ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ಜಿಲ್ಲೆಯ ಕೊಡೇಕಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2024ರ ಬೈ ಎಲೆಕ್ಷನ್ಗೆಂದು ಹುಣಸಗಿಗೆ ಅವರು ಬಂದಿದ್ದಾಗ ನಾನು ಒಂದು ಕಡೆ ಭಾಷಣ ಮಾಡಿದ್ದೆ. ಸಿದ್ದರಾಮಣ್ಣ ಬಹಳ ಹುಷಾರಾಗಿರು. ನಿನ್ನ ಪಕ್ಕ ಇರುವವರೇ ನಿನ್ನ ಕುರ್ಚಿ ಮೇಲೆ ಪ್ರೀತಿ ಇಟ್ಟಿದ್ದಾರೆ. ನಿನ್ನ ಮೇಲೆ ಪ್ರೀತಿ ಇಲ್ಲ, ಕುರ್ಚಿ ಮೇಲೆ ಪ್ರೀತಿ. ನೀನು ಹುಷಾರು, ನಿನ್ನದೇ ಸಿಡಿ ಮಾಡುತ್ತಾರೆ ನೋಡು ಎಂದಿದ್ದೆ. ಇವತ್ತು ಸ್ಟಿಂಗ್ ಆಪರೇಷನ್ ಮಾಡಿ ವೀಡಿಯೋ ಮಾಡಿದ್ದಾರೆ ಅಂತ ಸುದ್ದಿ ಇದೆ. ಅವರು ಸ್ಟೇ ತಗೊಂಡಿದ್ದಾರೆ ಎಂದು ರಾಜೂಗೌಡ ತಿಳಿಸಿದರು.
ಸಿದ್ದರಾಮಣ್ಣನಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ, ನೀವು ಸ್ಟೇ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾರೂ ಏನೇ ಹೇಳಿದರೂ ಜನ ನಿಮ್ಮ ವಿರುದ್ಧ ಇಂತಹ ಆರೋಪಗಳಿಗೆ ನಂಬುವುದಿಲ್ಲ. ನಾನೊಬ್ಬ ಬಿಜೆಪಿಯವನಾಗಿ ಹಾಗೂ ನಿಮ್ಮ ವಿರೋಧ ಪಕ್ಷದವನಾಗಿ ಹೇಳುತ್ತಿದ್ದೇನೆ, ನಿಮ್ಮ ಕಾಂಗ್ರೆಸ್ ಪಕ್ಷದವರೇ ನಿನ್ನ ವಿರುದ್ಧ ಈ ತರಹ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ಇಳಿಸಿದ್ದಾರೆ ಅಂತ ನಮಗೆ ಗೊತ್ತಿದೆ ಎಂದರು.ಸಿದ್ದರಾಮಯ್ಯನವರ ಹೆಸರು ಮೇಲೆ ಅಧಿಕಾರಕ್ಕೆ ಬಂದ ಸರ್ಕಾರ ಬಳಿಕ ಅವರನ್ನು ಅರ್ಧದಾರಿಯಲ್ಲೇ ಇಳಿಸಿದ್ದಾರೆ. ಗುಲ್ಬರ್ಗದಲ್ಲಿ ಅವಮಾನ ಮಾಡಿ, ಅವರ ಪುತ್ಥಳಿ ತೆಗೆಸಿದ್ದಾರೆ. ಈಗ ಸ್ಟಿಂಗ್ ಆಪರೇಷನ್ ಮುಖಾಂತರ ಅವರ ತೇಜೋವಧೆ ಮಾಡುವಂತಹ ಕೆಲಸ ಅವರ ಸರ್ಕಾರದವರೇ ಮಾಡುತ್ತಿದ್ದಾರೆ ಎಂದು ರಾಜೂಗೌಡ ಆರೋಪಿಸಿದರು.