ರೈತ, ಬಡವ ಬಲ್ಲಿದ, ದಲಿತರ ಪರ ಕಾಂಗ್ರೆಸ್‌ ಕೆಲಸ

KannadaprabhaNewsNetwork |  
Published : Aug 17, 2026, 03:30 AM IST
16ದಸಬಚಸದ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುನಗುಂದರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರ ಬಂದಿದೆ. ಅಂದು ರೈತರ, ಬಡವ ಬಲ್ಲಿದ, ದಲಿತ ಸೇರಿದಂತೆ ಎಲ್ಲರನ್ನೂ ಎತ್ತಿ ಹಿಡಿವ ಕೆಲಸ ದೇಶ ಮತ್ತು ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ದೆಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರ ಬಂದಿದೆ. ಅಂದು ರೈತರ, ಬಡವ ಬಲ್ಲಿದ, ದಲಿತ ಸೇರಿದಂತೆ ಎಲ್ಲರನ್ನೂ ಎತ್ತಿ ಹಿಡಿವ ಕೆಲಸ ದೇಶ ಮತ್ತು ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ದೆಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಟಿಸಿಎಚ್ ಕಾಲೇಜು ಆವರಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಬಾಗಲಕೋಟೆ ಹಾಗೂ ಪುರಸಭೆಯ ಕಾರ್ಯಾಲಯ ಆಶ್ರಯದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹ 3.50 ಕೋಟಿ ವೆಚ್ಚದ ಈಜು ಕೊಳದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹುನಗುಂದ ಪಟ್ಟಣಕ್ಕೆ ಬಹುದಿನಗಳ ಬೇಡಿಕೆಯಾದ ಯುವಕರಿಗೆ, ಮಕ್ಕಳಿಗೆ ಈಜುಗಳ ಅವಶ್ಯಕತೆ ಇತ್ತು. ನದಿ ಬಾವಿಗಳಲ್ಲಿ ಈಜುಲು ಹೋಗಿ ಅಹಿತಕರ ಘಟನೆಯಾಗದ ಹಿತ ದೃಷ್ಠಿಯಿಂದ ಈಜುಗೊಳ ನಿರ್ಮಿಸಲಾಗುತ್ತಿದೆ. 18 ತಿಂಗಳಲ್ಲಿ ಈ ಕಾಮಗಾರಿ ಮುಗಿಯಲಿದೆ. ನಾನೇ ಮತ್ತೆ ಉದ್ಘಾಟಿಸುತ್ತೇನೆ.

ಹುನಗುಂದ ಪಟ್ಟಣಕ್ಕೆ ಎಲ್ಲಾ ಸೌಕರ್ಯಗಳು ಒದಗಿಸಬೇಕು. ಯಾವುದೇ ಯೋಜನೆಯಿಂದ ವಂಚಿತ ಆಗಬಾರದು. ಮುಖ್ಯವಾಗಿ ತಾಲೂಕು ಕೇಂದ್ರವಾಗಿದೆ. ಹುನಗುಂದಕ್ಕೆ ₹ 42 ಕೋಟಿ ವೆಚ್ಚದ ದಿನದ 24 ಗಂಟೆ ಮನೆ ಮನೆಗೂ ಕುಡಿಯುವ ನೀರಿನ ಕಾಮಗಾರಿ ಮುಗಿಯುವ ಹಂತದಲ್ಲಿದೆ. ₹ 43 ಕೋಟಿಯ ಒಳಚರಂಡಿ ಯೋಜನೆ ಮಂಜೂರಾಗಿದೆ. ₹ 11 ಕೋಟಿ ವೆಚ್ಚದಲ್ಲಿ ಅಮೃತ-2 ಕುಡಿಯುವ ನೀರಿನ ಆರಂಭವಾಗಲಿದೆ.ಕೃಷ್ಣ ನದಿಯಿಂದ ಶಾಶ್ವತವಾಗಿ 170 ಹಳ್ಳಿಗೆ ₹ 135 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಹುನಗುಂದಲ್ಲಿ ಕೆರೆ ನಿರ್ಮಿಸಲಾಗುವುದು. ಹುನಗುಂದಕ್ಕೆ 50 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ₹ 19 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡಲಾಗಿದೆ. ಇನ್ನೂ 140 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡುತ್ತೇನೆ. ಮತಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣ, ಕೃಷಿ ನೀರಾವರಿ, ಮೂಲಭೂತ ಸೌಕರ್ಯಗಳನ್ನು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

2018ರಲ್ಲಿ ಮಂಜೂರಾದ ಇಂದಿರಾ ಕ್ಯಾಂಟಿನ ಹಿಂದಿನ ಸರ್ಕಾರ ಆರಂಭಿಸಲಿಲ್ಲ. ಮತ್ತೆ 2023ರಲ್ಲಿ ಅಧಿಕಾರಕ್ಕೆ ಬಂದು ಬಡವರಿಗೆ, ನಿರ್ಗತಿಕರಿಗೆ ವಿದ್ಯಾರ್ಥಿಗಳಿಗೆ ಕಡಿಮೆ ಹಣದಲ್ಲಿ ಉಪಹಾರ ನೀಡಿ ಅನುಕೂಲವಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಎ.ಕೆ.ಉಪನಾಳ, ಶಿವಾನಂದ ಕಂಠಿ, ಸಂಗಣ್ಣ ಗಂಜೀಹಾಳ, ಬಸವರಾಜ ಗದ್ದಿ, ದೇವು ಡಂಬಳ, ಸಿದ್ದಪ್ಪ ಹೊಸೂರ, ಮಹಾಂತೇಶ ಅವಾರಿ, ಜಬ್ಬಾರ ಕಲಬುರ್ಗಿ, ಶರಣು ಬೆಲ್ಲದ, ತಹಸೀಲ್ದಾರ್‌ ಪ್ರದೀಪಕುಮಾರ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ತಾಪಂ ಇಒ ಮುರಳೀಧರ ದೇಶಪಾಂಡೆ ಇತರರಿದ್ದರು.ಕೊಟ್ಟು ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನು ಅಲ್ಲ. ನಾನು ಧೀರನು ಹೌದು, ಶೂರನೂ ಹೌದು..! ಎಂದು ನೇರವಾಗಿ ವಿರೋಧಿ ಪಕ್ಷದವರಿಗೆ ಟಾಂಗ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾವಳಗಿ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಬರಹಗಾರರು ಸದಾ ಕಲಿಯುವ ವಿನಯ ಉಳಿಸಿಕೊಳ್ಳಿ