ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ: ಸಂಸದ ಬೊಮ್ಮಾಯಿ

KannadaprabhaNewsNetwork |  
Published : Feb 24, 2026, 03:30 AM IST
23ಹೆಚ್‌ವಿಆರ್2ಬಸವರಾಜ ಬೊಮ್ಮಾಯಿ  | Kannada Prabha

ಸಾರಾಂಶ

ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ವಿರುದ್ಧ ಪಡ್ಯಂತ್ರ ನಡೆದಿದೆ. ಒತ್ತಾಯಪೂರ್ವಕವಾಗಿ ಅವರಿಗೆ ಹಣ ನೀಡುವ ಪ್ರಯತ್ನ ನಡೆದಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ವಿರುದ್ಧ ಪಡ್ಯಂತ್ರ ನಡೆದಿದೆ. ಒತ್ತಾಯಪೂರ್ವಕವಾಗಿ ಅವರಿಗೆ ಹಣ ನೀಡುವ ಪ್ರಯತ್ನ ನಡೆದಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಚಂದ್ರು ಲಮಾಣಿ ಅವರ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಜನರು ಬಂದಿರುತ್ತಾರೆ. ಹೀಗಾಗಿ ಅದರಲ್ಲಿ ಯಾವುದೂ ಸ್ಪಷ್ಟತೆ ಇಲ್ಲ. ಲೋಕಾಯುಕ್ತರು ಕೇಸ್ ಹಾಕಿದ್ದಾರೆ. ತನಿಖೆ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಒಬ್ಬ ಯುವ ವೈದ್ಯರು ಒಳ್ಳೆಯ ಕೆಲಸ ಮಾಡುತ್ತಿರುವಾಗ ಒಂದು ಕರಿ ನೆರಳು ಅವರ ಸೇವೆಗೆ ಅಡ್ಡಿಯಾಗಿದೆ. ಯಾವುದೇ ಒಬ್ಬರ ಸಾರ್ವಜನಿಕರ ಜೀವನವನ್ನು ಪಡ್ಯಂತ್ರದಿಂದ ಮುಗಿಸುವ ಕೆಲಸವನ್ನು ಯಾರೂ ಪೋತ್ಸಾಹ ಮಾಡಬಾರದು ಎಂದರು.ಎಸ್ಸಿಗಳಿಗೆ ಸಿಎಂ ಸ್ಥಾನ ಕೊಡಬೇಕು ಅನ್ನುವ ಮಾತನಾಡುತ್ತಾರೆ. ಸಿದ್ದರಾಮಯ್ಯ, ಮಹದೇವಪ್ಪ ಕಾಂಗ್ರೆಸ್‌ಗೆ ಆಮದು ಆದವರು. ಬಸವಲಿಂಗಪ್ಪ, ರಂಗನಾಥವರು, ಖರ್ಗೆಯವರು ಬಹಳಷ್ಟು ಘಟಾನುಘಟಿಗಳು ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತ ಬಂದಿದ್ದಾರೆ. ಎಪ್ಪತೈದು ವರ್ಷಗಳಿಂದ ದಲಿತರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತ ಬಂದಿದ್ದಾರೆ. ದಲಿತರ ಋಣದಲ್ಲಿ ಇರುವಂತ ಕಾಂಗ್ರೆಸ್‌ನವರು ಅವರನ್ನು ಸಿಎಂ ಮಾಡಬೇಕು. ನಿಜವಾಗಲೂ ರಾಜಕೀಯ ಬದ್ಧತೆ ಇದ್ದರೆ, ಕಾಂಗ್ರೆಸ್ ದಲಿತರ ಹಕ್ಕನ್ನು ಕೊಡಬೇಕು. ಅದು ಭಿಕ್ಷೆಯಲ್ಲ. ದಲಿತರಿಗೆ ಮೂಗಿಗೆ ತುಪ್ಪ ಸವರುವ ಮೂಲಕ ದಲಿತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಎಸ್ಪಿ ವರ್ಗಾವಣೆ ಮಾಡಬೇಕು: ಬಾಗಲಕೋಟೆಯಲ್ಲಿ ನಡೆದ ಗಲಾಟೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಲಾಟೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ. ಮಸೂತಿ (ಮಸೀದಿ)ಯಿಂದ ಕಲ್ಲು, ಚಪ್ಪಲಿ ಬಿದ್ದಿದೆ. ಅದನ್ನು ಯಾರು ಮಾಡಿದ್ದಾರೆ. ಪೊಲಿಸರು ಒಂದು ಸೈಡ್ ಬಂಧನ ಮಾಡುವುದು. ಪ್ರಮುಖರನ್ನು ಬಿಟ್ಟು ಬಂಧನ ಮಾಡುವುದು. ಪಿತೂರಿ ಹಿಂದಿರುವವರನ್ನು ಬಿಟ್ಟು ಇತರರನ್ನು ಬಂಧಿಸಿದರೆ ಪಿತೂರಿ ಮಾಡುವವರು ಮುಂದೆಯೂ ಮಾಡುತ್ತಾರೆ. ತುಷ್ಠೀಕರಣ ಮಾಡುವ ಮೂಲಕ ಹಿಂದೂಗಳ ಹಬ್ಬ, ಮೆರವಣಿಗೆ, ಶಿವಾಜಿ ಜಯಂತಿ, ಗಣೇಶ ಜಯಂತಿ ಕಾರ್ಯಕ್ರಮಗಳಲ್ಲಿ ನಿರಂತರ ಗಲಾಟೆ ಮಾಡಿಸುವುದು ನಡೆಯುತ್ತಿದೆ. ಬಾಗಲಕೋಟೆ ಎಸ್ಪಿಗೆ ಏಟು ಬಿದ್ದು ರಕ್ತ ಬರುತ್ತಿದ್ದರೂ ನನಗೇನು ಆಗಿಲ್ಲ ಎಂದು ಹೇಳುತ್ತಾರೆ. ಮೊದಲು ಅಲ್ಲಿನ ಎಸ್ಪಿ ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳನ್ನು ವರ್ಗ ಮಾಡಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಕ್ತರ ಮನಸ್ಸಿನಲ್ಲಿ ಸಿದ್ದಲಿಂಗ ಶ್ರೀಗಳು ಶಾಶ್ವತ: ಗವಿಮಠದ ಬಸವಲಿಂಗ ಶ್ರೀಗಳು
ಅಬಕಾರಿ ಇಲಾಖೆ ಕಾರ್ಯಾಚರಣೆ: 2 ಟ್ಯಾಂಕರ್ ಸೇರಿ ₹90 ಲಕ್ಷ ಮೌಲ್ಯದ ಸ್ವತ್ತು ಜಪ್ತಿ