ಷಡಾಧಾರ ಪ್ರತಿಷ್ಠೆ, ಶಿಲಾಕುಂಭ ಸ್ಥಾಪನೆ

KannadaprabhaNewsNetwork |  
Published : Jul 15, 2026, 03:00 AM IST
13ಹಿರೇಬೆಟ್ಟು | Kannada Prabha

ಸಾರಾಂಶ

ಇಲ್ಲಿನ ಹಿರೇಬೆಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯ ಪ್ರಮುಖ ಘಟ್ಟವಾದ ಶ್ರೀ ದೇವರ ಷಡಾಧಾರ ಪ್ರತಿಷ್ಠೆ ಹಾಗೂ ಶಿಲಾಕುಂಭ ಸ್ಥಾಪನೆ ವಿಜೃಂಭಣೆಯಿಂದ ನೆರವೇರಿತು.

ಮಣಿಪಾಲ: ಇಲ್ಲಿನ ಹಿರೇಬೆಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯ ಪ್ರಮುಖ ಘಟ್ಟವಾದ ಶ್ರೀ ದೇವರ ಷಡಾಧಾರ ಪ್ರತಿಷ್ಠೆ ಹಾಗೂ ಶಿಲಾಕುಂಭ ಸ್ಥಾಪನೆ ವಿಜೃಂಭಣೆಯಿಂದ ನೆರವೇರಿತು.

ಕ್ಷೇತ್ರದ ತಂತ್ರಿಗಳಾದ ಡಾ. ಸತ್ಯಕೃಷ್ಣ ಭಟ್ ಮಂಗಳೂರು ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಪಂಚಗವ್ಯ ಶುದ್ಧಿ, ಪುಣ್ಯಾಹವಾಚನ, ಗಣಹೋಮ ಹಾಗೂ ವಾಸ್ತುಪೂಜೆ ಸೇರಿದಂತೆ, ಷಡಾಧಾರ ಪ್ರತಿಷ್ಠೆ ಇತ್ಯಾದಿ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.

ನೂರಾರು ಭಕ್ತರು ತಮ್ಮ ಭಕ್ತಿ ಸಮರ್ಪಣೆ ಸಂಕೇತವಾಗಿ ಶಿಲಾಕಂಭದಲ್ಲಿ ಬೆಳ್ಳಿ, ಚಿನ್ನ ಹಾಗೂ ಅಮೂಲ್ಯ ರತ್ನಗಳನ್ನು ಸಮರ್ಪಿಸಿದರು. ದೇವಳದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಿ. ನಾಯಕ್ ಬೆಲ್ಪತ್ರೆ, ಖಜಾಂಚಿ ಚಂದ್ರಶೇಖರ್ ನಾಯಕ್, ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಪ್ರಮುಖರಾದ ಕುತ್ಯಾರ್ ನವೀನ್ ಶೆಟ್ಟಿ, ಜಯರಾಜ್ ಹೆಗ್ಡೆ ಮಣಿಪಾಲ, ನಟರಾಜ್ ಹೆಗ್ಡೆ ಹಿರಿಯಡ್ಕ, ಜಯಪ್ರಕಾಶ್ ಹೆಗ್ಡೆ ಶಿವಪುರ, ಪದಾಧಿಕಾರಿಗಳಾದ ಸೀತಾರಾಮ್ ಭಟ್, ನಿತ್ಯಾನಂದ ನಾಯಕ್, ಸುಂದರ ಮೂಲ್ಯ, ಚಂದ್ರಯ್ಯ ಆಚಾರ್ಯ, ಗುರುನಂದ ನಾಯಕ್, ಗುರುದಾಸ್ ಭಂಡಾರಿ, ಕೇಶವ್ ಭಂಡಾರಿ, ಮುರಳೀಧರ್ ಲಾಗ್ವಂಕರ್, ಪಾಂಡುರಂಗ ಲಾಗ್ವಾಂಕರ್, ಶಿಲ್ಪಿ ಕುಪ್ಪುಸ್ವಾಮಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನೆರವಿಗೆ ಬಾರದೇ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ: ನಿಖಿಲ್‌ ಕುಮಾರಸ್ವಾಮಿ
ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖ