ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಗುರುವಾರ ಮತಯಾಚನೆ ಆಗಮಿಸಿದ್ದ ಅವರು, ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೊದಲು ಪಂಜಾಬಿನಲ್ಲಿ ಮುನ್ಸಿಪಾಲ್ಟಿ ಚುನಾವಣೆ ಗೆದ್ದು ತೋರಿಸಲಿ. ಎಂಎಲ್‌ಎ ಚುನಾವಣೆಗೆ ನಿಂತು ಸೋತಿರುವ ವ್ಯಕ್ತಿ ಅವರು. ಮೋದಿ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸೇರ್ಪಡೆ ಹೈಕಮಾಂಡ್‌ಗೆ ಬಿಟ್ಟ ವಿಷಯ. ನಾನು ದುಂಬಾಲು ಬೀಳುವುದಿಲ್ಲ. ಯೋಗ್ಯ, ಒಳ್ಳೆಯವನು ಎಂದರೆ ತೆಗೆದುಕೊಳ್ಳಲಿ. ಇಲ್ಲದಿದ್ದರೆ ಬಿಡಲಿ. ಅಲವತ್ತುಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಹೊರಗಡೆ ಹಾಕಿದ್ದರಿಂದ ಪಕ್ಷಕ್ಕೂ ನಷ್ಟವಾಗಿಲ್ಲ, ನನಗೂ ನಷ್ಟವಾಗಿಲ್ಲ. ಯತ್ನಾಳರನ್ನ ತೆಗೆದುಕೊಳ್ಳದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಇವರೆಲ್ಲ ಹೇಳುತ್ತಾರಲ್ಲ ಎಂದು ಜೊತೆಗಿದ್ದ ಸಿ.ಸಿ.ಪಾಟೀಲ, ಸಿದ್ದು ಸವದಿ, ಅರವಿಂದ ಬೆಲ್ಲದ ಕಡೆಗೆ ತೋರಿಸಿ, ಆಗ ನೋಡೋಣ ಎಂದರು.ಯಾವುದೇ ಕಾರಣಗಳಿಂದ ಉಚ್ಚಾಟನೆಯಾಗಿರಬಹುದು. ಬಿಜೆಪಿ, ಹಿಂದೂ ಸಮಾಜ ರಕ್ಷಣೆಯಾಗಬೇಕು. ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯಿಂದ ಜಗತ್ತಿನಲ್ಲೇ ಒಳ್ಳೆಯ ಕೆಲಸ ಆಗುತ್ತಿದೆ. ಬಿಜೆಪಿಯಿಂದ ಉಚ್ಚಾಟನೆಯಾದರೂ ಎಲ್ಲ ನಾಯಕರೊಂದಿಗೆ ಒಳ್ಳೆಯ ಸಂಬಂಧವಿದೆ ಎಂದು ತಿಳಿಸಿದರು.ವಿಧಾನಸಭೆಯಲ್ಲಾಗಲಿ, ವಿರೋಧ ಪಕ್ಷದ ನಾಯಕರಾಗಲಿ, ಪಕ್ಷದ ಮುಖಂಡರು ಸೇರಿಯೇ ಯಾವ ವಿಷಯ ಮಾತನಾಡಬೇಕು ಎಂದು ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವುದು, ಬ್ಲಾಕ್‌ಮೇಲ್ ಮಾಡುವುದು ನನ್ನ ಸ್ವಭಾವವಲ್ಲ. ಪೂಜ್ಯ ತಂದೆಯವರು, ಮಗನಿಗೆ ಬೈಯ್ಯಬಾರದು ಎಂದು ಹೇಳಿದ್ದಾರೆ, ಬೈಯ್ಯುವುದಿಲ್ಲ. ಏ.9ರವರೆಗೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ಮುಂದೇನು ಬದಲಾಗುತ್ತದೆಯೋ ನೋಡೋಣ ಎಂದರು.
ಕಾಂಗ್ರೆಸ್ಸಿನ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದು ನನ್ನ ಧರ್ಮ ಅಲ್ಲ. ನಾನು ಎಂದೂ ಬಿಜೆಪಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ. ಬಿಜೆಪಿಯಿಂದ ಶಾಸಕ ಆಗಿದ್ದೇನೆ. ಹಿಂದೆ ನಾನು ಎಂಎಲ್ಸಿ ಆಗಿದ್ದಾಗ ಇದೇ ಎಂ.ಬಿ.ಪಾಟೀಲ ನನ್ನ ಸಿದ್ದರಾಮಯ್ಯ ಬಳಿ ಕರೆದುಕೊಂಡು ಹೋಗಿದ್ದರು. ಆಗ ಪರಿಷತ್ ಸಭಾಪತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ತೆಗೆದುಕೊಂಡು ಬಂದಿದ್ದರು. ಅವಿಶ್ವಾಸದ ಪರ ಮತ ಹಾಕಿದರೆ ನನಗೆ ಸಿಂದಗಿಯಲ್ಲಿ ಕಾಂಗ್ರೆಸ್ ಟಿಕೆಟ್ ಮತ್ತು ಎಷ್ಟು ಬೇಕು ಅಷ್ಟು ಅನುದಾನ ಕೊಡುವ ಭರವಸೆ ನೀಡಿದ್ದರು. ಆದರೆ, ನಾನು ಆಗಲ್ಲ. ನಾನು ಮೂಲ ಬಿಜೆಪಿ. ಏನೋ ಕಾರಣಕ್ಕೆ ಹೊರಗೆ ಹಾಕಿದ್ದಾರೆ ಎಂದಿದ್ದೆ.