ಕೆಲವರಿಂದ ಹೊಸ ಸಂವಿಧಾನ ಜಾರಿಗೆ ತರುವ ಸಂಚು: ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ

KannadaprabhaNewsNetwork |  
Published : Feb 01, 2025, 12:00 AM IST
ನಮ್ಮನಡೆ ಸರ್ವೋದಯದಕಡೆಗೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ವಿವಿಧ ಮಠಗಳ ಮಠಾಧೀಶರು | Kannada Prabha

ಸಾರಾಂಶ

ಭಾರತ ದೇಶದ ಸಂವಿಧಾನ ಪವಿತ್ರವಾಗಿದ್ದು ಅಂತಹ ಸಂವಿಧಾನವನ್ನು ಹಿಂದಕ್ಕೆ ಹಾಕಿ ಹೊಸ ಸಂವಿಧಾನವನ್ನು ಜಾರಿಗೆ ತರುವ ಸಂಚು ಕೆಲವರಿಂದ ನಡೆಯುತ್ತಿದೆ. ಇಂತಹ ಸಂಚು ಜಾರಿಗೆ ಬರುವ ಮುನ್ನ ನಾವು ಜಾಗರೂಕರಾಗಬೇಕಾಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಮ್ಮ ನಡೆ ಸರ್ವೋದಯದ ಕಡೆಗೆ ಪಾದಯಾತ್ರೆ ಸಮಾರೋಪ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಭಾರತ ದೇಶದ ಸಂವಿಧಾನ ಪವಿತ್ರವಾಗಿದ್ದು ಅಂತಹ ಸಂವಿಧಾನವನ್ನು ಹಿಂದಕ್ಕೆ ಹಾಕಿ ಹೊಸ ಸಂವಿಧಾನವನ್ನು ಜಾರಿಗೆ ತರುವ ಸಂಚು ಕೆಲವರಿಂದ ನಡೆಯುತ್ತಿದೆ. ಇಂತಹ ಸಂಚು ಜಾರಿಗೆ ಬರುವ ಮುನ್ನ ನಾವು ಜಾಗರೂಕರಾಗಬೇಕಾಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಂತೆಬೆನ್ನೂರು ಗ್ರಾಮದ ಎಸ್.ಎಸ್.ಜೆ.ವಿ.ಪಿ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಗುರುವಾರ ರಾತ್ರಿ ಸಾಣೇಹಳ್ಳಿಯಿಂದ ಸಂತೆಬೆನ್ನೂರು ಗ್ರಾಮದ ವರೆಗೆ 4 ದಿನಗಳಿಂದ ಹಮ್ಮಿಕೊಂಡಿದ್ದ ನಮ್ಮ ನಡೆ ಸರ್ವೋದಯದ ಕಡೆಗೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಡಾ.ಬಿ.ಆರ್.ಅಂಬೇಡ್ಕರ್ ಹಲವಾರು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ನಂತರ ಭಾರತ ದೇಶಕ್ಕೆ ಬೇಕಾದಂತಹ ವಿಶೇಷವಾದಂತಹ ಸಂವಿಧಾನವನ್ನು ನೀಡಿದ್ದಾರೆ ಇಂತಹ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು ಎಂದರು.

ನಮ್ಮ ದೇಶ ಮತ್ತು ರಾಜ್ಯಗಳಲ್ಲಿ ಪರಿಸರ ಜಾಗೃತಿ, ಕೃಷಿಯ ಬಗ್ಗೆ ಮರುಚಿಂತನೆ, ಆರೋಗ್ಯ, ಶಿಕ್ಷಣದಲ್ಲಿ ಪರಿವರ್ತನೆ ಮತ್ತು ರಾಜಕೀಯ ಕ್ಷೇತ್ರದ ಸುಧಾರಣೆ ಈ ಐದು ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣ ಬೇಕಾದರೆ ಜನರಲ್ಲಿ ಅರಿವು ಮತ್ತು ಜನ ಜಾಗೃತಿಯಾಗಬೇಕು. ಪ್ರತಿಯೊಬ್ಬರು ಸರ್ವೋದಯದ ತತ್ವಗಳನ್ನು ಅರಿತು ಬುದ್ದ, ಬಸವ, ಗಾಂಧಿ ಇಂತವರ ಮಾರ್ಗದಲ್ಲಿ ಮುನ್ನಡೆಯುವ ಮನಸ್ಸನ್ನು ಮಾಡಬೇಕು ಎಂದರು.

ನಮಗೆ ಬೇಕಾಗಿರುವುದು ಆರೋಗ್ಯವೋ, ಐಶ್ವರ್ಯವೋ, ಅಧಿಕಾರವೋ, ಆನಂದವೋ, ಶಾಂತಿಯೋ, ನೆಮ್ಮದಿಯೋ ಎಂಬ ಚಿಂತನೆ ಮಾಡಿ ಧೃಡ ಹೆಜ್ಜೆಗಳನ್ನಿಡಬೇಕು ಎಂದರು.

ಆ ನಿಟ್ಟಿನಲ್ಲಿ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಯಿಂದ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ವರೆಗೆ ಪಾಯಯಾತ್ರೆಯ ಮೂಲಕ ಸರ್ವೋದಯ ತತ್ವಗಳು ಜಾರಿಗೆ ಬರುವಂತೆ ಮಾಡುವುದಾಗಿದೆ ಎಂದು ನುಡಿದರು.

ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಮಹಾಸ್ವಾಮಿಗಳು ಮಾತನಾಡಿ, ಸರ್ವೋದಯ ತತ್ವಗಳನ್ನು ಜಾರಿ ಗೊಳಿಸಲು ದೇಶದ ಪ್ರತಿಯೊಬ್ಬ ನಾಗರಿಕನು ತತ್ವ ಸಿದ್ದಾಂತಗಳನ್ನು ತಿಳಿದು ಕೊಂಡು ಮುನ್ನಡೆದಾಗ ಅರಿವು ಜಾಗೃತಿ ಮೂಡುವ ಜೋತೆಗೆ ಬದಲಾವಣೆ ಸಾಧ್ಯ ಎಂದು ಹೇಳುತ್ತ ಇಂತಹ ಪಾದಯಾತ್ರೆಯು ಧಾರವಾಡದಲ್ಲಿ ನಿಯೋಜನೆಗೊಂಡಿದೆ ಎಂದರು.

ಮಾಡಾಳು ನಿರಂಜನ ಪೀಠದ ರುದ್ರಮುನಿ ಶ್ರೀ, ಮಂಡ್ಯದ ಓಂಕಾರೇಶ್ವರ ಸ್ವಾಮೀಜಿ, ಚಿತ್ರದುರ್ಗದ ಬಸವ ಮೂರ್ತಿ ಸ್ವಾಮೀಜಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮಹಿಮಾ ಜೆ.ಪಟೇಲ್, ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್, ಜಯದೇವ್, ಆರ್.ಜಿ.ಹಳ್ಳಿ ನಾಗರಾಜ್, ವಡ್ನಾಳ್ ಜಗದೀಶ್, ತೇಜಸ್ವಿ ವಿ.ಪಟೇಲ್, ಎಂ.ಸಿದ್ದಪ್ಪ, ಜಿ.ರಂಗನಾಥ್, ಕೆ.ಎಜಾಜ್ ಆಹ್ಮದ್, ಬಸವರಾಜ್, ಮಲ್ಲಿಕಾರ್ಜುನ್, ಎಂ.ಡಿ.ಗುಜ್ಜಾರ್, ಮಂಜಪ್ಪ, ಗ್ರಾ.ಪಂ ಅಧ್ಯಕ್ಷೆ ರೇಣುಕಮ್ಮಮೂರ್ತಪ್ಪ, ಮೀನಾಕ್ಷಮ್ಮ, ಕರಿಯಪ್ಪ, ಕೆ.ಸಿದ್ದಲಿಂಗಪ್ಪ, ಸಿರಾಜ್ ಆಹ್ಮದ್, ಕೆ.ಪಿ.ಮಹೇಶ್, ಎಂ.ಬಿ.ನಾಗರಾಜ್, ಎಸ್.ಜೆ.ಕಿರಣ್ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ