಿಮ್ಮಣ್ಣ, ಫಾತಿಮಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.