ಕುಷ್ಟಗಿ: ವೈದ್ಯ ವೃತ್ತಿಯನ್ನು ಉದ್ಯೋಗವೆಂದು ಭಾವಿಸದೆ ಸೇವೆಯೆಂದು ಭಾವಿಸುವ ಮೂಲಕ ಉತ್ತಮ ಕಾರ್ಯ ಮಾಡಬೇಕು ಎಂದು ನಿವೃತ್ತ ವೈದ್ಯ ಡಾ. ಕೆ.ಎಸ್.ರೆಡ್ಡಿ ಅಭಿಪ್ರಾಯಪಟ್ಟರು.
ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ಉತ್ತಮ ಆರೈಕೆ ಮಾಡಬೇಕು ಎಂದ ಅವರು, ನಾನು ಇಲ್ಲಿ ಅನೇಕ ವರ್ಷಗಳ ಕೆಲಸ ಮಾಡಿದ್ದು, ಇಲ್ಲಿನ ಸಿಬ್ಬಂದಿಗಳ ಸಹಕಾರ ಉತ್ತಮವಾಗಿತ್ತು ಹೊಸದಾಗಿ ಬಂದಿರುವ ವೈದ್ಯರಿಗೆ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.
ವೈದ್ಯ ಡಾ.ಚಂದ್ರಶೇಖರ ದಂಡಿ ಮಾತನಾಡಿ ಪಾದರಸದಂತೆ ಪ್ರತಿ ಕ್ಷಣವೂ ಸದಾ ರೋಗಿಗಳ ಬಗ್ಗೆ ಚಿಂತನೆ ಮಾಡುವ ಗುಣವುಳ್ಳ ರೆಡ್ಡಿ ಅವರು ಇನ್ನಷ್ಟು ದಿನ ಇಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗಿತ್ತು ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರ, ಬಾಲಾಜಿ ಬಳಿಗಾರ ಮಾತನಾಡಿದರು.
ಇಲಾಖೆ ಪರವಾಗಿ ವೈದ್ಯರು ಡಾ.ಕೆ.ಎಸ್.ರೆಡ್ಡಿಯವರನ್ನು ಸನ್ಮಾನಿಸಿ ಗೌರವಿಸಿದರು ಹಾಗೂ ಪತ್ರಕರ್ತರ ಸಂಘದವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರವಿಂದ್ರ ಬಾಕಳೆ, ತಾಲೂಕಾಧ್ಯಕ್ಷ ಪವಾಡೆಪ್ಪ ಚೌಡ್ಕಿ, ಪ್ರಧಾನ ಕಾರ್ಯದರ್ಶಿ ಅನಿಲಕುಮಾ ಕಮ್ಮಾರ, ಶರಣಪ್ಪ ಲೈನದ, ಭೀಮಸೇನರಾವ್ ಕುಲಕರ್ಣಿ,ಸಂಗಮೇಶ ಲೂತಿಮಠ, ಭೀಮನಗೌಡ ಮಂಡಲಮರಿ ಸೇರಿದಂತೆ ಅನೇಕರು ಇದ್ದರು.